ನ್ಯಾಯಾಲಯದ ತಡೆ ಇದ್ದರೂ ಚಂದೀಗಡದಲ್ಲಿನ ಆಶ್ರಮ ಮತ್ತು ದೇವಸ್ಥಾನವನ್ನು ಕೆಡವಿದ ಆಡಳಿತ !

ದೆಹಲಿಯ ವಿವಿಧ ಚರ್ಚ್‌ಗಳ ಮೇಲೆ ಹಿಂದುತ್ವನಿಷ್ಠರು ದಾಳಿ ಮಾಡಿದರೆಂಬ ಸುಳ್ಳು ಹಾಗೂ ನಿರಾಧಾರ ಆರೋಪಗಳನ್ನು ಬ್ರೇಕಿಂಗ್ ನ್ಯೂಸ್ ಎಂದು ತೋರಿಸುವ ರಾಷ್ಟ್ರೀಯ ಮಟ್ಟದ ಪ್ರಸಾರಮಾಧ್ಯಮಗಳು ಈಗ ಈ ಪ್ರಕರಣದಲ್ಲಿ ಬಾಯಿಗೆ ಬೀಗ ಜಡಿದುಕೊಂಡಿರುವುದೇಕೆ? ಇದೇನಾ ಅವರ ಜಾತ್ಯತೀತತೆ ?
ಅನೇಕ ಮಹಿಳಾ ಸಂತರು ಮತ್ತು ಸಾಧಕಿಯರಿಗೆ ಈಗ ಉಳಿಯಲು ಚಪ್ಪರವೂ ಇಲ್ಲ ! ತಡೆಯ ಪ್ರತಿ ಸಿಗಲಿಲ್ಲವೆಂದು ನೆಪ ಹೇಳಿದ ಮಹಾನಗರಪಾಲಿಕೆ !
ಚಂದೀಗಡ : ೪೦ ವರ್ಷಗಳಷ್ಟು ಹಳೆಯ ಶ್ರೀ ನಾಂಗ್ಲೀ ಆಶ್ರಮವನ್ನು ಕೆಡಹುವ ನಿರ್ಣಯಕ್ಕೆ ನ್ಯಾಯಾಲಯವು ತಡೆ ನೀಡಿದರೂ ಚಂದೀಗಡ ಮಹಾನಗರಪಾಲಿಕೆಯು ಆಶ್ರಮದ ಕಟ್ಟಡ ಮತ್ತು ಅಲ್ಲಿದ್ದ ಶಿವಮಂದಿರವನ್ನು ಕೆಡವಿತು. ಈ ವಿಷಯದಲ್ಲಿ ಮಹಾನಗರಪಾಲಿಕೆಯ ಅಧಿಕಾರಿಗಳು ಸ್ಥಳೀಯ ನ್ಯಾಯಾಲಯಕ್ಕೆ ಸ್ಪಷ್ಟೀಕರಣ ನೀಡುತ್ತಾ ಈ ದೇವಸ್ಥಾನವನ್ನು ಕೆಡವಿದ ನಂತರ ನಮಗೆ ತಡೆಯ ಪ್ರತಿ ಸಿಕ್ಕಿತು’, ಎಂದು ಹೇಳಿದರು. (ಈ ಪ್ರಕರಣವು ನ್ಯಾಯಾಲಯದಲ್ಲಿರುವ ವಿಷಯವಾದರೂ ಆಡಳಿತದವರಿಗೆ ತಿಳಿದಿತ್ತೇ ಅಥವಾ ಇಲ್ಲವೇ ?
ಆಡಳಿತದವರಿಗೆ ಹೇಗಾದರೂ ಮಾಡಿ ದೇವಸ್ಥಾನ ಮತ್ತು ಆಶ್ರಮ ವನ್ನು ಕೆಡವಲಿಕ್ಕೇ ಇತ್ತು, ಎಂಬುದು ಇದರಿಂದ ಸಿದ್ಧವಾಗುತ್ತದೆ. - ಸಂಪಾದಕರು) ಈ ವಿಷಯದಲ್ಲಿ ಆಶ್ರಮದ ಪ್ರಮುಖ ಸಂತರಾದ ರಾಮೇಶ್ವರ ನಂದ ಪುರೀಜಿ ಇವರ ವಕೀಲರು ಮಹಾನಗರಪಾಲಿಕೆಯನ್ನು ಆರೋಪಿಸುತ್ತಾ, ಆಶ್ರಮವನ್ನು ಕೆಡಹುವ ನಿರ್ಣಯಕ್ಕೆ ನ್ಯಾಯಾಲಯ ತಡೆ ನೀಡಿದೆ ಎಂಬುದರ ಕಾಗದಪತ್ರಗಳನ್ನು ಆಶ್ರಮ ವನ್ನು ಕೆಡಹುವ ಮೊದಲೇ ನಾವು ಅಧಿಕಾರಿಗಳಿಗೆ ತೋರಿಸಿದ್ದೆವು; ಆದರೆ ಅವರು ಅದನ್ನು ಕಡೆಗಣಿಸಿ ನ್ಯಾಯಾಲಯವನ್ನು ಅವಮಾನಿಸುತ್ತಾ ಆಶ್ರಮ ಮತ್ತು ಅಲ್ಲಿದ್ದ ಶಿವಮಂದಿರವನ್ನು