ರಾಜ್ಯ ಪೊಲೀಸರಿಂದ ಪ್ರಮೋದ ಮುತಾಲಿಕ್‌ರವರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಗದಾಪ್ರಹಾರ !

ರಾಷ್ಟ್ರವಿರೋಧಿ ಪ್ರಚೋದನಕಾರಿ ಭಾಷಣ ಮಾಡುವ ಎಮ್‌ಐಎಮ್ ಮುಖಂಡರನ್ನು ತಡೆಯದ
ಪೊಲೀಸರು ರಾಷ್ಟ್ರಪ್ರೇಮಿ ಹಿಂದೂ ಮುಖಂಡರನ್ನು ತಕ್ಷಣವೇ ನಿರ್ಬಂಧಿಸುತ್ತಾರೆ ಎಂಬುದನ್ನು ಗಮನದಲ್ಲಿಡಿ !
ಸಾಮೂಹಿಕ ಶನೀಶ್ವರ ಪೂಜೆಯ ಕಾರ್ಯಕ್ರಮಕ್ಕೆ ಉಪಸ್ಥಿತರಿರಲು ಪೊಲೀಸರಿಂದ ನಿಷೇಧ !
ಮಂಗಳೂರು : ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ. ಪ್ರಮೋದ ಮುತಾಲಿಕ ಇವರು ಎಪ್ರಿಲ್ ೧೬ ರಂದು ಇಲ್ಲಿನ ಅಳಪೆಯಲ್ಲಿ ಆಯೋಜಿಸಿದ್ದ ವಾರ್ಷಿಕ ಸಾಮೂಹಿಕ ಶನೀಶ್ವರ ಪೂಜೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಪೊಲೀಸ್ ಆಯುಕ್ತರಾದ ಚಂದ್ರಶೇಖರ ಇವರು ನಿರ್ಬಂಧ ಹೇರಿದ್ದರು. ಹಾಗೆಯೇ ೧೬ ರಿಂದ ೨೨ ಎಪ್ರಿಲ್ ಈ ಅವಧಿಯಲ್ಲಿ ಜರುಗುವ ಯಾವುದೇ ಸಾರ್ವಜನಿಕ ಸಭೆ ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಲು, ಅಲ್ಲದೇ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಇತರ ಮಾಧ್ಯಮಗಳ ಮುಖಾಂತರ ಭಾಷಣ ಮಾಡಲು ಸಹ ಕಲಂ ೧೪೪ ಕ್ಕನುಸಾರ ನಿರ್ಬಂಧ ವಿಧಿಸಲಾಗಿದೆ. ಶ್ರೀ. ಮುತಾಲಿಕ ಇವರು ೨೦೦೯ ರಲ್ಲಿ ನಡೆದ ಪಬ್ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗಲು ಬಂದಿದ್ದರು.
ಈ ನಿರ್ಬಂಧದ ಕುರಿತು ಪ್ರತಿಕ್ರಿಯಿಸಿದ ಶ್ರೀ. ಮುತಾಲಿಕ್, ‘ನನ್ನನ್ನು ನಿರ್ಬಂಧಿಸಿರುವುದು ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿಯ ಒಂದು ಭಾಗವಾಗಿದೆ. ಮೈಸೂರಿನಲ್ಲಿ ೩ ಹಿಂದುತ್ವವಾದಿ ಕಾರ್ಯಕರ್ತರ ಹತ್ಯೆಯಾಗಿದೆ. ನನಗೂ ರಾಜ್ಯದಲ್ಲಿ ೮ ಸ್ಥಳಗಳಿಗೆ ಹೋಗಲು ನಿರ್ಬಂಧಿಸಲಾಗಿದೆ. ಹಿಂದೂ ಜಾಗರಣ ವೇದಿಕೆಯ ಜಗದೀಶ ಕಾರಂತ ಇವರಿಗೆ ಪುತ್ತೂರಿನಲ್ಲಿ ಜರುಗಿದ ರಾಮನವಮಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಿರ್ಬಂಧಿಸಿದ್ದಾರೆ. ಇದರ ಅರ್ಥ ಇದು ರಾಜ್ಯಸರಕಾರದ ಹಿಂದೂಗಳನ್ನು ದಮನಿಸುವ ಷಡ್ಯಂತ್ರವಾಗಿದೆ’ ಎಂದರು. ನಾನು ಮಂಗಳೂರಿನ ನ್ಯಾಯಾಲಯಕ್ಕೆ ಹಾಜರಾಗಲು ಬಂದಿದ್ದೆನು. ನನಗೆ ಪೂಜೆಯ ಕಾರ್ಯಕ್ರಮಕ್ಕೆ ಹೋಗಲು ನಿರ್ಬಂಧಿಸಲು ಅರ್ಜಿಯನ್ನು ಸಲ್ಲಿಸಲಾಗಿತ್ತು. ನಾನು ಈ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡುತ್ತೇನೆ ಎಂದು ಪೊಲೀಸರಿಗೆ ಕನಸೇನಾದರೂ ಬಿದ್ದಿತ್ತೇ ? ನನ್ನ ವಿರುದ್ಧ ೯೦ ಪ್ರಕರಣಗಳಿವೆಯೆಂದು ಪೊಲೀಸರು ಹೇಳುತ್ತಾರೆ. ಇದರಲ್ಲಿ ೧೩ ಪ್ರಕರಣಗಳನ್ನು ಬಿಟ್ಟರೆ ಇನ್ನುಳಿದ ಪ್ರಕರಣಗಳಲ್ಲಿ ನ್ಯಾಯಾಲಯವು ನನ್ನನ್ನು ನಿರ್ದೋಷಿಯೆಂದು ತೀರ್ಪನ್ನಿತ್ತಿದೆ. ಇದರರ್ಥ ನ್ಯಾಯಾಲಯವು ನನ್ನನ್ನು ಗೌರವಿಸುತ್ತದೆ; ಆದರೆ ಪೊಲೀಸರು ಮಾತ್ರ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡುತ್ತಿದ್ದಾರೆ, ಎಂದು ಶ್ರೀ. ಮುತಾಲಿಕ್ ಇವರು ನುಡಿದರು. (ರಾಷ್ಟ್ರಪ್ರೇಮಿ ಹಿಂದೂಗಳಿಗೆ ಕಾರ್ಯ ಮಾಡಲು ಹಿಂದೂ ರಾಷ್ಟ್ರ ಬಿಟ್ಟರೆ ಪರ್ಯಾಯವಿಲ್ಲ ! - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ರಾಜ್ಯ ಪೊಲೀಸರಿಂದ ಪ್ರಮೋದ ಮುತಾಲಿಕ್‌ರವರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಗದಾಪ್ರಹಾರ !