ರಾಮನಾಥಿ ಆಶ್ರಮದಲ್ಲಿನ ಕಲಶಸ್ಥಾಪನೆ ವಿಧಿಯ ಸಮಯದಲ್ಲಿ ಗರುಡ ಪಕ್ಷಿ ಬರುವ ಹಿಂದಿನ ಆಧ್ಯಾತ್ಮಿಕ ಕಾರಣಮೀಮಾಂಸೆ

ಕು. ಪ್ರಿಯಾಂಕಾ ಲೋಟಲಿಕರ
ಪ್ರಾಣಿಗಳ ಪಂಚಜ್ಞಾನೇಂದ್ರಿಯಗಳ ಕ್ಷಮತೆಯು ಮನುಷ್ಯನ ಪಂಚಜ್ಞಾನೇಂದ್ರಿಯಗಳಿಗಿಂತ ಹೆಚ್ಚಿರುತ್ತದೆ, ಎಂಬುದು ವೈಜ್ಞಾನಿಕ ಸ್ತರದಲ್ಲಿ ಸಿದ್ಧವಾಗಿದೆ. ಆದ್ದರಿಂದ ಪ್ರಾಣಿಗಳ ಸೂಕ್ಷ್ಮದಲ್ಲಿನ ಅರಿತುಕೊಳ್ಳುವ ಕ್ಷಮತೆಯೂ ಮನುಷ್ಯನ ಕ್ಷಮತೆಗಿಂತ ಹೆಚ್ಚಿರುತ್ತದೆ. ಯಾವುದೇ ತೀರ್ಥಕ್ಷೇತ್ರದ ಸ್ಥಳದಲ್ಲಿ ಯಾವ ದೇವತೆಯ ತತ್ತ್ವವು ಹೆಚ್ಚಿರುತ್ತದೆಯೋ ಅಲ್ಲಿ ಆ ದೇವತೆಗೆ ಸಂಬಂಧಿಸಿದ ಪಶು-ಪಕ್ಷಿ ಅಥವಾ ವನಸ್ಪತಿಗಳು ಕಂಡು ಬರುತ್ತವೆ. ಕೆಲವರು ಇದನ್ನು ಅಂಧಶ್ರದ್ಧೆಯ ಹೆಸರಿನಲ್ಲಿ ದುರ್ಲಕ್ಷಿಸುತ್ತಾರೆ; ಆದರೆ ಅದರ ಹಿಂದೆ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಕಾರಣವೂ ಇರುತ್ತದೆ, ಉದಾ. ದತ್ತಕ್ಷೇತ್ರದಲ್ಲಿ ಗೋವು ಅಥವಾ ನಾಯಿಗಳು ಕಂಡು ಬರುತ್ತವೆ. ಶಿವನ ದೇವಸ್ಥಾನದ ಸಮೀಪ ಬಿಲ್ವ ವೃಕ್ಷ ಬೆಳೆದಿರುವುದು ಕಾಣುತ್ತದೆ. ಇದರ ಹಿಂದಿನ ಕಾರಣವೆಂದರೆ ಆ ತೀರ್ಥಕ್ಷೇತ್ರದಿಂದ ಪ್ರಕ್ಷೇಪಿತಗೊಳ್ಳುವ ದೇವತೆಯ ತತ್ತ್ವವು ಆ ಜೀವಗಳಿಗೆ ಪೂರಕವಿರುವುದರಿಂದ ಆ ಜೀವಿಗಳು ತನ್ನಿಂತಾನೆ ಅಲ್ಲಿ ಆಕರ್ಷಿಸಲ್ಪಡುತ್ತವೆ. ಅದರಂತೆ ಸನಾತನದ ರಾಮನಾಥಿ ಆಶ್ರಮದಿಂದ ಕಲಶಸ್ಥಾಪನೆ ವಿಧಿಯ ಸಮಯದಲ್ಲಿ ಪ್ರಕ್ಷೇಪಿತಗೊಳ್ಳುವ ವಿಷ್ಣುತತ್ತ್ವದಿಂದಾಗಿ ಆ ಸ್ಥಳದಲ್ಲಿ ಮೂರೂ ಕಲಶಗಳ ಸ್ಥಾಪನೆ ವೇಳೆಗರುಡ ಪಕ್ಷಿ ಆಗಮಿಸಿತು.
