ಇರಾನ್ ರಾಷ್ಟ್ರಪತಿ ಮುಂದೆ ಹಿಜಾಬ್‌ನಂತಹ ಉಡುಪು ಧರಿಸಿದ ಸುಷ್ಮಾ ಸ್ವರಾಜ್ !

ಬಾಂಗ್ಲಾದೇಶಕ್ಕೆ ಹೋದಾಗಲೂ ಸುಷ್ಮಾ ಸ್ವರಾಜ್ ಒಂದು ಕಾರ್ಯಕ್ರಮದಲ್ಲಿ ಹಿಜಾಬ್‌ನಂತೆ
ತಲೆಯನ್ನು ಮುಚ್ಚಿದ್ದರು ಹಾಗೂ ಈಗ ಇರಾನ್‌ನಲ್ಲಿಯೂ ಅವರು ಹಾಗೆಯೇ ಮಾಡಿದರು,
ಕಾಂಗ್ರೆಸ್ಸಿನ ಇಂದಿರಾ ಗಾಂಧಿ ಸಹ ಎಲ್ಲಿಯೂ ಹೀಗೆ ಉಡುಗೆ ತೊಡುಗೆ ಮಾಡಿರುವುದು ಕಂಡುಬಂದಿಲ್ಲ,
ಇದರಿಂದ ಸದ್ಯ ಭಾರತ ಸರಕಾರದ ಇಸ್ಲಾಮಿ ರಾಷ್ಟ್ರಗಳ ವಿಷಯದಲ್ಲಿನ ವಿದೇಶ ನೀತಿ ಅರಿವಾಗುತ್ತದೆ !
ಇರಾನಿನ ನೇತಾರರೊಂದಿಗೆ ಚರ್ಚಿಸುವಾಗ ಸುಷ್ಮಾ ಸ್ವರಾಜ್‌ರು 
ತಲೆಯನ್ನು ಮುಚ್ಚಲು ಶಾಲು ಉಪಯೋಗಿಸಿರುವುದು ಕಾಣಿಸುತ್ತದೆ.
ನವ ದೆಹಲಿ / ತೆಹರಾನ್ : ಭಾರತದ ವಿದೇಶ ಮಂತ್ರಿ ಸುಷ್ಮಾಸ್ವರಾಜ್ ಇವರು ಇರಾನ್ ಪ್ರವಾಸದಲ್ಲಿದ್ದಾರೆ. ಇರಾನಿನ ರಾಷ್ಟ್ರಪತಿ ಹಸನ್ ರುಹಾನೀರನ್ನು ಭೇಟಿಯಾದಾಗ ಸ್ವರಾಜ್ ಇವರು ಹಿಜಾಬ್‌ನ ಹಾಗೆ (ತಲೆ ಮುಚ್ಚಲು ಉಪಯೋಗಿಸುವ ಸ್ಕಾರ್ಫ್) ಉಡುಗೆ ತೊಟ್ಟಿರುವುದರಿಂದ ಆ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಟೀಕೆಯಾಗುತ್ತಿದೆ. ಸ್ವರಾಜ್ ಇವರೇ ತಮ್ಮ ಭೇಟಿಯ ಛಾಯಾಚಿತ್ರವನ್ನು ಟ್ವಿಟರ್‌ನಲ್ಲಿಟ್ಟಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಇರಾನ್ ರಾಷ್ಟ್ರಪತಿ ಮುಂದೆ ಹಿಜಾಬ್‌ನಂತಹ ಉಡುಪು ಧರಿಸಿದ ಸುಷ್ಮಾ ಸ್ವರಾಜ್ !