ಬೇಸಿಗೆ ರಜೆಯ ನಿಮಿತ್ತ ಪ್ರತಿವಾರ ಓದಿ ಬೋಧಕಥೆ

ಪರೀಕ್ಷೆ ಮುಗಿದು ಈಗ ವಿದ್ಯಾರ್ಥಿಗಳ ಬೇಸಿಗೆ ರಜೆಗಳು ಪ್ರಾರಂಭ ವಾಗಿವೆ. ರಜೆಗಳ ಸದುಪಯೋಗವಾಗಬೇಕು ಮತ್ತು ಸದ್ಗುಣ, ರಾಷ್ಟ್ರಭಕ್ತಿಯ ಮಹತ್ವವು ಎಲ್ಲರಿಗೂ ತಿಳಿಯಬೇಕೆಂದು ಈ ಮಾಲಿಕೆಯನ್ನು ನಮ್ಮ ವಾಚಕರಿಗಾಗಿ ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ. ಇಲ್ಲಿ ನೀಡಿದ ಮುಂದಿನ ಕಥೆಯಿಂದ ನಾವು ಅಹಂಕಾರವನ್ನು ಏಕೆ ಇಟ್ಟುಕೊಳ್ಳಬಾರದು ಎಂಬುದು ತಿಳಿಯುತ್ತದೆ.
ಅಹಂಕಾರ ಮತ್ತು ಗುರುದ್ರೋಹದಿಂದ ರಸಾತಳಕ್ಕೆ ಹೋದ ಬೈಜೂ ಬಾವರವರ ಶಿಷ್ಯ ಗೋಪಾಲ !
. ಬೈಜೂ ಬಾವರಾ ತಮ್ಮ ಗುರುಗಳ ಕೃಪೆ ಪಡೆಯುವುದರಲ್ಲಿ ಯಶಸ್ವಿಯಾದರು ಮತ್ತು ಗುರುಗಳಿಂದ ಸಂಗೀತ-ವಿದ್ಯೆಯನ್ನು ಕಲಿತು ಏಕಾಂತದಲ್ಲಿ ಹೋದರು : ಹರಿದಾಸ ಮಹಾರಾಜರ ಬೈಜೂ ಬಾವರಾ ಮತ್ತು ತಾನಸೇನ್, ಎಂಬ ಇಬ್ಬರು ಶಿಷ್ಯರಿದ್ದರು.
ಗುರುಬಂಧುಗಳಿಬ್ಬರೂ ಮಹಾನ್ ಸಂಗೀತ ತಜ್ಞರಾಗಿ ಹೋದರು. ಬೈಜೂ ಬಾವರಾರವರ ಜನ್ಮವು ೧೫೪೨ರಲ್ಲಿ ಚಂದೆರೀ (ಗ್ವಾಲಿಯರ ಕ್ಷೇತ್ರ, ಮಧ್ಯಪ್ರದೇಶ)ಯಲ್ಲಿ ಆಯಿತು. ಬೈಜೂರವರ ಸಂಗೀತ ಹಾಗೂ ಅವರ ವ್ಯವಹಾರ ಅತ್ಯಂತ ಸುಖಕರವಾಗಿತ್ತು. ಅವರು ಗುರುಗಳ ಕೃಪೆಯನ್ನು ಪಡೆಯುವುದರಲ್ಲಿ ಯಶಸ್ವಿಯಾದರು. ಗುರುಗಳಿಂದ ಸಂಗೀತ-ವಿಧ್ಯೆಯನ್ನು ಕಲಿತು ಬೈಜೂ ಬಾವರಾ ಏಕಾಂತದಲ್ಲಿ ಹೋದರು ಮತ್ತು ಅಲ್ಲಿ ಗುಡಿಸಲನ್ನು ಕಟ್ಟಿಕೊಂಡು ಸಂಯಮದಿಂದ ಜೀವನ ನಡೆಸುತ್ತಾ ಸಂಗೀತಾಭ್ಯಾಸವನ್ನು ಮಾಡತೊಡಗಿದರು.
