ವ್ಯಷ್ಟಿ ಸಾಧನೆಗಾಗಿ ಮನೆಗೆ ಕಳುಹಿಸಲಾದ ಸಾಧಕರ ಬಗ್ಗೆ ಪ.ಪೂ. ಡಾಕ್ಟರರು ಹೇಳಿದ ಕಾರಣಗಳು ಮತ್ತು ಆ ಬಗ್ಗೆ ಸಾಧಕಿ ಮಾಡಿದ ಚಿಂತನೆ

ಓರ್ವ ಸಾಧಕಿ : ದೇವದ್, ಮೀರಜ್ ಮುಂತಾದ ಆಶ್ರಮಗಳಲ್ಲಿ ನಡೆಯುತ್ತಿರುವ ಶುದ್ಧೀಕರಣ ಪ್ರಕ್ರಿಯೆ ಮೂಲಕ ಅಥವಾ ಇತರ ಅನೇಕ ಸಾಧಕರನ್ನು ವ್ಯಷ್ಟಿ ಸಾಧನೆಗಾಗಿ ಮನೆಗೆ ಕಳುಹಿಸಲಾಗಿದೆ, ಇದರ ಅರ್ಥವೇನು ?
ಪ.ಪೂ. ಡಾಕ್ಟರ್ :
೧. ದೇವರ ಪ್ರತಿಯೊಂದು ಕೃತಿಯ ಹಿಂದಿನ ಕಾರ್ಯಕಾರಣಭಾವವು ವಿಭಿನ್ನವಾಗಿರುತ್ತದೆ.
೨. ಕೊಡು-ಕೊಳ್ಳುವ ಲೆಕ್ಕವೂ ಇರುತ್ತದೆ. ಹಿಂದೆ ನಾವು ಆ ಸಾಧಕ ನೊಂದಿಗೆ ಹೇಗೆ ವರ್ತಿಸಿದ್ದೆವೋ, ಅದೇ ರೀತಿ ಈ ಜನ್ಮದಲ್ಲಿ ಘಟಿಸುತ್ತದೆ.
೩. ಪ್ರತ್ಯಕ್ಷ ಸಂತರು ಪ್ರಕ್ರಿಯೆಯನ್ನು ತೆಗೆದುಕೊಳ್ಳುತ್ತಿರುವುದರಿಂದ, ಎಷ್ಟೋ ಜನ್ಮದ ಬೆಟ್ಟದಷ್ಟಿರುವ ಪ್ರಾರಬ್ಧವು ಕರಗುತ್ತಿದೆ. ಸಂತರು ಹೇಳಿದ್ದನ್ನು ಕೇಳಿದರೆ ಬೇಗನೆ ಸಾಧನೆಯಾಗುತ್ತದೆ.
೪. ಈ ಎಲ್ಲ ಪರಿಸ್ಥಿತಿಯಲ್ಲಿ ನನಗೆ ಒಬ್ಬ ಸಾಧಕನೂ ಪತ್ರ ಬರೆದು ಅಥವಾ ಸಂದೇಹವನ್ನು ಕೇಳಲಿಲ್ಲ ಅಥವಾ ಅದರ ಹಿಂದಿನ ಕಾರ್ಯಕಾರಣ ಭಾವವನ್ನು ತಿಳಿದುಕೊಂಡಿಲ್ಲ.

೫. ಸಮರ್ಥ ರಾಮದಾಸಸ್ವಾಮಿಗಳ ಶಿಷ್ಯ ಕಲ್ಯಾಣಸ್ವಾಮಿ ಮುಂತಾ ದವರ ಉದಾಹರಣೆಗಳನ್ನು ನಾವು ಸತ್ಸಂಗದಲ್ಲಿ ಹೇಳುತ್ತೇವೆ; ಆದರೆ ಸ್ವತಃ ಶಿಷ್ಯನಾಗುವ ಸಮಯ ಬಂದಾಗ, ನಮ್ಮ ಅಹಂ ಮತ್ತು ದೋಷಗಳು ಪ್ರಕಟವಾಗಿ ನಮ್ಮ ಸಾಧನೆಯಲ್ಲಿ ಹಾನಿಯಾಗುತ್ತದೆ. ಒಬ್ಬರೂ ಕೈಗಳನ್ನು ಜೋಡಿಸಿ ಶರಣಾಗತಭಾವದಿಂದ ವಿನಂತಿಸಲಿಲ್ಲ ಅಥವಾ ಯಾರೂ ಬಿಕ್ಕಿಬಿಕ್ಕಿ ಅಳಲಿಲ್ಲ. ಒಬ್ಬರೂ ನಾನು ನಿಜವಾಗಿಯೂ ಅಪರಾಧಿಯಾಗಿದ್ದೇನೆ; ಆದರೆ ನನ್ನನ್ನು ಆಶ್ರಮದಿಂದ ಮನೆಗೆ ಕಳುಹಿಸಬೇಡಿ, ಎಂದು ಹೇಳಲಿಲ್ಲ.
