ಮಹಿಳೆಯರ ರಕ್ಷಣೆಗಾಗಿ ಸ್ವರಕ್ಷಣಾ ತರಬೇತಿ ಆವಶ್ಯಕ !

ಇತ್ತೀಚೆಗೆ ಕೇಂದ್ರ ಸರಕಾರವು ಮಹಿಳೆಯರ ಸುರಕ್ಷೆಯ ವಿಷಯದಲ್ಲಿ ಉಪಾಯವೆಂದು ಸಂಚಾರಿವಾಣಿಯಲ್ಲಿ ‘ಪ್ಯಾನಿಕ್ ಕೀ’ ಯ ಸೌಲಭ್ಯ ಅಳವಡಿಸಲು ನಿರ್ಧರಿಸಿದೆ. ಈ ಸೌಲಭ್ಯದಿಂದ ಅಡಚಣೆ ಯಲ್ಲಿ ಸಿಲುಕಿದ ಮಹಿಳೆಯರಿಗೆ ಸಹಾಯವಾಗಬಹುದು. ಈ ಸೌಲಭ್ಯವು ಜನವರಿ ೨೦೧೭ ರಿಂದ ಜಾರಿಯಾಗುವುದು. ಆದ್ದರಿಂದ ಸಂಚಾರಿವಾಣಿ ಉಪಕರಣದಲ್ಲಿ ಪ್ಯಾನಿಕ್ ಕೀ ಅಳವಡಿಸುವುದನ್ನು ಉತ್ಪಾದಕರಿಗೆ ಅನಿವಾರ್ಯಗೊಳಿಸಲಾಗಿದೆ. ಈ ಕೀ ಇಲ್ಲದ ಸಂಚಾರಿವಾಣಿ ಉಪಕರಣದ ಉತ್ಪಾದನೆ ಮತ್ತು ಮಾರಾಟವನ್ನು ನಿಲ್ಲಿಸಲಾಗುವುದು. ತುರ್ತುಪರಿಸ್ಥಿತಿಯಲ್ಲಿ ಈ ಕೀ ಬಳಸಿ ಮಹಿಳೆ ಅಡಚಣೆಯಲ್ಲಿದ್ದಾಳೆಂಬ ತುರ್ತು ಕಿರುಸಂದೇಶ ಪೊಲೀಸರಿಗೆ ಹಾಗೂ ಆಪ್ತಬಂಧುಗಳಿಗೆ ತಲುಪಿಸಬಹುದು.
ಕೇವಲ ಪ್ಯಾನಿಕ್ ಕೀ ಮಾತ್ರವಲ್ಲ, ಜನವರಿ ೨೦೧೮ ರಿಂದ ಪ್ರತಿಯೊಂದು ಸಂಚಾರಿವಾಣಿ ಉಪಕರಣದಲ್ಲಿ ಜಿಪಿಎಸ್ ವ್ಯವಸ್ಥೆಯನ್ನೂ ಅನಿವಾರ್ಯಗೊಳಿಸಲಾಗಿದೆ; ಅದರಿಂದ ಪೊಲೀಸರಿಗೆ ಅಡಚಣೆಯಲ್ಲಿ ಸಿಲುಕಿದ ಮಹಿಳೆ ಎಲ್ಲಿದ್ದಾಳೆಂದು ತಕ್ಷಣ ತಿಳಿಯುವುದು. ಯಾವ ಮಹಿಳೆಯರ ಸಂಚಾರಿವಾಣಿ ಉಪಕರಣದಲ್ಲಿ ಪ್ಯಾನಿಕ್ ಕೀ ಯ ಸೌಲಭ್ಯ ಇಲ್ಲವೋ, ಅವರು ಸಂಬಂಧಪಟ್ಟ ಸಂಚಾರಿವಾಣಿ ಕಂಪನಿಯ ಕೇಂದ್ರಗಳಿಗೆ ಹೋಗಿ ಅದನ್ನು ಅಳವಡಿಸಿಕೊಳ್ಳಬಹುದು. ಈ ಸೌಲಭ್ಯದಿಂದ ಮಹಿಳೆಯರ ಮೇಲಿನ ಅತ್ಯಾಚಾರಗಳ ಘಟನೆಗಳು ಕಡಿಮೆಯಾಗಬಹುದು; ಆದರೆ ಈ ಸೌಲಭ್ಯವೆಂದರೆ, ಅಂತಿಮ ಪರಿಹಾರೋಪಾಯವಲ್ಲ. ಸದ್ಯ ಅನೇಕ ಸ್ಥಳಗಳಲ್ಲಿ ಸಂಚಾರಿವಾಣಿಯ ನೆಟ್‌ವರ್ಕ್ ಸರಿಯಾಗಿ ಸಿಗುವುದಿಲ್ಲ. ಆದ್ದರಿಂದ ಕೆಲವೇ ನಿಮಿಷಗಳ ಮಾತುಕತೆ ಸಹ ಒಮ್ಮೆಯೇ ಆಗುವುದಿಲ್ಲ. ಹೀಗಿರುವಾಗ ಪ್ಯಾನಿಕ್ ಕೀ ಯ ಸೌಲಭ್ಯವು ಪೂರ್ಣ ಕಾರ್ಯಕ್ಷಮತೆಯಿಂದ ನಡೆಯಬೇಕು. ದೂರು ಯೋಗ್ಯ ಸಮಯದಲ್ಲಿ ತಲುಪದಿದ್ದರೆ, ಕಾರ್ಯಾಚರಣೆಯೂ ಅಷ್ಟೇ ತಡವಾಗಿ ಆಗುವುದು. ಅಡಚಣೆಯಲ್ಲಿರುವ ಮಹಿಳೆ ಇರುವ ಸ್ಥಳಕ್ಕೆ ಪೊಲೀಸರು