ನಮ್ಮಲ್ಲಿ ದೇವರೇ ಇಲ್ಲ, ಷಣ್ಮುಖ ಹೊರ ದೇಶದಿಂದ ಬಂದವ ! (ನಂತೆ)

ನಿಡುಮಾಮಿಡಿ ಮಹಾಸಂಸ್ಥಾನದ ಶ್ರೀ ವೀರಭದ್ರ ಚೆನ್ನಮಲ್ಲ 
ಸ್ವಾಮೀಜಿಯ ಧರ್ಮದ್ರೋಹಿ ಹೇಳಿಕೆ !
ದೇವರ ಅನುಭೂತಿಯನ್ನು ಪಡೆಯದೇ ಮನಸ್ಸಿಗೆ ಹೊಳೆದಂತೆ ಒಟಗುಟ್ಟುವ ಸ್ವಾಮಿಗಳು
ಹಿಂದೂಗಳಿಗೇನು ದಿಶೆ ನೀಡುವರು ?  
ಮೌಲ್ವಿಗಳು ಪ್ರವಾದಿಗಳ ಬಗ್ಗೆ ಎಂದಾದರೂ ಇಂತಹ ಹೇಳಿಕೆ ನೀಡುತ್ತಾರಾ ?
ಮೈಸೂರು : ನಾವು ದೇವತೆಗಳೆಂದು ಪೂಜಿಸುತ್ತಿರುವ ಶಿವ, ಪಾರ್ವತಿ, ಷಣ್ಮುಖ ಅನೇಕ ದೇವತೆಗಳು ಯಾರೂ ದೇವರಲ್ಲ. ಅವರೆಲ್ಲ ಚರಿತ್ರೆಯ ಐತಿಹಾಸಿಕ ವ್ಯಕ್ತಿಗಳು. ನಮ್ಮಂತೆಯೇ ಒಂದು ಕಾಲಘಟ್ಟದಲ್ಲಿ ಬದುಕಿ ಸಮಾಜ ಸೇವೆ ಮಾಡಿ ಮಡಿದವರು ಎಂಬ ಧರ್ಮದ್ರೋಹಿ ಹೇಳಿಕೆಯನ್ನು ನಿಡುಮಾಮಿಡಿ ಮಹಾಸಂಸ್ಥಾನದ ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮೀಜಿಯವರು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ ನೀಡಿದರು.
(ಹಿಂದೂಗಳಲ್ಲಿ ಹಿಂದೂ ದೇವತೆಗಳ ವಿಷಯದಲ್ಲಿ ಭ್ರಮೆಯನ್ನುಂಟು ಮಾಡುವ ಸ್ವಾಮಿಗಳು ತಮ್ಮೊಂದಿಗೆ ಇತರರನ್ನೂ ಅಧೋಗತಿಯೆಡೆಗೆ ಕೊಂಡೊಯ್ಯುತ್ತಿದ್ದಾರೆ ! ಶಿವ-ಪಾರ್ವತಿಯರು ಉಚ್ಚ ದೇವತೆಗಳಾಗಿದ್ದಾರೆ. ಅನಾದಿ ಕಾಲದಿಂದಲೂ ಅವರ ಪೂಜೆ-ಅರ್ಚನೆ ಮತ್ತು ಭಕ್ತಿಯನ್ನು ಮಾಡಲಾಗುತ್ತಿದೆ; ಏಕೆಂದರೆ ಅನೇಕ ಸಂತರು, ಭಕ್ತರು ಸಾಧನೆಯನ್ನು ಮಾಡಿ ಅನುಭೂತಿ ಪಡೆದಿದ್ದಾರೆ ! -ಸಂಪಾದಕರು)
. ಸ್ವಾಮಿಯವರು ಮುಂದೆ ಮಾತನಾಡುತ್ತಾ ಹೀಗೆಂದರು, ದೇಶಕ್ಕೆ ಆರ್ಯರು ಬಂದಂತಹ ಸಂದರ್ಭದಲ್ಲಿದ್ದ ಈ ದೇಶದ ಮೂಲ ಸಂಸ್ಕೃತಿ ದ್ರಾವಿಡರ ನಾಯಕನಾಗಿದ್ದವನು ರುದ್ರ. (‘ಆರ್ಯರು ಹೊರಗಿನಿಂದ ಬಂದರು’, ಎಂಬುದು ನಿರಾಧಾರ ಮತ್ತು ಸುಳ್ಳು ಪ್ರಚಾರ ಮಾಡುವ ಬ್ರಿಟಿಷರ ತತ್ತ್ವಜ್ಞಾನಕ್ಕೆ ಬಲಿಯಾದ ಸ್ವಾಮಿಗಳು ಜನರ ನೇತೃತ್ವ ವಹಿಸುತ್ತಾರೆಂಬುದು ದೇಶಕ್ಕಾಗಿ ಲಜ್ಜಾಸ್ಪದ ! ಈ ಮಾನಸಿಕತೆಯನ್ನು ನಿಯಂತ್ರಿಸಲು ಕೇಂದ್ರಸರಕಾರ ಭಾರತದ ಇತಿಹಾಸವನ್ನು ಭಾರತದ ಮತ್ತು ಹಿಂದೂ ಧರ್ಮದ ದೃಷ್ಟಿಯಿಂದ ಅಂದರೆ ಸತ್ಯ ಮತ್ತು ವಸ್ತುನಿಷ್ಠವಾಗಿ ಪುನರ್‌ಲೇಖನ ಮಾಡಬೇಕು. - ಸಂಪಾದಕರು)ಆತನ ಹೆಂಡತಿಯೇ ನಾವಿಂದೂ ಕಾಳಿ, ಭದ್ರಕಾಳಿ ಎಂದು ಕರೆಯುವ ದೇವತೆಗಳೇ ಆಗಿದ್ದಾರೆ. ಅನಂತರ ಬಂದವನು ಶಿವ. ದಕ್ಷಿಣ ಭಾರತದ ಶ್ರೀಶೈಲ ಆತನ ಮೂಲಸ್ಥಾನ ವಾಗಿತ್ತು ಎಂದರು.
. ಷಣ್ಮುಖ ಶಿವ-ಪಾರ್ವತಿಯ ಮಗನಲ್ಲ. ಗಣಪತಿಯೊಬ್ಬನೇ ಶಿವನ ಮಗ. ಆದರೆ ತಾಯಿ ಪಾರ್ವತಿಯಲ್ಲ. ಗಣಪತಿಯ ತಾಯಿ ದಾಕ್ಷಾಯಿಣಿ. ಗಣಪತಿಗೆ ದಾಕ್ಷಾಯಿಣಿ ಹೆತ್ತ ತಾಯಿಯಾದರೆ, ಪಾರ್ವತಿ ಸಾಕು ತಾಯಿಯಾಗಿದ್ದಾಳೆ.
. ಷಣ್ಮುಖ ನಮ್ಮ ದೇಶದವನೇ ಅಲ್ಲ. ಹೊರ ದೇಶದಿಂದ ವಲಸೆ ಬಂದ ಆತನಿಗೆ ನಮ್ಮ ನಾಯಕರು ಷಣ್ಮುಖನೆಂಬ ಹಣೆಪಟ್ಟಿ ಕಟ್ಟಿದ್ದಾರೆ.
. ನಾವೆಲ್ಲರೂ ಪೂಜಿಸುವ ಶಬರಿ ಮಲೆ ಅಯ್ಯಪ್ಪ ದೇವರಂತೂ ಅಲ್ಲವೇ ಅಲ್ಲ. ಆತನೊಬ್ಬ ಗಿರಿಜನರ ಮಹಾನ್ ನಾಯಕನಾಗಿದ್ದು, ಕಾಲಾಂತರದಲ್ಲಿ ಆತನನ್ನು ದೇವರನ್ನಾಗಿ ಬಿಂಬಿಸಲಾಗಿದೆ.
. ವೀರಭದ್ರ ಸಹ ಕಾಡುಕುರುಬ ಜನಾಂಗಕ್ಕೆ ಸೇರಿದ ನಾಯಕ ನಾಗಿದ್ದು, ಹೀಗೆ ಒಂದೊಂದು ವರ್ಗದ ನಾಯಕರನ್ನು ಒಂದೊಂದು ಜಾತಿಯ ದೇವತೆಗಳೆಂದು ಬಿಂಬಿಸಲಾಗಿದೆ. (ಹೀಗೆ ಅಜ್ಞಾನಿ ಹೇಳಿಕೆ ನೀಡುವ ಸ್ವಾಮೀಜಿಗಳಿಗೆ ಈ ಬಗ್ಗೆ ಪ್ರಶ್ನಿಸಿ ! - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ನಮ್ಮಲ್ಲಿ ದೇವರೇ ಇಲ್ಲ, ಷಣ್ಮುಖ ಹೊರ ದೇಶದಿಂದ ಬಂದವ ! (ನಂತೆ)