ಕೆಡವಿದರು. ನಾವು ಇದರ ಧ್ವನಿಚತ್ರೀಕರಣವನ್ನೂ ಮಾಡಿದ್ದೇವೆ, ಎಂದು ನ್ಯಾಯಾಲಯದಲ್ಲಿ ಹೇಳಿದರು. (ಇದರಿಂದ ಚಂದೀಗಡ ಮಹಾನಗರಪಾಲಿಕೆಯ ಹಿಂದೂದ್ರೋಹವೇ ಸ್ಪಷ್ಟವಾಗುತ್ತದೆ. ಅಲ್ಪಸಂಖ್ಯಾತರ ಪ್ರಾರ್ಥನಾಸ್ಥಳದ ವಿಷಯದಲ್ಲಿ ಮಹಾನಗರಪಾಲಿಕೆಯ ಅಧಿಕಾರಿಗಳು ಇಂತಹ ಭೂಮಿಕೆಯನ್ನು ಅವಲಂಬಿಸಲು ಧೈರ್ಯ ಮಾಡುತ್ತಿದ್ದರೇ ? - ಸಂಪಾದಕರು) ಈ ಪ್ರಕರಣದ ಮುಂದಿನ ಆಲಿಕೆ ಮೇ ೧೧ ರಂದು ಆಗಲಿದೆ. ಎಪ್ರಿಲ್ ೪ ರಂದು ಮಹಾನಗರಪಾಲಿಕೆಯ ಮೂಲಕ ನಾಂಗ್ಲಿ ಆಶ್ರಮ ಮತ್ತು ಅಲ್ಲಿದ್ದ ಶಿವನ ಮಂದಿರವನ್ನು ಜೆಸಿಬಿಯಿಂದ ಕೆಡವಲಾಯಿತು. ಚಂದೀಗಡ ಟ್ರಿಬ್ಯೂನ್‌ನ ಜಾಲತಾಣಕ್ಕನುಸಾರ, ಆಶ್ರಮವನ್ನು ಕೆಡವಿರುವುದರಿಂದ ಅಲ್ಲಿ ಅನೇಕ ವರ್ಷಗಳಿಂದ ನೆಲೆಸಿದ್ದ ಮಹಿಳಾ ಸಂತರು, ಸಾಧಕಿಯರಿಗೆ ಈಗ ವಾಸಿಸಲು ಮನೆ ಇಲ್ಲದಂತಾಗಿದೆ.
. ಆಶ್ರಮ ಕೆಡಹುವಲ್ಲಿ ನ್ಯಾಯಾಲಯದಿಂದ ತಡೆಆಜ್ಞೆ ಇದ್ದರೂ ಆಶ್ರಮ ಕೆಡವಿದ ವಿರುದ್ಧ ಅರ್ಜಿದಾರರು ನ್ಯಾಯಾಂಗನಿಂದನೆಯ ಅರ್ಜಿ ದಾಖಲಿಸಿದ್ದಾರೆ.
. ಏಪ್ರಿಲ್ ೪ ರಂದು ನೀಡಿದ ತಡೆಯ ಆದೇಶದಲ್ಲಿ ನ್ಯಾಯಾಲಯ, ಮಹಾನಗರಪಾಲಿಕೆಯು ಈ ಆಶ್ರಮವನ್ನು ಕೆಡಹುವ ಮೊದಲು ಅದರ ವಾಸ್ತವಿಕ ಕಾರಣಗಳನ್ನು ಕೊಡಬೇಕು. ಅಷ್ಟರವರೆಗೆ ಆಶ್ರಮವನ್ನು ಕೆಡವಬಾರದು, ಎಂದಿತ್ತು.
. ಆಶ್ರಮ ಕೆಡವಿದ್ದರಿಂದ ಆಶ್ರಮದ ಮಹಿಳಾ ಸಂತರು,
ಸಾಧಕಿಯರು ಅನೇಕ ದಿನಗಳ ವರೆಗೆ ರಸ್ತೆ ತಡೆ ಆಂದೋಲನ ನಡೆಸಿ ದರು. ಪೊಲೀಸರು ಬಲ ಪ್ರಯೋಗಿಸಿ ಅವರನ್ನು ಬದಿಗೆ ಸರಿಸಿದರು.
. ಜೆಸಿಬಿ ಮೂಲಕ (ಬಲಗಡೆ) ಆಶ್ರಮವನ್ನು ಬೀಳಿಸುತ್ತಿರುವಾಗ ಶಿವನ ಮಂದಿರ ಕಾಣಿಸುತ್ತಿದೆ ೨. ಶಿವಲಿಂಗ ಅನಾಥವಾಗಿ ಬಿದ್ದಿರುವುದು ಕಾಣಿಸುತ್ತಿದೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ನ್ಯಾಯಾಲಯದ ತಡೆ ಇದ್ದರೂ ಚಂದೀಗಡದಲ್ಲಿನ ಆಶ್ರಮ ಮತ್ತು ದೇವಸ್ಥಾನವನ್ನು ಕೆಡವಿದ ಆಡಳಿತ !