ಜರ್ಮನಿಯ ಔಷಧ ತಯಾರಿಕಾ ಕಂಪನಿಯಿಂದ ಋತುಸ್ರಾವದ ಸಮಯದಲ್ಲಿ ಮಹಿಳೆಯರಿಗೆ ರಜೆ !

ತಥಾಕಥಿತ ಪ್ರಗತಿಪರ ಮಹಿಳಾ ಸಂಘಟನೆಗಳಿಗೆ ಈ ವಿಷಯದಲ್ಲಿ ಏನು ಹೇಳಲಿಕ್ಕಿದೆ ?
ಬರ್ಲಿನ್ : ಋತುಸ್ರಾವದ ಕಾಲದಲ್ಲಿ ಮಹಿಳೆಯ ರಲ್ಲಿ ಅಪವಿತ್ರತೆ ಹೆಚ್ಚಾಗುತ್ತದೆ ಹಾಗೂ ಅದರಿಂದ ಔಷಧಗಳ ಗುಣಮಟ್ಟದ ಮೇಲೆ ಪರೋಕ್ಷವಾಗಿ ಪರಿಣಾಮವಾಗುತ್ತದೆ ಹಾಗೂ ಈ ಔಷಧಗಳಿಂದ ರೋಗಿ ಗಳಿಗೆ ಸಾಕಷ್ಟು ಲಾಭವಾಗಲಿಕ್ಕಿಲ್ಲ, ಎಂದು ಜರ್ಮನಿಯ ಬೆರಿಂಗರ್ ಇಂಗಲ್‌ಹೇಮ್ ಎಂಬ ಔಷಧ ಕಂಪನಿಯ ನಿಲುವಾಗಿದೆ. ಆದ್ದರಿಂದ ಈ ಕಂಪನಿಯು ತನ್ನ ಮಹಿಳಾ ಸಿಬ್ಬಂದಿಗಳಿಗೆ ಈ ಸಮಯದಲ್ಲಿ ರಜೆ ನೀಡುವುದಾಗಿ ಘೋಷಣೆ ಮಾಡಿದೆ.
(ಭಾರತದ ಅಧ್ಯಾತ್ಮಶಾಸ್ತ್ರದಲ್ಲಿ ಋತುಸ್ರಾವದ ಬಗ್ಗೆ ಮಾಡಿರುವ ಶಾಸ್ತ್ರೋಕ್ತವಾದ ವಿವೇಚನೆಯನ್ನು ಪಾಶ್ಚಾತ್ಯದೇಶಗಳು ಅನುಭವಿಸುತ್ತಿವೆ; ಆದರೆ ಭಾರತ ದಲ್ಲಿ ತಥಾಕಥಿತ ಪ್ರಗತಿಪರರು ಪುರುಷ ಮತ್ತು ಸ್ತ್ರೀ ಎಂಬ ತಥಾಕಥಿತ ಸಮಾನತೆ ಹೆಸರಲ್ಲಿ ಮಹಿಳೆ ಯರ ಮೇಲೆ ದೌರ್ಜನ್ಯವಾಗುತ್ತಿದೆ, ಎಂದು ಬೊಬ್ಬೆ ಹಾಕುತ್ತಾ ಧರ್ಮಾಚರಣೆಗೆ ವಿರೋಧಿಸುತ್ತಿದ್ದಾರೆ! - ಸಂಪಾದಕರು) ಜರ್ಮನಿಯ ಬೆರಿಂಗರ್ ಇಂಗಲ್‌ಹೇಮ್ ಔಷಧ ತಯಾರಿಸುವ ಕಂಪನಿಯು ಜಗತ್ತಿನ ೧೦ ದೊಡ್ಡ ಔಷಧ ಕಂಪನಿಗಳಲ್ಲಿ ಒಂದಾಗಿದೆ. ಅವರ ವ್ಯವಹಾರ ಮತ್ತು ಕಾರ್ಮಿಕರನ್ನು ನೋಡಿಕೊಳ್ಳುವ ದೃಷ್ಟಿಕೋನ ಧಾರ್ಮಿಕ ಹಾಗೂ ಸಾಮಾಜಿಕವಾಗಿದೆ. ಈ ಕಂಪನಿಯು ಮಹಿಳೆಯರಿಗೆ ಋತುಸ್ರಾವದ ಸಮಯದಲ್ಲಾಗುವ ಪರಿಣಾಮ ಮತ್ತು ಆರೋಗ್ಯದ ದೃಷ್ಟಿಯಲ್ಲಾಗುವ ಪರಿಣಾಮದ ವಿಷಯವನ್ನು ಎಲ್ಲಿಯೂ ಓದದಿದ್ದರೂ ವ್ಯಾಪಾರದಲ್ಲಿನ ಅನುಭವಕ್ಕನುಸಾರ ಋತುಸ್ರಾವದ ಸಮಯದಲ್ಲಿ ಮಹಿಳೆಯರಿಗಾಗುವ ಆಧ್ಯಾತ್ಮಿಕ ಹಾಗೂ ಆರೋಗ್ಯದ ತೊಂದರೆಗಳನ್ನು ಗಮನಿಸಿ ಮಹಿಳೆಯರಿಗೆ ರಜೆ ನೀಡಲು ನಿರ್ಣಯಿಸಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಜರ್ಮನಿಯ ಔಷಧ ತಯಾರಿಕಾ ಕಂಪನಿಯಿಂದ ಋತುಸ್ರಾವದ ಸಮಯದಲ್ಲಿ ಮಹಿಳೆಯರಿಗೆ ರಜೆ !