೧. ಶ್ರೀವಿಷ್ಣುವಿನ ನಿರ್ಗುಣ ನಿರಾಕಾರತ್ವಕ್ಕೆ ಗರುಡ ಪಕ್ಷಿಯ ಮಾಧ್ಯಮದಿಂದ
ಸಗುಣ ಸಾಕಾರತ್ವ ಬರುವುದು
ವಿಧಿಯ ಪ್ರಧಾನ ದೇವತೆಯಾಗಿರುವ ಶ್ರೀವಿಷ್ಣುವಿನ ನಿರ್ಗುಣ ನಿರಾಕಾರತ್ವಕ್ಕೆ ಗರುಡ ಪಕ್ಷಿಯ ಮಾಧ್ಯಮದಿಂದ ಸಗುಣ ಸಾಕಾರತ್ವ ಧಾರಣವಾಯಿತು ಮತ್ತು ಅದು ಭೂಮಂಡಲದ ಮೇಲೆ ಅವತರಿಸಿತು.
೨. ಸನಾತನದ ಕಾರ್ಯವು ವಿಶ್ವದಾದ್ಯಂತ ವೇಗವಾಗಿ ಪ್ರಸಾರವಾಗುವ ವ್ಯಾಪಕ ಸಂಕಲ್ಪಕ್ಕೆ ಪ್ರತ್ಯಕ್ಷ 
ಗರುಡದೇವತೆಯ ರೂಪದಿಂದ ಪುಷ್ಟಿ ದೊರೆಯುವುದು
ಆಕಾಶದಲ್ಲಿ ಸುತ್ತು ಹಾಕುತ್ತಿರುವ ಗರುಡ ಪಕ್ಷಿ
ಸನಾತನದ ಕಾರ್ಯವು ವಿಶ್ವವ್ಯಾಪಿಯಾಗಬೇಕೆಂಬ ಉದ್ದೇಶದಿಂದ ರಾಮನಾಥಿ ಆಶ್ರಮದಲ್ಲಿ ಕಲಶಸ್ಥಾಪನಾ ವಿಧಿಯನ್ನು ಮಾಡಲಾಗಿತ್ತು. ಆಗ ಗರುಡರೂಪದಲ್ಲಿ ಪ್ರತ್ಯಕ್ಷ ಬರುವುದು, ಇದು ಈ ವಿಧಿಯು ಪರಿಪೂರ್ಣವಾಗಿರುವ ಬಗ್ಗೆ ದೇವರು ನೀಡಿದ ಪ್ರತ್ಯಕ್ಷ ಅನುಭೂತಿಯಾಗಿದೆ. ಗರುಡ ಪಕ್ಷಿಯು ವಿಷ್ಣುವಿನ ವಾಹನವಾಗಿದ್ದು ಗತಿದರ್ಶಕವೂ ಆಗಿದೆ, ಎಂದರೆ ಪ್ರತ್ಯಕ್ಷ ಭಗವಾನ ವಿಷ್ಣುವಿನ ಕೃಪಾಶೀರ್ವಾದದಿಂದ ಸನಾತನದ ಕಾರ್ಯದ ವಿಶ್ವದಾದ್ಯಂತ ಗತಿಮಾನವಾಗಿ ಪ್ರಸಾರವಾಗುವ ವ್ಯಾಪಕ ಸಂಕಲ್ಪಕ್ಕೆ ಪ್ರತ್ಯಕ್ಷ ಗರುಡ ದೇವತೆಯ ರೂಪದಲ್ಲಿ ಪುಷ್ಟಿ ದೊರೆತಿರುವುದು ಗಮನಕ್ಕೆ ಬರುತ್ತದೆ.
