ಪಠ್ಯಪುಸ್ತಕದಲ್ಲಿ ಕ್ರಾಂತಿಕಾರರನ್ನು ‘ಭಯೋತ್ಪಾದಕ’ರೆಂದು ಮುದ್ರಿಸಿದವರ ಮೇಲೆ ದೂರು ದಾಖಲಿಸಿ !

ರಾಜ್ಯದ ವಿವಿಧೆಡೆಗಳಲ್ಲಿ ರಾಷ್ಟ್ರೀಯ ಹಿಂದೂ ಆಂದೋಲನ
ಪ್ರಮೋದ ಮುತಾಲಿಕ್‌ರವರ ಮೇಲೆ ವಾಕ್ ಮತ್ತು ಸಂಚಾರ ನಿರ್ಬಂಧ ಅನ್ಯಾಯಕಾರಿ !
ಮಂಗಳೂರಿನಲ್ಲಿ ನಡೆದ ಆಂದೋಲನದಲ್ಲಿ ಪಾಲ್ಗೊಂಡ ಕಾರ್ಯಕರ್ತರು
ಮಂಗಳೂರು : ಭಾರತೀಯ ಸಂವಿಧಾನದಲ್ಲಿ ಭಾರತದ ಪ್ರತಿಯೊಬ್ಬ ನಾಗರಿಕನಿಗೆ ‘ವಾಕ್’ ಮತ್ತು ‘ಸಂಚಾರ’ ಸ್ವಾತಂತ್ರ್ಯವನ್ನು ನೀಡಲಾಗಿದೆ. ಹೀಗಿರುವಾಗ ಶ್ರೀರಾಮ ಸೇನೆಯ ಸಂಸ್ಥಾಪಕರಾದ ಶ್ರೀ. ಪ್ರಮೋದ ಮುತಾಲಿಕರ ಮೇಲೆ ಪದೇ ಪದೇ ಅನ್ಯಾಯಕಾರಿ ನಿರ್ಬಂಧವನ್ನು ಹೇರಿ ಒಂದು ರೀತಿಯಲ್ಲಿ ಸಂವಿಧಾನದ ಅವಮಾನವನ್ನೇ ಮಾಡಲಾಗುತ್ತಿದೆ. ಆದ್ದರಿಂದ ಮುತಾಲಿಕರಿಗೆ ಭಾಷಣ ಮತ್ತು ಪ್ರವೇಶ ನಿರ್ಬಂಧ ಹೇರದಂತೆ ಕರ್ನಾಟಕ ಸರಕಾರವನ್ನು ತಡೆಯಬೇಕೆಂದು ‘ರಾಷ್ಟ್ರೀಯ ಹಿಂದೂ ಆಂದೋಲನ’ದ ಮೂಲಕ ರಾಜ್ಯದ ಮಂಗಳೂರು, ಕಾರ್ಕಳ, ಹುಬ್ಬಳ್ಳಿ, ಗದಗ, ಧಾರವಾಡ ಮತ್ತು ಹಳಿಯಾಳದಲ್ಲಿ ಆಡಳಿತಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ನೀಡಲಾಗಿದೆ.

ರಾಷ್ಟ್ರೀಯ ಹಿಂದೂ ಆಂದೋಲನದ ಸಮಯದಲ್ಲಿ ಮಾಡಿದ ಇನ್ನಿತರ ಬೇಡಿಕೆಗಳು -
೧. ದೆಹಲಿ ವಿಶ್ವವಿದ್ಯಾಲಯದ ‘ಭಾರತ್‌ಕಾ ಸ್ವತಂತ್ರತಾ ಸಂಘರ್ಷ’ ಎಂಬ ಪಠ್ಯಪುಸ್ತಕದಲ್ಲಿ ಹುತಾತ್ಮಾ ಭಗತ್‌ಸಿಂಗ್ ಇವರ ಸಹಿತ ಚಂದ್ರಶೇಖರ ಆಝಾದ್, ಸೂರ್ಯಸೇನ್ ಮುಂತಾದ ಕ್ರಾಂತಿಕಾರರನ್ನು ‘ಉಗ್ರವಾದಿ’ಗಳೆಂದು ಮುದ್ರಿಸಿ ಜಿಗುಪ್ಸೆಯನ್ನುಂಟು ಮಾಡುವಂತಹ ಕೃತ್ಯವನ್ನು ಮಾಡಲಾಗಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕೂಡಲೇ ದೂರು ದಾಖಲಿಸಬೇಕು.
ಮನವಿ ನೀಡುತ್ತಿರುವ ಹುಬ್ಬಳ್ಳಿಯ ಕಾರ್ಯಕರ್ತರು
೨. ರಾಯಚೂರಿನ ಝಾಕೀರ ಹುಸೇನ ಚೌಕ ಮತ್ತು ಸುಪರ್ ಮಾರ್ಕೇಟ್ ಈ ನಡುವಿನ ರಸ್ತೆ ಅಗಲೀಕರಣಕ್ಕಾಗಿ ನಗರಪಾಲಿಕೆಯು ‘ಏಕ್ ಮಿನಾರ್’ ಮಸೀದಿಯ ಸ್ವಲ್ಪ ಭಾಗವನ್ನು ಕೆಡವಿತು, ಆಗ ಮಸೀದಿಯ ಗೋಡೆಯ ಗಾರೆ ಕಳಚಿದಾಗ ಅದರಲ್ಲಿ ಹಿಂದೂಗಳ ಧಾರ್ಮಿಕ ಚಿಹ್ನೆಗಳನ್ನು ಕೆತ್ತಿರುವುದು ಬೆಳಕಿಗೆ ಬಂದಿದೆ. ಅದೇ ರೀತಿ ಮಸೀದಿಯ ಒಳಗೆ ಸಹ ದೇವಸ್ಥಾನದ ಕಂಬಗಳೂ ಸ್ಪಷ್ಟವಾಗಿ ಕಾಣಿಸುತ್ತಿವೆ. ಆದ್ದರಿಂದ ಈ ವಾಸ್ತುವನ್ನು ತಕ್ಷಣ ‘ಪ್ರಾಚೀನ ವಾಸ್ತು’ ಎಂದು ಜೋಪಾನ ಮಾಡಬೇಕು. ಈ ವಾಸ್ತುವನ್ನು ಪ್ರಾರ್ಥನಾಸ್ಥಳವೆಂದು ಉಪಯೋಗಿಸದಂತೆ ನಿರ್ಬಂಧ ಹೇರಿ ಅದನ್ನು ಪ್ರಾಚೀನ ವಾಸ್ತು ವಿಭಾಗವು ವಶಪಡಿಸಿಕೊಳ್ಳಬೇಕೆಂದು ಈ ಸಮಯದಲ್ಲಿ ಬೇಡಿಕೆ ನೀಡಲಾಯಿತು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪಠ್ಯಪುಸ್ತಕದಲ್ಲಿ ಕ್ರಾಂತಿಕಾರರನ್ನು ‘ಭಯೋತ್ಪಾದಕ’ರೆಂದು ಮುದ್ರಿಸಿದವರ ಮೇಲೆ ದೂರು ದಾಖಲಿಸಿ !