ಕ್ರಾಂತಿಕಾರಿ ಭಗತಸಿಂಗ್‌ರನ್ನು ಉಗ್ರ ಎಂದ ದೆಹಲಿ ವಿಶ್ವವಿದ್ಯಾಲಯ !

ಕಾಂಗ್ರೆಸ್ಸಿನ ಆಡಳಿತಾವಧಿಯಲ್ಲಿ ಕ್ರಾಂತಿಕಾರಿಗಳನ್ನು ಉಗ್ರರೆಂದು ನಿರ್ಧರಿಸುವ ಪಠ್ಯಕ್ರಮವಿತ್ತು,
ಅದರ ಪುನರಾವೃತ್ತಿ ಈಗಲೂ ಆಗುತ್ತಿದ್ದರೆ, ಎರಡೂ ಸರಕಾರಗಳಲ್ಲಿ ವ್ಯತ್ಯಾಸವೇನು?
ನವ ದೆಹಲಿ : ಕ್ರಾಂತಿಕಾರಿಯಾದ ಹುತಾತ್ಮ ಭಗತಸಿಂಗ್ ರವರನ್ನು ದೆಹಲಿ ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಭಯೋತ್ಪಾದಕರೆಂದು ಉಲ್ಲೇಖಿಸಲಾಗಿದೆ. ಈ ಘಟನೆ ತಿಳಿದಾಕ್ಷಣ ಇತಿಹಾಸಕಾರರು ಸಂಬಂಧಪಟ್ಟವರಿಗೆ ತಪ್ಪನ್ನು ತಿದ್ದುಪಡಿ ಮಾಡುವಂತೆ ಹೇಳಿದ್ದಾರೆ.

. ಭಾರತದ ಸ್ವಾತಂತ್ರ್ಯಸಂಗ್ರಾಮ (India’s Struggle for Independence) ಎಂಬ ಪುಸ್ತಕದಲ್ಲಿ ಕ್ರಾಂತಿಕಾರರು ಬ್ರಿಟಿಷರನ್ನು ಕೊಲ್ಲುವ ಕೃತಿಗೆ ಉಗ್ರರ ಕೃತ್ಯ ಎಂದು ಹೇಳಲಾಗಿದೆ. ಇದೇ ಪುಸ್ತಕದಲ್ಲಿ ನೀಡಿರುವ ೨೦ನೇ ಪ್ರಕರಣದಲ್ಲಿ ಹುತಾತ್ಮ ಭಗತಸಿಂಗ್‌ರನ್ನು ಕ್ರಾಂತಿಕಾರಿ ಉಗ್ರನೆಂದು ಹೇಳಲಾಗಿದೆ. ಭಗತಸಿಂಗ್‌ರನ್ನು ಒಳಗೊಂಡಂತೆ ಚಂದ್ರಶೇಖರ್ ಆಝಾದ್, ಸೂರ್ಯಾ ಸೇನರನ್ನು ಸೇರಿಸಿ ಎಲ್ಲರನ್ನೂ ಕ್ರಾಂತಿಕಾರಿ ಉಗ್ರರೆಂದು ಸಂಬೋಧಿಸಲಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕ್ರಾಂತಿಕಾರಿ ಭಗತಸಿಂಗ್‌ರನ್ನು ಉಗ್ರ ಎಂದ ದೆಹಲಿ ವಿಶ್ವವಿದ್ಯಾಲಯ !