ತತ್ಪರತೆಯಿಂದ ತಲುಪು ವರೇ? ಹೆಚ್ಚುತ್ತಿರುವ ಜನಸಂಖ್ಯೆಯ ತುಲನೆಯಲ್ಲಿ ಪೊಲೀಸರು ಮತ್ತು ಪೊಲೀಸ್ ಠಾಣೆಗಳ ಸಂಖ್ಯೆಯೂ ಕಡಿಮೆಯಿದೆ. ದೇಶದಲ್ಲಿನ ಪೊಲೀಸ್ ಆಡಳಿತವು ಅತ್ಯಧಿಕ ಭ್ರಷ್ಟವಾಗಿದೆಯೆಂದು ಅನೇಕ ವರದಿಗಳಿಂದ ಸ್ಪಷ್ಟವಾಗಿದೆ. ಆದ್ದರಿಂದ ಮಹಿಳೆಯ ಮೇಲೆ ಅತ್ಯಾಚಾರ ಮಾಡುವ ಅಪರಾಧಿ ಮತ್ತು ಯಾವ ಪೊಲೀಸರಲ್ಲಿಗೆ ಆ ಮಹಿಳೆಯ ದೂರು ಹೋಗು ವುದೋ, ಅಲ್ಲಿನ ಪೊಲೀಸರಲ್ಲಿ ಒಪ್ಪಂದವಾಗಲಿಕ್ಕಿಲ್ಲವೆಂದು ಹೇಗೆ ಹೇಳ ಬಹುದು? ಇಂತಹ ಕೆಲವು ಕಾರಣಗಳಿಂದಾಗಿ ಪ್ಯಾನಿಕ್ ಕೀ ಎಂಬ ಈ ಯೋಜನೆಗೆ ಮಿತಿ ಇದೆ. ಇದಕ್ಕಿಂತ ಅತ್ಯಾಚಾರ ಮಾಡುವವರಿಗೆ ಛತ್ರಪತಿ ಶಿವಾಜಿ ಮಹಾರಾಜರು ಹೇಗೆ ಬೆಟ್ಟದ ಮೇಲಿಂದ ಉರುಳಿಸುವ ಶಿಕ್ಷೆ ಹಾಗೂ ಇತರ ಶಿಕ್ಷೆಗಳನ್ನು ನೀಡುತ್ತಿದ್ದರೋ, ಅಂತಹ ಶಿಕ್ಷೆಗಳನ್ನು ಈಗಿನ ಸರಕಾರವೂ ನೀಡಲು ಆರಂಭಿಸಿದರೆ, ಆ ದುಷ್ಕೃತ್ಯಗಳಿಗೆ ಕಡಿವಾಣ ಬೀಳಬಹುದು. ಅದಕ್ಕಾಗಿ ಕಾನೂನನ್ನು ಬದಲಾಯಿಸಿ ನ್ಯಾಯವ್ಯವಸ್ಥೆಯನ್ನೂ ವೇಗ ಗೊಳಿಸಬೇಕಾಗುವುದು. ಪೊಲೀಸ್ ದಳದಲ್ಲಿನ ಭ್ರಷ್ಟಾಚಾರವನ್ನು ಬೇರು ಸಹಿತ ಉಚ್ಚಾಟಿಸಿ ಪಾರದರ್ಶಕ ಪೊಲೀಸ್ ಆಡಳಿತವನ್ನು ಸ್ಥಾಪಿಸಬೇಕಾಗುವುದು. ಇಂದು ದೇಶದಲ್ಲಿನ ಪ್ರತಿಯೊಂದು ಮಹಿಳೆಗೆ ಸ್ವರಕ್ಷಣೆ ಮಾಡಿಕೊಳ್ಳಲು ಕಲಿಸುವುದೂ ಆವಶ್ಯಕವಾಗಿದೆ. ಆದ್ದರಿಂದ ಅತ್ಯಾಚಾರಿಗಳಿಗೆ ಅದೇ ವೇಳೆಯಲ್ಲಿ ಮಹಿಳೆಯಿಂದ ಚೆನ್ನಾಗಿ ಪಾಠ ಕಲಿಸಲಾಗುವುದು. ಜನರಿಗೆ ಧರ್ಮಾಚರಣೆಯ ಪಾಠ ಕಲಿಸಿದರೆ, ಸಮಾಜ ನೀತಿವಂತ ಆಗಲು ಸಹಾಯವಾಗಿ ಇಂತಹ ಅತ್ಯಾಚಾರಗಳ ಪ್ರಮಾಣ ಕಡಿಮೆಯಾಗುವುದು. ಈಗಿನ ಸರಕಾರವು ದೇಶದಲ್ಲಿನ ಮಹಿಳೆಯರ ಮೇಲಾಗುವ ಅತ್ಯಾಚಾರವನ್ನು ಕಡಿಮೆಗೊಳಿಸಲು ಪ್ಯಾನಿಕ್ ಕೀ ಯೋಜನೆಯೊಂದಿಗೆ ಇಂತಹ ಪರಿಹಾರೋಪಾಯಗಳನ್ನೂ ಮಾಡುವ ಅವಶ್ಯಕತೆಯಿದೆ. - ಶ್ರೀ. ಭೂಷಣ ಕುಲಕರ್ಣಿ, ಪುಣೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮಹಿಳೆಯರ ರಕ್ಷಣೆಗಾಗಿ ಸ್ವರಕ್ಷಣಾ ತರಬೇತಿ ಆವಶ್ಯಕ !