ಕಿವಿಗಳಲ್ಲಿ ಧರಿಸುವ ಆಭರಣಗಳು (ಕರ್ಣಾಭರಣ)
ಮಹತ್ವ
೧. ಕಲಿಯುಗದಲ್ಲಿ ಕಿವಿಗಳಲ್ಲಿ ಆಭರಣಗಳನ್ನು ಧರಿಸುವುದು ಅವಶ್ಯಕವಾಗಿದೆ : ‘ಹಿಂದಿನ ಕಾಲದಲ್ಲಿ ಕಿವಿ ಚುಚ್ಚುವ ಅಚಾರವು ಹಿಂದೂ ಧರ್ಮದಲ್ಲಿದ್ದರೂ, ಸತ್ಯಯುಗದ ಜೀವಗಳಲ್ಲಿ ಸಾಧನೆಯಿಂದ ಮತ್ತು ಆಚಾರಧರ್ಮದ ಪಾಲನೆಯಿಂದ ತೇಜದ ವೃದ್ಧಿಯಾಗಿದ್ದರಿಂದ ಕಿವಿಗಳಲ್ಲಿ ಆಭರಣಗಳನ್ನು ಧರಿಸುವ ಅವಶ್ಯಕತೆ ನಿರ್ಮಾಣವಾಗಲಿಲ್ಲ. ಆ ರಂಧ್ರಗಳಿಂದ ಅಲ್ಪ ಪ್ರಮಾಣದಲ್ಲಿ ಹೊರಬೀಳುವ ರಜ-ತಮಾತ್ಮಕ ಲಹರಿಗಳು ಅವರ ದೇಹದಲ್ಲಿನ ಸಾಧನೆಯ ತೇಜದಿಂದ ಅಲ್ಲಿಯೇ ವಿಘಟನೆಯಾಗುತ್ತಿದ್ದವು; ಆದರೆ ಕಲಿಯುಗದಲ್ಲಿ ತೇಜವನ್ನು ನಿರ್ಮಿಸುವ ಮತ್ತು ಹೆಚ್ಚಿಸುವ ಕ್ಷಮತೆಯು ನರ ದೇಹದಲ್ಲಿ ಉಳಿಯದಿರುವುದರಿಂದ ಅವರಿಗೆ ವಿವಿಧ ಆಭರಣಗಳನ್ನು ಧರಿಸುವ ಅವಶ್ಯಕತೆಯು ನಿರ್ಮಾಣವಾಯಿತು.’ - ಓರ್ವ ವಿದ್ವಾಂಸರು. (ಪೂ. (ಸೌ.) ಅಂಜಲಿ ಗಾಡಗೀಳ ಇವರು ಓರ್ವ ವಿದ್ವಾಂಸ ಅಂಕಿತನಾಮದಿಂದ ಬರೆಯುತ್ತಾರೆ. (೩೧.೧೨.೨೦೦೭))
೨. ‘ಕಿವಿಗಳಲ್ಲಿನ ಆಭರಣಗಳಿಂದ ಕಿವಿಯ ಪಟಲದ (ಹಾಲೆಯ) ಮೇಲೆ ಒತ್ತಡವಾಗಿ ಬಿಂದುಒತ್ತಡದ (ಅಕ್ಯುಪ್ರೆಶರ್) ಉಪಚಾರವಾಗುತ್ತದೆ.
೩. ಕಿವಿಗಳಲ್ಲಿ ಆಭರಣಗಳನ್ನು ಧರಿಸುವುದರಿಂದ ಕಿವಿಗಳ ಸಾತ್ತ್ವಿಕತೆಯು ಹೆಚ್ಚಾಗಿ ಸೂಕ್ಷ್ಮನಾದವನ್ನು ಗ್ರಹಿಸುವ ಕ್ಷಮತೆಯೂ ಹೆಚ್ಚಾಗುತ್ತದೆ.
೪.ಕಿವಿಗಳಲ್ಲಿ ಧರಿಸುವ ಆಭರಣಗಳಿಂದ ಕಿವಿಗಳ ಸುತ್ತಲೂ ಚೈತನ್ಯದ ಸಂರಕ್ಷಣಾ ಕವಚವು ನಿರ್ಮಾಣವಾಗುತ್ತದೆ ಮತ್ತು ಅನಿಷ್ಟ ಶಕ್ತಿಗಳ ಹಲ್ಲೆಗಳಾಗದಂತೆ ನಾದ ಲಹರಿಗಳ ಸಹಾಯದಿಂದ ಕಿವಿಗಳ ರಕ್ಷಣೆಯಾಗುತ್ತದೆ.
೫. ಕಿವಿಗಳಲ್ಲಿ ಧರಿಸುವ ಕೆಲವು ಆಭರಣಗಳ ಚಲನವಲನದಿಂದ ಸೂಕ್ಷ್ಮನಾದವು ನಿರ್ಮಾಣವಾಗಿ ಕಿವಿಯ ತಮಟೆ (ಪರದೆ) ಮತ್ತು ಒಳಗಿನ ಯಂತ್ರಗಳ ಮೇಲೆ ಉಪಚಾರವಾಗಿ ಅನಿಷ್ಟ ಶಕ್ತಿಗಳ ತೊಂದರೆಯು ಕಡಿಮೆಯಾಗುತ್ತದೆ. - ಈಶ್ವರ (ಕು. ಮಧುರಾ ಭೋಸಲೆಯವರು ಈಶ್ವರ ಈ ಅಂಕಿತನಾಮದಿಂದ ಬರೆಯುತ್ತಾರೆ. (೧೨.೧೧.೨೦೦೭))

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !