ಧರ್ಮಾಚರಣೆಯ ಮಹತ್ವ !

. ಶಾರೀರಿಕ ಆರೋಗ್ಯಕ್ಕಿಂತ ಮಾನಸಿಕ ಆರೋಗ್ಯವು ಹೆಚ್ಚು ಮಹತ್ವದ್ದು ! : ಪಾಶ್ಚಾತ್ಯ ಸಂಸ್ಕೃತಿಯ ಗುರಿ
ಕೇವಲ ಶಾರೀರಿಕ ಆರೋಗ್ಯದ ಕಡೆಗೆ ಇರುತ್ತದೆ; ಆದರೆ ನಮ್ಮ ಸಾಂಸ್ಕೃತಿಕ ಧಾರಣೆಯು ಮೊದಲು ಮಾನಸಿಕ ಆರೋಗ್ಯದೆಡೆಗೆ ನಂತರ ಶಾರೀರಿಕ ಆರೋಗ್ಯದೆಡೆಗೆ ಇರುತ್ತದೆ. ಇದಕ್ಕಾಗಿ ಭಗವಂತನು ಮನುಷ್ಯನ ಕಲ್ಯಾಣಕ್ಕಾಗಿ ವೇದವನ್ನು ನಿರ್ಮಿಸಿದನು. - ಗುರುದೇವ ಡಾ. ಕಾಟೇಸ್ವಾಮೀಜಿ (ಘನಗರ್ಜಿತ, ಜೂನ್ ೨೦೦೮)
ಭಾವಾರ್ಥ : ವೇದ ಸ್ವರೂಪಿ ಧರ್ಮವನ್ನು ಆಚರಣೆ ಮಾಡುವುದರಿಂದ ಮನುಷ್ಯನ ಮಾನಸಿಕ ಆರೋಗ್ಯವು ಉತ್ತಮವಿರುತ್ತದೆ. ಮಾನಸಿಕ ಆರೋಗ್ಯದಿಂದಾಗಿ ಮಾನಸಿಕ ಅಸಂತೋಷ ಮತ್ತು ದುಃಖ, ಯಾತನೆ, ನಿರಾಶೆ, ಸ್ವೇಚ್ಛಾಚಾರ ಅಥವಾ ವಿಕೃತಿ ಇತ್ಯಾದಿ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಮೇಲಿನ ಸಂತವಚನದ ಭಾವಾರ್ಥವಾಗುತ್ತದೆ.
. ಸುಖದ ಮೂಲವು ಧರ್ಮಾಚರಣೆಯಲ್ಲಿರುವುದು
ಸುಖಸ್ಯ ಮೂಲಂ ಧರ್ಮಃ
 - ಚಾಣಕ್ಯನೀತಿ, ಅಧ್ಯಾಯ ೧, ಶ್ಲೋಕ ೨
ಅರ್ಥ : ಧರ್ಮವು ಸುಖದ ಮೂಲವಾಗಿದೆ.
ಅಧರ್ಮಾಚರಣೆಯಿಂದಾಗಿ ಕೇವಲ ತಾತ್ಕಾಲಿಕ ಸುಖ ದೊರೆಯುತ್ತದೆ ಮತ್ತು ದೀರ್ಘಕಾಲ ದುಃಖವನ್ನು ಭೋಗಿಸಬೇಕಾಗುತ್ತದೆ. ತದ್ವಿರುದ್ಧ ಶ್ರೇಷ್ಠ ಸುಖದ ಮೂಲವು ಧರ್ಮವಾಗಿರು ವುದರಿಂದ ಧರ್ಮಾಚರಣೆಯಿಂದಾಗಿ ಶ್ರೇಷ್ಠ ಸುಖವು ದೀರ್ಘಕಾಲ ಉಳಿಯುತ್ತದೆ. ಆದ್ದರಿಂದ ಲಿವ್-ಇನ್... ಈ ಸ್ವೇಚ್ಛಾಚಾರ ದಿಂದಾಗಿ ದೊರೆಯುವ ತಾತ್ಕಾಲಿಕ ಸುಖಕ್ಕಿಂತ ಧರ್ಮ ಸಮ್ಮತ ವೈವಾಹಿಕ ಜೀವನದಿಂದಾಗಿ ದೊರೆಯುವ ಶ್ರೇಷ್ಠ ಸುಖವು ದೀರ್ಘ ಕಾಲ ಉಳಿಯುತ್ತದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಧರ್ಮಾಚರಣೆಯ ಮಹತ್ವ !