ಕಾಂಗ್ರೆಸ್‌ಮುಕ್ತ ಭಾರತದ ದಿಕ್ಕಿನೆಡೆಗೆ ಪ್ರಯಾಣಿಸುತ್ತಿರುವ ದೇಶ !

ಹಿಂದೂಗಳೇ, ದೇಶವು ಕಾಂಗ್ರೆಸ್‌ಮುಕ್ತವಾಗುತ್ತಿದ್ದರೂ, ಅದರ ಸ್ಥಾನದಲ್ಲಿ ಬರುವವರು
ನಿಮಗಾಗಿ ಏನೂ ಮಾಡದಿರುವುದರಿಂದ ಹಿಂದೂ ರಾಷ್ಟ್ರ-ಸ್ಥಾಪನೆಯ ದಿಕ್ಕಿನಲ್ಲಿ ಪ್ರಯಾಣ ಬೆಳೆಸಿ !
ಕಾಂಗ್ರೆಸ್‌ಅನ್ನು ಒದ್ದೋಡಿಸಿದ ೪ ರಾಜ್ಯಗಳ ಜನತೆ !
ನವ ದೆಹಲಿ : ಕಳೆದ ೨ ವರ್ಷಗಳಿಂದ ದೇಶದಲ್ಲಿರುವ ಕಾಂಗ್ರೆಸ್‌ವಿರೋಧಿ ಅಲೆ ಇನ್ನೂ ಶಾಂತವಾಗಿಲ್ಲ. ದೇಶವನ್ನು ಕಾಂಗ್ರೆಸ್‌ಮುಕ್ತಗೊಳಿಸುವ ಮೋಹನದಾಸ ಗಾಂಧಿಯ ಕನಸನ್ನು ನನಸಾಗಿಸಲು ಜನರು ಪ್ರಯತ್ನಿಸುತ್ತಿದ್ದಾರೆ ಹಾಗೂ ಅದಕ್ಕೆ ಕಾಂಗ್ರೆಸ್ಸಿನ ನಿಷ್ಕ್ರಿಯ ಯುವರಾಜ ರಾಹುಲ್ ಗಾಂಧಿಯ ಪ್ರೋತ್ಸಾಹ ಸಿಗುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ನಡೆದ ೫ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ೪ ರಾಜ್ಯಗಳಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ೫ ರಲ್ಲಿ ಅಸ್ಸಾಂ ಮತ್ತು ಕೇರಳ ರಾಜ್ಯಗಳಲ್ಲಿನ ಅಧಿಕಾರವನ್ನು ಕಾಂಗ್ರೆಸ್ ಕಳೆದುಕೊಳ್ಳಬೇಕಾಯಿತು ಹಾಗೂ ತಮಿಳುನಾಡಿನಲ್ಲಿ ಪುನಃ ಜಯಲಲಿತಾ ಇವರ ವಿಜಯ ಪತಾಕೆ ಹಾರಿಸಿದೆ. ಬಂಗಾಲದಲ್ಲಿ ಮಮತಾ (ಬಾನೋ) ಬ್ಯಾನರ್ಜಿಗೆ ಅಧಿಕಾರ ನೀಡುವ ಮೂಲಕ ಹಿಂದೂಗಳು ಆತ್ಮಘಾತಕ ಮಾಡಿಕೊಂಡಿದ್ದಾರೆ. ಪುದುಚೇರಿಯಲ್ಲಿ ಆಲ್ ಇಂಡಿಯಾ ಎನ್‌ಆರ್ ಕಾಂಗ್ರೆಸ್ ಜಯಿಸಿದೆ. ಅಸ್ಸಾಂನಲ್ಲಿ ಮೊದಲ ಬಾರಿ ಭಾಜಪ ಬಹುಮತ ಪಡೆದು ಕೇರಳದಲ್ಲಿ ಖಾತೆ ತೆರೆದಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕಾಂಗ್ರೆಸ್‌ಮುಕ್ತ ಭಾರತದ ದಿಕ್ಕಿನೆಡೆಗೆ ಪ್ರಯಾಣಿಸುತ್ತಿರುವ ದೇಶ !