ದೆಹಲಿಯ ಅಕ್ಬರ್ ರೋಡ್ ಹೆಸರನ್ನು ಬದಲಾಯಿಸುವುದಿಲ್ಲ ! - ವೆಂಕಯ್ಯ ನಾಯ್ಡು

ಭಾಜಪದಿಂದ ಇಂತಹ ಸ್ಮಾರಕಗಳನ್ನು ಜೋಪಾನ ಮಾಡುವುದು ಅಪೇಕ್ಷಿತವಲ್ಲ.
ಮತಗಳ ಲೆಕ್ಕಾಚಾರಗಳನ್ನು ಬದಿಗಿಟ್ಟು ಭಾಜಪವು ರಾಷ್ಟ್ರಹಿತಾರ್ಥಕ್ಕಾಗಿಯಾದರೂ ದೇಶದಲ್ಲಿನ 
ಎಲ್ಲ ಸ್ಥಳಗಳಲ್ಲಿರುವ ಆಕ್ರಮಣಕಾರರ ಹೆಸರುಗಳನ್ನು ತಕ್ಷಣ ಬದಲಾಯಿಸಬೇಕು !
ಆಕ್ರಮಣಕಾರರ ಸ್ಮಾರಕವನ್ನು ನಾಶಗೊಳಿಸುವ ಬದಲು ಅವುಗಳನ್ನು 
ಜೋಪಾನ ಮಾಡುವ ಜಗತ್ತಿನ ಏಕೈಕ ದೇಶ ಭಾರತ !
ನವ ದೆಹಲಿ : ದೆಹಲಿಯ ಅಕ್ಬರ್ ರೋಡ್‌ನ ಹೆಸರನ್ನು ಬದಲಾಯಿಸುವುದಿಲ್ಲ, ಎಂದು ಕೇಂದ್ರೀಯ ನಗರ ವಿಕಾಸಮಂತ್ರಿ ವೆಂಕಯ್ಯನಾಯ್ಡು ಇವರು ಸ್ಪಷ್ಟಪಡಿಸಿದರು. ಅಕ್ಬರ್ ರೋಡ್‌ನ ಹೆಸರನ್ನು ಬದಲಾಯಿಸಿ ಅದಕ್ಕೆ ಮಹಾರಾಣಾ ಪ್ರತಾಪನ ಹೆಸರನ್ನಿಡಬೇಕೆಂದು ಕೇಂದ್ರಸಚಿವ ವಿ.ಕೆ.ಸಿಂಹ ಇವರು ನಗರವಿಕಾಸ ಮಂತ್ರಾಲಯಕ್ಕೆ ಪತ್ರ ಬರೆದು ವಿನಂತಿಸಿದ್ದರು. ಇದರೊಂದಿಗೆ ಇನ್ನೂ ಕೆಲವು ನೇತಾರರು ಸಹ ಅಕ್ಬರ್ ರೋಡ್‌ನ ಹೆಸರನ್ನು ಬದಲಾಯಿಸಬೇಕೆಂದು ವಿನಂತಿಸಿದ್ದರು.
ಆದರೆ ಹೆಸರು ಬದಲಾಯಿಸುವುದು ನನ್ನ ಕಾರ್ಯಕ್ರಮವಲ್ಲ, ಎಂದು ವೆಂಕಯ್ಯ ನಾಯ್ಡು ಇವರು ಒಂದು ವೃತ್ತವಾಹಿನಿಯೊಂದಿಗೆ ಮಾತನಾಡುವಾಗ ಹೇಳಿದರು. ಈ ಪತ್ರಕ್ಕೆ ನೀಡಿದ ಉತ್ತರದಲ್ಲಿ ವೆಂಕಯ್ಯ ನಾಯ್ಡು ಇವರು ಮಹಾರಾಣಾ ಪ್ರತಾಪನ ಶೌರ್ಯವನ್ನು ಮುಕ್ತಕಂಠದಿಂದ ಕೊಂಡಾಡಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ದೆಹಲಿಯ ಅಕ್ಬರ್ ರೋಡ್ ಹೆಸರನ್ನು ಬದಲಾಯಿಸುವುದಿಲ್ಲ ! - ವೆಂಕಯ್ಯ ನಾಯ್ಡು