೩. ಗರುಡ ಪಕ್ಷಿಯು ಆಕಾಶದಲ್ಲಿ ೩ ಬಾರಿ ಸುತ್ತು ಹಾಕುವುದು ಅಂದರೆ 
ಉತ್ಪತ್ತಿ, ಸ್ಥಿತಿ ಮತ್ತು ಲಯ ಇವುಗಳ ಕಾರ್ಯ ಘಟಿಸುವುದು
ಕಾಲವನ್ನು ಪ್ರತಿನಿಧಿಸುವ ಈ ಕಲಶಗಳ ಸ್ಥಾಪನೆಯ ಸಮಯದಲ್ಲಿ ಗರುಡನು ಆಕಾಶದಲ್ಲಿ ೩ ಬಾರಿ ಸುತ್ತು ಹಾಕಿದನು ಅಂದರೆ ಕಾಲದ ಸ್ತರದಲ್ಲಿ ಉತ್ಪತ್ತಿ, ಸ್ಥಿತಿ ಮತ್ತು ಲಯ ಇವುಗಳ ಕಾರ್ಯ ಘಟಿಸುವುದರ ಬಗ್ಗೆ ಅರಿವಾಯಿತು. ಸಮಷ್ಟಿಯ ರಕ್ಷಣೆ ಮತ್ತು ಗರುಡನ ಮಾಧ್ಯಮದಿಂದ ತೊಂದರೆದಾಯಕ ಶಕ್ತಿಗಳ ನಿರ್ಮೂಲನೆಯ ಕಾರ್ಯವು ಘಟಿಸಿದ್ದರ ಬಗ್ಗೆಯೂ ಅರಿವಾಯಿತು.
೪. ಗರುಡನ ದರ್ಶನವು ಮಹರ್ಷಿಗಳ ವಚನದ ಸ್ಥೂಲದ ಅನುಭೂತಿಯೇ ಆಗಿದೆ !
ಕಲಶಗಳ ಸ್ಥಾಪನೆಯಿಂದಾಗಿ ಆಶ್ರಮಕ್ಕೆ ದೇವಸ್ಥಾನದ ಸ್ವರೂಪವು ಪ್ರಾಪ್ತವಾಯಿತು. ದೇವಸ್ಥಾನದ ಮೇಲಿರುವ ಕಲಶದ ಮೇಲೆ ಧ್ವಜವಿರುತ್ತದೆ. ಗರುಡವೇ ಮುಂದೆ ನಿಮ್ಮ ಅಧ್ಯಾತ್ಮ ವಿಶ್ವವಿದ್ಯಾಲಯದ ಚಿಹ್ನೆಯಾಗಿರುವುದು, ಎಂದು ಸಪ್ತರ್ಷಿ ನಾಡಿಪಟ್ಟಿಯಲ್ಲಿ ಮಹರ್ಷಿಗಳು ಹೇಳಿದ್ದಾರೆ. ಅದರಂತೆ ಇಲ್ಲಿ ಪ್ರತ್ಯಕ್ಷ ಸ್ಥೂಲದಲ್ಲಿ ಅದರ ಅನುಭೂತಿಯು ಬಂದಿದ್ದು ಅರಿವಾಯಿತು.
ಸಹಾಯಕ್ಕಾಗಿ ವೈಜ್ಞಾನಿಕರಲ್ಲಿ ವಿನಂತಿ !
ಕಲಶಸ್ಥಾಪನೆಯ ಸಮಯದಲ್ಲಿ ಗರುಡನು ಬರುವ ಹಿಂದಿನ ಕಾರಣವೇನು ? ಕಲಶಸ್ಥಾಪನೆಯ ಸಮಯದಲ್ಲಿ ಗರುಡನು ೩ ಬಾರಿ ಆಕಾಶದಲ್ಲಿ ಸುತ್ತು ಹಾಕಿ ಹೋದನು. ಅದರ ಹಿಂದಿನ ವೈಜ್ಞಾನಿಕ ಕಾರಣವೇನು ? ಈ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡಲು ಯಾವ ಉಪಕರಣಗಳನ್ನು ಬಳಸಬೇಕು ?, ಇದನ್ನು ಅರಿತುಕೊಳ್ಳಲು ವೈಜ್ಞಾನಿಕರು ಸಹಾಯ ಮಾಡಬೇಕೆಂದು ವಿನಂತಿ !
- ಕು. ಪ್ರಿಯಾಂಕಾ ಲೋಟಲಿಕರ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ (೯.೫.೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ರಾಮನಾಥಿ ಆಶ್ರಮದಲ್ಲಿನ ಕಲಶಸ್ಥಾಪನೆ ವಿಧಿಯ ಸಮಯದಲ್ಲಿ ಗರುಡ ಪಕ್ಷಿ ಬರುವ ಹಿಂದಿನ ಆಧ್ಯಾತ್ಮಿಕ ಕಾರಣಮೀಮಾಂಸೆ