ಸಾಧಕರನ್ನು ಮತ್ತು ಸಂತರನ್ನು ನಿರ್ಮಿಸಲು ನಾನು ಆಶ್ರಮವನ್ನು ಕಟ್ಟಿದ್ದೇನೆ; ಆದರೆ ಸಾಧಕರಲ್ಲಿನ ದೋಷ ಮತ್ತು ಅಹಂಗಳಿಂದಾಗಿ ಅವರಲ್ಲಿ ಕೆಲವರು ಹೊರ ಬಂದರು; ಅವರಿಗೆ ನಾವು ಹೊರಗೆ ಏನಾದರೂ ಮಾಡಬಹುದು ಎಂದೆನಿಸಿರಬಹುದು.
ಇದನ್ನೆಲ್ಲ ಕೇಳಿದ ನಂತರ ನನಗೆ, ಕೊನೆಗೆ ಇದೆಲ್ಲದಕ್ಕೂ ಸಾಧಕರ ಸ್ವಭಾವ ದೋಷ, ಅಹಂ, ಕೊಡು-ಕೊಳ್ಳುವುದು, ಪ್ರಾರಬ್ಧ ಹೀಗೆ ಅನೇಕ ವಿಷಯಗಳು ಕಾರಣವಾಗಿವೆ ಎಂದೆನಿಸಿತು. ಇದೆಲ್ಲವನ್ನು ಸಂತರೇ ಅರಿಯಬಲ್ಲರು; ಆದರೆ ಒಂದು ಮಾತ್ರ ಸತ್ಯ, ದೇವರ ಇಚ್ಛೆಯಿಲ್ಲದೇ ಒಂದು ಎಲೆಯೂ ಅಲ್ಲಾಡುವುದಿಲ್ಲ. ನಮ್ಮ ಹಿಂದು-ಮುಂದಿನ ವಿಚಾರ ಮಾಡದೇ ಸಾಧನೆಯನ್ನು ಕಲಿಸಿದ, ಹೂವಿನ ಹಾಗೆ ಕಾಪಾಡಿದ, ಚಿಕ್ಕವರಿಂದ ದೊಡ್ಡವರನ್ನಾಗಿ ಮಾಡಿದ, ಕಠಿಣ ಪ್ರಸಂಗಗಳನ್ನು ಧೈರ್ಯದಿಂದ ಎದರಿಸಲು ಕಲಿಸಿದ, ಕ್ಷಣಕ್ಷಣಕ್ಕೂ ಕೇವಲ ಇತರರ, ಸಮಾಜದ, ರಾಷ್ಟ್ರದ, ವಿಶ್ವದ, ಬ್ರಹ್ಮಾಂಡದ ವಿಚಾರ ಮಾಡಿ ತಮ್ಮ ಸರ್ವಸ್ವವನ್ನು ಪಣಕ್ಕೆ ಹಚ್ಚಿದಂತಹ ಗುರುಗಳ ಬಗ್ಗೆ ಸ್ವಲ್ಪವೂ ವಿಚಾರ ಮಾಡದೇ ನಾವು ಸ್ವಂತದ ಬಗ್ಗೆ ಎಷ್ಟು ವಿಚಾರ ಮಾಡುತ್ತೇವೆ, ಎಂಬುದು ಗಮನಕ್ಕೆ ಬಂದಿತು. ಆಶ್ರಮ, ಗುರುಗಳ ಬಗ್ಗೆ ಇರುವ ಕೃತಜ್ಞತೆ ಇದೇನಾ ?