. ಗೋಪಾಲನು ಬೈಜೂರವರ ಕೃಪೆಯನ್ನು ಪಡೆದು ಕೊಂಡು ಬಹಳಷ್ಟು ವರ್ಷಗಳ ವರಗೆ ಅಧ್ಯಯನ ಮಾಡಿ ಸಂಗೀತ-ವಿದ್ಯೆಯಲ್ಲಿ ನಿಪುಣನಾದನು : ಬೈಜೂ ಬಾವರಾ ಅಧ್ಯಯನದಲ್ಲಿ ಎಷ್ಟು ಏಕಾಗ್ರರಾದರೆಂದರೆ, ಸಂಗೀತ ಕಲೆಯನ್ನು ಕಲಿಯಲು ಎಷ್ಟೋ ಜನರು ಅವರ ಶಿಷ್ಯರಾದರು. ಅವರಲ್ಲಿನ ಗೋಪಾಲ ನಾಯಕನೆಂಬ ಓರ್ವ ಶಿಷ್ಯನು ಬಹಳ ಪ್ರತಿಭಾವಂತನಾಗಿದ್ದನು. ಹೇಗೆ ಬೈಜು ಬಾವರಾ ತಮ್ಮ ಗುರು ಹರಿದಾಸ ಮಹಾರಾಜರನ್ನು ಪ್ರಸನ್ನಗೊಳಿಸಿದ್ದರೋ, ಅದೇ ರೀತಿ ಗೋಪಾಲನು ಕೂಡ ಬೈಜೂರನ್ನು ಪ್ರಸನ್ನಗೊಳಿಸಿದನು. ವಾರ, ತಿಂಗಳು ಹೀಗೆ ಕಳೆಯುತ್ತಾ ಎಷ್ಟೋ ವರ್ಷಗಳ ತನಕ ಅಧ್ಯಯನ ಮಾಡಿ ಗೋಪಾಲನು ಸಂಗೀತ-ವಿದ್ಯೆಯಲ್ಲಿ ನಿಪುಣನಾದನು.
. ಗೋಪಾಲನು ಹೊರಡುವಾಗ ಗುರುಗಳ ಹೃದಯ ತುಂಬಿ ಬಂದು ಕಣ್ಣುಗಳಲ್ಲಿ ನೀರು ಬಂದವು ಹಾಗೂ ‘ಸಂಗೀತ ವಿದ್ಯೆಯನ್ನು ಹಣ ಸಂಪಾದಿಸಲು ಅಥವಾ ಅಹಂಕಾರವನ್ನು ಹೆಚ್ಚಿಸಲು ಉಪಯೋಗಿಸ ಬೇಡ’, ಎಂದು ಉಪದೇಶ ಮಾಡಿದರು : ಗುರುಗಳ ಅಪ್ಪಣೆ ಪಡೆದು ಹೊರಡುವ ಸಮಯ ಬಂದಿತು. ಗೋಪಾಲನು ಗುರುಗಳಿಗೆ ನಮಸ್ಕಾರ ಮಾಡಿದನು. ಹೊರಡುವಾಗ ಬೈಜೂರ ಹೃದಯ ತುಂಬಿ ಬಂತು. ಈ ಶಿಷ್ಯನು ನನ್ನ ನೆರಳಿನಂತೆ ಇದ್ದನು. ನನ್ನ ವಿದ್ಯೆಯಲ್ಲಿ ತಜ್ಞನಾಗುವುದರಲ್ಲಿ ಯಶಸ್ವಿಯಾದನು. ಆದರೆ ಇವನನ್ನು ತಡೆಯಲು ಆಗುವುದಿಲ್ಲ. ಶಿಷ್ಯನನ್ನು ಬೀಳ್ಕೊಡುವಾಗ ಬೈಜೂರವರ ಹೃದಯ ತುಂಬಿ ಬಂದು ಕಣ್ಣಲ್ಲಿ ನೀರು ಬಂತು. ಅವರು ‘ವತ್ಸ ! ನಿನಗೆ ನೀಡಿರುವ ಸಂಗೀತ ವಿದ್ಯೆಯು ಕೇವಲ ಮನುಷ್ಯಜಾತಿಯ ವಿಲಾಪ, ಮನಸ್ತಾಪ, ಮೋಹ, ದುಃಖ, ಚಿಂತೆಯನ್ನು ನಿವಾರಿಸುವುದಕ್ಕಾಗಿ ಮಾತ್ರ ಇದೆ. ಇದನ್ನು ಹಣ ಸಂಪಾದಿಸಲು ಅಥವಾ ಅಹಂಕಾರವನ್ನು ಹೆಚ್ಚಿಸಲು ಉಪಯೋಗಿಸಬೇಡ’ ಎಂದು ಉಪದೇಶವನ್ನು ಮಾಡಿದರು. ಈ ಉಪದೇಶವನ್ನು ಪಡೆದು ಗೋಪಾಲ ನಾಯಕನು ಅಲ್ಲಿಂದ ಹೊರಟನು.
