ಜೀವನದಲ್ಲಿ ಎದುರಾಗುವ ಪ್ರತಿಯೊಂದು ದುಃಖದಾಯಕ ಪ್ರಸಂಗವನ್ನು ಈಶ್ವರೇಚ್ಛೆ,, ಪ್ರಾರಬ್ಧ ಮತ್ತು ಸಾಕ್ಷಿಭಾವ ಈ ಮೂರು ದೃಷ್ಟಿಕೋನದಿಂದ ನೋಡಲು ಪ್ರಯತ್ನಿಸಿದರೆ, ದುಃಖವಾಗುವುದಿಲ್ಲ !

.ಭಕ್ತಿಯೋಗಕ್ಕನುಸಾರ ಈಶ್ವರೇಚ್ಛೆ
ಜಗತ್ತಿನಲ್ಲಿ ಪ್ರತಿಯೊಂದು ಪ್ರಸಂಗವೂ ನಮ್ಮ ಇಚ್ಛೆಯಿಂದ, ಅಂದರೆ ಸ್ವಇಚ್ಛೆಯಿಂದ ಘಟಿಸುವುದಿಲ್ಲ, ಬದಲಾಗಿ ಅವುಗಳು ಈಶ್ವರೇಚ್ಛೆಯಿಂದ ಘಟಿಸುತ್ತಿರುವುದರಿಂದ ಮತ್ತು ಈಶ್ವರ ನಿಗೆ ವ್ಯಕ್ತಿಗೆ ಏನು ಅವಶ್ಯಕತೆಯಿದೆ, ಎನ್ನುವುದು ತಿಳಿದಿರುವುದರಿಂದ ಅವನು ಸರಿಯಾದುದನ್ನೇ ಮಾಡುತ್ತಾನೆ.

. ಕರ್ಮಯೋಗಕ್ಕನುಸಾರವಾಗಿ ಪ್ರಾರಬ್ಧ
ಜೀವನದಲ್ಲಿ ಎದುರಾಗುವ ಶೇ. ೩೫ ರಷ್ಟು ಪ್ರಸಂಗಗಳು ಕ್ರಿಯಮಾಣ ಕರ್ಮಕ್ಕನುಸಾರವಾಗಿ ಘಟಿಸುತ್ತವೆ ಹಾಗೂ ಉಳಿದ ಶೇ. ೬೫ರಷ್ಟು ಅಂದರೆ ಬಹಳಷ್ಟು ಪ್ರಸಂಗಗಳು ಪ್ರಾರಬ್ಧಕ್ಕನುಸಾರವಾಗಿ ಘಟಿಸುತ್ತವೆ. ಪ್ರಾರಬ್ಧವನ್ನು ಭೋಗಿಸಿಯೇ ತೀರಿಸಬೇಕಾಗುವುದರಿಂದ ದುಃಖವನ್ನು ನಾವು ಮಾಡಿರುವ ದುಷ್ಟ ಕಾರ್ಯಗಳ ಶಿಕ್ಷೆಯಾಗಿದ್ದು, ಅದನ್ನು ನಾವು ಭೋಗಿಸುತ್ತಿದ್ದೇವೆ ಎನ್ನುವ ದೃಷ್ಟಿಕೋನವನ್ನಿಟ್ಟುಕೊಳ್ಳಬಹುದಾಗಿದೆ.
.ಜ್ಞಾನಯೋಗಕ್ಕನುಸಾರವಾಗಿ ಸಾಕ್ಷಿಭಾವ
ನಾವು ಭೋಗಿಸುವುದೆಲ್ಲವೂ ಮಾಯೆಯೇ ಆಗಿದೆಯೆಂದು ಮನಸ್ಸಿಗೆ ಅರಿವು ಮಾಡಿಕೊಟ್ಟಲ್ಲಿ, ದುಃಖವಾಗುವುದಿಲ್ಲ.
ಸನಾತನ ಸಂಸ್ಥೆ ಮತ್ತು ಇತರ ಬಹುತೇಕ ಆಧ್ಯಾತ್ಮಿಕ ಸಂಸ್ಥೆಗಳು
ಸನಾತನ ಸಂಸ್ಥೆ ಯಾವುದೇ ಸಂಕಟವನ್ನು ಈಶ್ವರೇಚ್ಛೆ, ಪ್ರಾರಬ್ಧ ಮತ್ತು ಸಾಕ್ಷೀಭಾವ ಈ ದೃಷ್ಟಿಕೋನದಿಂದ ಹೇಗೆ ನೋಡುವುದು ಮತ್ತು ಈಶ್ವರಪ್ರಾಪ್ತಿಯನ್ನು ಹೇಗೆ ಮಾಡಿಕೊಳ್ಳಬೇಕೆಂದು ಕಲಿಸುತ್ತದೆ. ಆದರೆ ಬಹಳಷ್ಟು ಆಧ್ಯಾತ್ಮಿಕ ಸಂಸ್ಥೆಗಳು ತೊಂದರೆಗಳನ್ನು ದೂರಗೊಳಿಸುವ ಉಪಾಯಗಳನ್ನು ಕಲಿಸುತ್ತವೆ.
-(ಪರಾತ್ಪರ ಗುರು) ಡಾ. ಆಠವಲೆ (೨೪.೧೨.೨೦೧೫)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಜೀವನದಲ್ಲಿ ಎದುರಾಗುವ ಪ್ರತಿಯೊಂದು ದುಃಖದಾಯಕ ಪ್ರಸಂಗವನ್ನು ಈಶ್ವರೇಚ್ಛೆ,, ಪ್ರಾರಬ್ಧ ಮತ್ತು ಸಾಕ್ಷಿಭಾವ ಈ ಮೂರು ದೃಷ್ಟಿಕೋನದಿಂದ ನೋಡಲು ಪ್ರಯತ್ನಿಸಿದರೆ, ದುಃಖವಾಗುವುದಿಲ್ಲ !