ಒಂದು ವೇಳೆ ನಾವು ಆಶ್ರಮದಿಂದ ದೂರ ಹೋದರೂ, ಗುರುಗಳು ನಮ್ಮನ್ನು ಧಿಕ್ಕರಿಸಿಲ್ಲ. ಸಾಧಕರಿಂದ ಕೇಳಿದ ಅನುಭೂತಿಯಿಂದ ಪ.ಪೂ. ಡಾಕ್ಟರರು ಸಾಧಕರ ಪ್ರತಿಯೊಂದು ಸ್ಥಿತಿಯಲ್ಲಿ ಕಾಳಜಿಯನ್ನು ತೆಗೆದುಕೊಂಡಿದ್ದು ಮತ್ತು ಅವರ ವ್ಯಾವಹಾರಿಕ ಜೀವನವನ್ನು ಸರಿದಾರಿಗೆ ತಂದಿದ್ದು ಗಮನಕ್ಕೆ ಬಂದಿತು. ಆಗ ನನಗೆ ಅಳು ಉಕ್ಕಿ ಬಂದು, ನಮ್ಮಲ್ಲಿ ಯಾವುದೇ ಅರ್ಹತೆ ಇಲ್ಲದಿದ್ದರೂ ದೇವರು ನಮಗೆ ತನ್ನ ಸಗುಣ ರೂಪವನ್ನು ನೀಡಿದ್ದಾನೆ; ಆದರೆ ನಾವೇ ಕರ್ಮದಿಂದ ದರಿದ್ರರಾಗಿದ್ದೇವೆ. ಗುರುಗಳು ಧಿಕ್ಕರಿಸಿದರೂ, ಹೊರಗೆ ದೂಡಿದರೂ, ಹೊಡೆದರೂ, ದೂರ ಮಾಡಿದರೂ ಅದು ನನಗಾಗಿ ಕೃಪೆಯೇ ಆಗಿದೆ. ನಮ್ಮ ಗುರುಗಳು ಎಷ್ಟು ಮಹಾನ್ ಇದ್ದಾರೆಂದರೆ, ಅವರು ಪ್ರತಿಕ್ಷಣ ನಮಗೆ ಒಳ್ಳೆಯದನ್ನೇ ಮಾಡಿದರು, ಮಾಡುತ್ತಿದ್ದಾರೆ ಮತ್ತು ಮಾಡುವರು.
ಸಾಧಕರೇ, ನಾವು ಇವೆಲ್ಲವುಗಳ ಬಗ್ಗೆ ವಿಚಾರ ಮಾಡಿ ಸಾಧನೆಯಲ್ಲಿ ಮಾರ್ಗಕ್ರಮಣ ಮಾಡುತ್ತಾ ಹೋಗೋಣ. ಮಾರುತಿಯ ದಾಸ್ಯಭಕ್ತಿ, ಕಲ್ಯಾಣ ಸ್ವಾಮಿಯ ಗುರುಭಕ್ತಿ ಇದನ್ನು ಕೇವಲ ಸತ್ಸಂಗದಲ್ಲಿ ಕೇಳುವುದಕ್ಕಷ್ಟೇ ಸೀಮಿತವಾಗಿರದೇ ಅದನ್ನು ಕಲಿಯುಗದಲ್ಲಿ ಕೃತಿಯಲ್ಲಿ ತರಬೇಕಾಗಿದೆ. ಶ್ರೀ ಗುರುಗಳ ಕೃಪೆಯಿಂದ ಇದು ಸಹಜ ಸಾಧ್ಯವಿದೆ, ಎಂಬುದನ್ನು ಗಮನದಲ್ಲಿಡೋಣ. ಶ್ರೀಗುರುಗಳಿಗೆ ಸಂಪೂರ್ಣ ಶರಣಾಗಿ, ಇರುವ ಸ್ಥಿತಿಯನ್ನು ಎದುರಿಸಿ ಮತ್ತು ಅದನ್ನು ಸ್ವೀಕರಿಸಿ ಅವರಿಗೆ ಅಪೇಕ್ಷಿತ ರೀತಿಯಲ್ಲಿ ಸಾಧನೆಯನ್ನು ಮಾಡೋಣ, ಹಿಂದೂ ರಾಷ್ಟ್ರದ ಮಹಾನ್ ಧ್ಯೇಯದ ವಿಚಾರ ಮಾಡಿ ಮಾರ್ಗಕ್ರಮಣ ಮಾಡೋಣ, ಇದೇ ಗುರುಚರಣಗಳಲ್ಲಿ ಅನಂತ ಕೋಟಿ ಪ್ರಾರ್ಥನೆ.
- ಕು. ಅರುಣಾ ಪಾಂಡುರಂಗ ಕೌಲಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೩.೧.೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ವ್ಯಷ್ಟಿ ಸಾಧನೆಗಾಗಿ ಮನೆಗೆ ಕಳುಹಿಸಲಾದ ಸಾಧಕರ ಬಗ್ಗೆ ಪ.ಪೂ. ಡಾಕ್ಟರರು ಹೇಳಿದ ಕಾರಣಗಳು ಮತ್ತು ಆ ಬಗ್ಗೆ ಸಾಧಕಿ ಮಾಡಿದ ಚಿಂತನೆ