. ಅಧಿಕಾರದ ಲಾಲಸೆಯಿಂದ ಮನುಷ್ಯನ ದಾರಿ ತಪ್ಪುತ್ತದೆ ಮತ್ತು ಮಾಡಬಾರದಂತಹ ಕರ್ಮಗಳನ್ನು ಮಾಡಿದ್ದರಿಂದ ಅವನ ದುರ್ದಶೆಯಾಗುತ್ತದೆ ! : ಗೋಪಾಲ ನಾಯಕನ ಗೀತ-ಸಂಗೀತದ ಪ್ರಭಾವದಿಂದ ನಾಲ್ಕೂ ಕಡೆಗಳಿಂದಲೂ ಅವನ ಜಯಕಾರವಾಗ ತೊಡಗಿತ್ತು. ಹೇಗೆ ತಾನಸೇನನು ಅಕ್ಬರನ ವಿಶೇಷ ರಾಜಗಾಯಕನಾಗಿದ್ದನೋ, ಅದೇ ರೀತಿ ಗೋಪಾಲನು ಕಾಶ್ಮೀರ ರಾಜನ ವಿಶೇಷ ರಾಜಗಾಯಕನಾದನು.
. ಗೋಪಾಲನು ಗಾಯಕರಿಗೆ ಆಹ್ವಾನ ನೀಡುತ್ತಿದ್ದನು ಮತ್ತು ಪರಾಭವಗೊಂಡ ಗಾಯಕರ ಶಿರಚ್ಛೇದ ಮಾಡುತ್ತಿದ್ದನು : ಈಗ ಗೋಪಾಲನಿಗೆ ನಾಲ್ಕೂ ಕಡೆ ಗಳಿಂದಲೂ ಯಶಸ್ಸು ಸಿಗತೊಡಗಿತು. ಇದರಿಂದ ಅವನ ಅಹಂಕಾರ ಎಷ್ಟು ಹೆಚ್ಚಾಯಿತೆಂದರೆ ಅವನು ಗಾಯಕರ ಸಮ್ಮೇಳನವನ್ನು ಏರ್ಪಡಿಸಿ ಗೀತ-ಸಂಗೀತದ ಶಾಸ್ತ್ರಾರ್ಥವನ್ನು ಮಾಡತೊಡಗಿದನು. ಅವನು ‘ನನ್ನ ಎದುರಿಗೆ ಬನ್ನಿ! ನೀವೇನಾದರೂ ನನ್ನನ್ನು ಸೋಲಿಸಿದರೆ ನಾನು ನನ್ನ ಶಿರಚ್ಛೇದ ಮಾಡಿಕೊಳ್ಳುತ್ತೇನೆ ಮತ್ತು ನಾನು ಯಾರನ್ನು ಸೋಲಿಸುತ್ತೇನೆಯೋ, ಅವರು ತಮ್ಮ ಶಿರಚ್ಛೇದ ಮಾಡಿಕೊಳ್ಳಬೇಕು’ ಎಂದು ಗಾಯಕರನ್ನು ಆಹ್ವಾನಿಸುತ್ತಿದ್ದನು.
ಅವನು ಯಾರು ಸೋಲುತ್ತಿದ್ದರೋ, ಅವರ ಕುತ್ತಿಗೆ ಯನ್ನು ಕತ್ತರಿಸುತ್ತಿದ್ದನು. ಪರಾಭವಗೊಂಡ ಗಾಯಕರ ಕುತ್ತಿಗೆಯನ್ನು ಕತ್ತರಿಸಿದ ನಂತರ ಅವರ ಪತ್ನಿ ವಿಧವೆ ಮತ್ತು ಅವರ ಮಕ್ಕಳು ಅನಾಥ, ಅಸಹಾಯಕ, ದೀನ-ಹೀನರಾಗುತ್ತಿದ್ದರು. ಆದರೆ ಗೋಪಾಲನ ಅಹಂಕಾರ ಮಾತ್ರ ಹೆಚ್ಚಾಗಿ ಅವನಿಗೆ ಆನಂದವಾಗುತ್ತಿತ್ತು. ಅವನಿಗೆ ನಾನು ಎಷ್ಟು ಜನರ ತಲೆಯನ್ನು ಕತ್ತರಿಸಿದ್ದೇನೆ, ನನಗೆ ಆಹ್ವಾನವನ್ನು ನೀಡುವವರೆಲ್ಲರೂ ಮೃತರಾಗುತ್ತಾರೆ ಎಂದು ಅನಿಸತೊಡಗಿತು. ಬೈಜುವಿನ ಸತ್‌ಶಿಷ್ಯನು ಕುಶಿಷ್ಯನಾದನು. (ಮುಂದುವರಿಯುವುದು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಬೇಸಿಗೆ ರಜೆಯ ನಿಮಿತ್ತ ಪ್ರತಿವಾರ ಓದಿ ಬೋಧಕಥೆ