ಅಯೋಧ್ಯೆಯಲ್ಲಿ ರಾಮಮಂದಿರವೇ ಆಗಬೇಕು ! - ಮುಸ್ಲಿಂ ರಾಷ್ಟ್ರೀಯ ಮಂಚ್

ಮುಸ್ಲಿಂ ರಾಷ್ಟ್ರೀಯ ಮಂಚ್‌ನಂತೆ ಇತರ ಮುಸಲ್ಮಾನ ಸಂಘಟನೆಗಳು ಮಾತನಾಡುವವೇ ?
ಲಕ್ಷ್ಮಣಪುರಿ (ಲಖ್ನೌ)/ಅಯೋಧ್ಯೆ : ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸಂಬಂಧಿಸಿದ ಮುಸ್ಲಿಂ ರಾಷ್ಟ್ರೀಯ ಮಂಚ್ ಅಯೋಧ್ಯೆಯಲ್ಲಿ ರಾಮಮಂದಿರವೇ ನಿರ್ಮಾಣವಾಗಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದೆ. ಮುಸ್ಲಿಂ ರಾಷ್ಟ್ರೀಯ ಮಂಚ್ ಈ ಸಮಸ್ಯೆಗೆ ನ್ಯಾಯಾಲಯದ ಹೊರಗೆ ಚರ್ಚೆಯ ಮೂಲಕ ಪರಿಹಾರೋಪಾಯ ಕಂಡುಹಿಡಿಯುವ ಸಲುವಾಗಿ ಪ್ರಯತ್ನಿಸುತ್ತಿದೆ. ಮಂಚ್‌ನ ನಾಯಕ ಮಹಮ್ಮದ ಅಫ್ಝಲ್ ಹೇಳಿದಂತೆ,
೧. ರಾಮಮಂದಿರ ನಿರ್ಮಾಣವನ್ನು ಮುಸಲ್ಮಾನರು ಬೆಂಬಲಿಸಬೇಕು.
೨. ಇನ್ನು ರಾಮಮಂದಿರದ ಸಮಸ್ಯೆಯ ದಾರಿ ಕಾಯಲು ಸಾಧ್ಯವಿಲ್ಲ. ಬಹುಸಂಖ್ಯಾತ ಹಿಂದೂಗಳಿರುವ ಈ ದೇಶದಲ್ಲಿ ಭಗವಾನ್ ಶ್ರೀರಾಮನು ಡೇರೆಯಲ್ಲಿದ್ದಾನೆ ಎಂಬುದರ ಬಗ್ಗೆ ವಿಚಾರ ಮಾಡಿ.

೩. ನಮಗೆ ವಿವಾದ ಬೇಡವಾಗಿದೆ. ಅಯೋಧ್ಯೆಯಲ್ಲಿ ಅನೇಕ ಮಸೀದಿಗಳು ಮತ್ತು ದರ್ಗಾಗಳಿವೆ; ಆದರೆ ಹಿಂದೂಗಳು ಯಾವತ್ತೂ ಅದರ ಮೇಲೆ ಅಧಿಕಾರವನ್ನು ತೋರಿಸಲಿಲ್ಲ. ಕೇವಲ ರಾಮಜನ್ಮ ಭೂಮಿಯಲ್ಲಿ ಅವರು ಅಧಿಕಾರವನ್ನು ತೋರಿಸುತ್ತಿದ್ದಾರೆ. ಅದಕ್ಕಾಗಿ ನಾವು ಅವರಿಗೆ ರಾಮಮಂದಿರವನ್ನು ನಿರ್ಮಿಸಲು ಒಪ್ಪಿಗೆ ಕೊಡಬೇಕು.
೪. ಇಸ್ಲಾಂನಲ್ಲಿ ಹೇಳಿದಂತೆ, ಮಸೀದಿಯನ್ನು ನಿರ್ಮಿಸಬೇಕಾದರೆ ಆ ಭೂಮಿ ಮುಸಲ್ಮಾನರದ್ದಾಗಿರಬೇಕು ಅಥವಾ ವಕ್ಫ್ ಬೋರ್ಡ್‌ನದ್ದಾಗಿರಬೇಕು. ಆದರೆ ಅಯೋಧ್ಯೆಯಲ್ಲಿ ಈ ಎರಡೂ ವಿಷಯಗಳಿಲ್ಲ. ಎಲ್ಲಿ ಗರ್ಭಗೃಹವಿದೆಯೋ, ಆ ಭೂಮಿಯ ಮೇಲೆ ಮುಸಲ್ಮಾನರ ಅಧಿಕಾರವಿಲ್ಲ.
೫. ಭಾರತೀಯ ಮುಸಲ್ಮಾನರ ಸಂಬಂಧ ರಾಮನೊಂದಿಗಿದೆ, ಬಾಬರನೊಂದಿಗಲ್ಲ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಅಯೋಧ್ಯೆಯಲ್ಲಿ ರಾಮಮಂದಿರವೇ ಆಗಬೇಕು ! - ಮುಸ್ಲಿಂ ರಾಷ್ಟ್ರೀಯ ಮಂಚ್