ಈ ದೇಶ ಅಪ್ಪನ ಆಸ್ತಿಯೇ ?

ಗಾಂಧಿ ಕುಟುಂಬದ ಮೇಲೆ ನಟ ರಿಷಿ ಕಪೂರ್ ಟೀಕೆ
ಮುಂಬಯಿ : ದೇಶದ ಅನೇಕ ಸ್ಥಳಗಳಿಗೆ ಮತ್ತು ರಾಷ್ಟ್ರೀಯ ಸಂಪತ್ತಿನ ಮೇಲೆ ಕಾಂಗ್ರೆಸ್ ಸರಕಾರವು ನೆಹರೂ, ಗಾಂಧಿ ಇವರ ಹೆಸರೇ ಇಟ್ಟಿರುವುದರಿಂದ, ನಟ ರಿಷಿ ಕಪೂರ್ ಇವರು ಟ್ವಿಟ್ ಮೂಲಕ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ದೇಶವನ್ನು ಅಪ್ಪನ ಆಸ್ತಿಯೆಂದು ತಿಳಿದಿದ್ದಾರೆಯೇ ? ಎಂದು ಟೀಕಿಸುತ್ತಾ, ಈ ದೇಶದ ಸಂಪತ್ತುಗಳಿಗೆ ನೀಡಲಾಗಿರುವ ಹೆಸರನ್ನು ಮರುನಾಮಕರಣ ಮಾಡುವಂತೆ ಕೋರಿದರು. ನಟ ಅನುಪಮ ಖೇರ ಇವರು ರಿಷಿ ಕಪೂರ್ ಇವರ ಬೇಡಿಕೆಯನ್ನು ಶ್ಲಾಘಿಸಿ ಸಮರ್ಥಿಸಿದರು.
ರಿಷಿ ಕಪೂರ್ ಇವರ ಟ್ವಿಟ್ ಸಂದೇಶ
೧. ಇಂದಿರಾ ಗಾಂಧಿ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇದೇ ಹೆಸರೇಕೆ ? ಮಹಾತ್ಮಾ ಗಾಂಧಿ, ಭಗತ ಸಿಂಗ್, ಡಾ. ಅಂಬೇಡ್ಕರ ಅಥವಾ ರಿಷಿ ಕಪೂರ್ ಈ ಹೆಸರುಗಳೇಕಿಲ್ಲ ? ಇದೆಂತಹ ಕೀಳು ಮಾನಸಿಕತೆ ?
೨. ಕಲ್ಪನೆ ಮಾಡಿರಿ. ದೇಶದ ಇನ್ನಿತರ ಸ್ಥಳಗಳಿಗೆ ಮಹಮ್ಮದ ರಫಿ, ಕಿಶೋರಕುಮಾರ, ಮನ್ನಾಡೇ, ಮುಕೇಶ ಇವರ ಹೆಸರನ್ನು ನೀಡಿದ್ದರೆ, ಎಷ್ಟು ಚೆನ್ನಾಗಿತ್ತು ! ಅರ್ಥಾತ್ ಇದು ಕೇವಲ ನನ್ನ ಸಲಹೆ ಅಷ್ಟೇ !
೩. ಮುಂಬಯಿಯ ಫಿಲ್ಮ್‌ಸಿಟಿಗೆ ದಿಲೀಪಕುಮಾರ, ದೇವ ಆನಂದ, ಅಶೋಕಕುಮಾರ ಅಥವಾ ಅಮಿತಾಭ ಬಚ್ಚನ್ ಇವರ ಹೆಸರು ಇರಬೇಕಾಗಿತ್ತು. ಈ ರಾಜೀವಗಾಂಧಿ ಉದ್ಯೋಗ ಎಂದರೇನು ? ಮಿತ್ರರೇ, ಸ್ವಲ್ಪ ಆಲೋಚಿಸಿರಿ.
೪. ದೇಶದ ಮಹತ್ವದ ಸ್ಥಳಗಳಿಗೆ ದೇಶಕ್ಕಾಗಿ ತ್ಯಾಗ ಮಾಡಿರುವವರ ಹೆಸರನ್ನು ಹಾಕಬೇಕು. ಪ್ರತಿಯೊಂದು ವಿಷಯಕ್ಕೂ ಗಾಂಧಿಯವರ ಹೆಸರೇಕೆ ? ನನಗೆ ಒಪ್ಪಿಗೆಯಿಲ್ಲ. ಜನರೇ, ಸ್ವಲ್ಪ ವಿಚಾರ ಮಾಡಿರಿ.
೫. ದೆಹಲಿಯ ಮಾರ್ಗಗಳ ಹೆಸರನ್ನು ಬದಲಾಯಿಸಬಹುದಾದರೆ, ಕಾಂಗ್ರೆಸ್ಸಿನ ಮುಖಂಡರ ಹೆಸರಿನಲ್ಲಿರುವ ದೇಶದ ಸಂಪತ್ತಿನ ಹೆಸರನ್ನು ಬದಲಾಯಿಸಲು ಸಾಧ್ಯವಿಲ್ಲವೇ ? ನಾನು ಚಂದೀಗಢ ದಲ್ಲಿದ್ದೆನು, ಅಲ್ಲಿಯೂ ರಾಜೀವ ಗಾಂಧಿಯವರ ಹೆಸರು. ಹೀಗೇಕೆ ?
೬. ದೇಶದ ಸಂಪತ್ತಿನ ಮೇಲೆ ಗಾಂಧಿ ಪರಿವಾರ ದವರ ಹೆಸರನ್ನಿಡುವುದನ್ನು ಕಾಂಗ್ರೆಸ್ ನಿಲ್ಲಿಸಬೇಕು. ಬಾಂದ್ರಾ-ವರ್ಲಿ ಸೇತುವೆಯ ಹೆಸರನ್ನು ಲತಾ ಮಂಗೇಶ್ಕರ ಅಥವಾ ಜೆ.ಆರ್.ಡಿ. ಟಾಟಾ ಮಾರ್ಗ ಎಂದು ಇಡಬೇಕಾಗಿತ್ತು. ಇದೇನು ಅಪ್ಪನ ಆಸ್ತಿಯೆಂದು ತಿಳಿದಿದ್ದಾರೆಯೇ ?
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೇಕೆನ್ನಿಸಿದಾಗಲೆಲ್ಲ ಉಪಯೋಗಿಸಿ ಟೀಕಿಸುವ ಕಾಂಗ್ರೆಸ್ ತಮ್ಮ ಮೇಲೆ
ಟೀಕೆಯಾದಾಗ ಮಾತ್ರ ಇಂತಹ ಪ್ರಶ್ನೆಗಳನ್ನು ಕೇಳುತ್ತದೆ !
ಗಾಂಧಿ ಮನೆತನದವರ ಬಗ್ಗೆ ಮಾತನಾಡಲು ರಿಷಿ ಕಪೂರ್
ಯಾರು ? - ಕಾಂಗ್ರೆಸ್ಸಿನ ಪ್ರಶ್ನೆ
ನೆಹರೂ, ಗಾಂಧಿಗಳ ಹೆಸರನ್ನು ಬದಲಾಯಿಸುವ ಬೇಡಿಕೆಯನ್ನು ಮಾಡುವ ರಿಷಿ ಕಪೂರ್ ಯಾರು? ಎನ್ನುವ ಪ್ರಶ್ನೆಯನ್ನು ಕಾಂಗ್ರೆಸ್ ಕೇಳಿದೆ. (ರಿಷಿ ಕಪೂರ್ ಈ ದೇಶದ ಒಬ್ಬ ನಾಗರಿಕರಾಗಿದ್ದಾರೆ ಮತ್ತು ಪ್ರತಿಯೊಬ್ಬ ನಾಗರಿಕನಿಗೆ ಅವರ ಅಭಿಪ್ರಾಯವನ್ನು ಮಂಡಿಸುವ ಅಧಿಕಾರವಿದೆ. ಪ್ರಜಾಪ್ರಭುತ್ವಕ್ಕಾಗಿ ಯಾವಾಗಲೂ ಬಾಯಿ ತೆರೆಯುವ ಕಾಂಗ್ರೆಸ್ ಇಂತಹ ಪ್ರಶ್ನೆಯನ್ನು ಕೇಳಿ ಅಧಿಕಾರವನ್ನು ಚಲಾಯಿಸುತ್ತಿದೆ ! - ಸಂಪಾದಕರು)
ಕಾಂಗ್ರೆಸ್ ಮುಖಂಡರಾದ ಪಿ.ಸಿ. ಚಾಕೋ ಇವರು ಮಾತನಾಡುತ್ತಾ,
೧. ಕೆಲವರು ಭಾಜಪ ಸರಕಾರದ ಗುಡ್‌ಬುಕ್‌ನಲ್ಲಿ ಸೇರ್ಪಡೆಗೊಳ್ಳಲು ತಪ್ಪು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂದಿರಾ ಮತ್ತು ರಾಜೀವ ಗಾಂಧಿ ಇವರು ಈ ದೇಶಕ್ಕಾಗಿ ಬಹಳ ತ್ಯಾಗ ಮಾಡಿದ್ದಾರೆ. ದೇಶಕ್ಕಾಗಿ ಅವರು ಪ್ರಾಣವನ್ನೇ ಬಲಿದಾನ ಮಾಡಿದ್ದಾರೆ. (ಇಂದಿರಾ ಮತ್ತು ರಾಜೀವ ಇವರು ದೇಶಕ್ಕಾಗಿ ಪ್ರಾಣವನ್ನು ನೀಡಿಲ್ಲ, ಅವರ ರಾಜಕೀಯ ಸ್ವಾರ್ಥದಿಂದ ಮತ್ತು ತಪ್ಪು ನಿರ್ಣಯಗಳಿಂದ ಪ್ರಾಣ ಕಳೆದುಕೊಳ್ಳಬೇಕಾಯಿತು - ಸಂಪಾದಕರು)
೨. ದೇಶದಲ್ಲಿರುವ ಅನೇಕ ಜನರು ಇಂದಿರಾ ಮತ್ತು ರಾಜೀವ ಗಾಂಧಿಯನ್ನು ಗೌರವಿಸುತ್ತಾರೆ. (ಗೌರವಿಸುತ್ತಾರೆಂದು ದೇಶದ ಎಲ್ಲ ಸರಕಾರಿ ಯೋಜನೆ ಮತ್ತು ಸ್ಥಳಗಳಿಗೆ ಅವರ ಹೆಸರಿಡಬೇಕೆಂಬ ನಿಯಮವಿದೆಯೇ ? ದೇಶದ ಜನರು ಸ್ವಾತಂತ್ರ್ಯ ಸೈನಿಕರು, ಕ್ರಾಂತಿಕಾರರನ್ನು ಸಹ ಗೌರವಿಸುತ್ತಾರೆ. ಅದಕ್ಕೇನು ? - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಈ ದೇಶ ಅಪ್ಪನ ಆಸ್ತಿಯೇ ?