ಮನುಷ್ಯಬಲದ ಅಭಾವದಿಂದ ಕೇಂದ್ರೀಯ ತನಿಖಾ ದಳವೇ ನೆಲಕ್ಕುರುಳುವುದು ! - ಕೇಂದ್ರೀಯ ತನಿಖಾದಳದ ಸಂಚಾಲಕ ಅನಿಲ ಸಿನ್ಹಾ ಮೇರಾ ಭಾರತ ಮಹಾನ್ !

ಇನ್ನೂ ೧ ಸಾವಿರದ ೫೩೧ ಹುದ್ದೆಗಳು ಖಾಲಿ !
ನವ ದೆಹಲಿ : ಕೇಂದ್ರೀಯ ತನಿಖಾ ವಿಭಾಗದಲ್ಲಿ (ಸಿಬಿಐ) ಸಿಬ್ಬಂದಿಗಳ ಅಭಾವವಿದೆ. ನಮಗೆ ಹೆಚ್ಚೆಚ್ಚು ಸಿಬ್ಬಂದಿಗಳ ಅವಶ್ಯಕತೆಯಿದೆ. ಹಾಗಾಗದಿದ್ದರೆ, ನಮ್ಮ ಸಂಪೂರ್ಣ ವ್ಯವಸ್ಥೆಯೇ ನೆಲಕ್ಕುರುಳುವುದು, ಎಂದು ಈ ವಿಭಾಗದ ಸಂಚಾಲಕ ಅನಿಲ ಸಿನ್ಹಾ ಮಾಹಿತಿ ನೀಡಿದರು. ಸಂಸತ್ ಸಮಿತಿಯ ಮುಂದೆ ಸಿಬಿಐ ಪರವಾಗಿ ಮಾತನಾಡುವಾಗ ಅವರು ಕಳೆದ ಕೆಲವು ವರ್ಷಗಳಲ್ಲಿ ಸಿಬಿಐಗೆ ಬರುವ ಪ್ರಕರಣಗಳ ಪ್ರಮಾಣ ಬಹಳ ಹೆಚ್ಚಾಗಿದೆ. ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳಿಂದಲೂ ಹೆಚ್ಚು ಪ್ರಕರಣಗಳು ನಮ್ಮಲ್ಲಿಗೆ ಬರುತ್ತಿವೆ. ವರ್ಷಕ್ಕೆ ಸುಮಾರು ೭೦೦ ಪ್ರಕರಣಗಳ ತನಿಖೆ ಮಾಡುವ ಕ್ಷಮತೆ ನಮ್ಮಲ್ಲಿರುವಾಗ ಈ ಸಂಖ್ಯೆದುಪ್ಪಟ್ಟಾಗಿದೆ.
ಸದ್ಯ ನಮ್ಮಲ್ಲಿ ದೇಶದ ೧ ಸಾವಿರದ ೨೦೦ ಹಾಗೂ ವಿದೇಶದಲ್ಲಿನ ೬೨ ಪ್ರಕರಣಗಳು ತನಿಖೆಗಾಗಿ ಬಾಕಿ ಇವೆ, ಎಂದು ಹೇಳಿದರು. ಅವುಗಳಲ್ಲಿ ೩೧ ಪ್ರಕರಣಗಳು ಕಳೆದ ಕೆಲವು ವರ್ಷಗಳಿಂದ ನೆನೆಗುದಿಯಲ್ಲಿವೆ. ಸಿಬಿಐಯಲ್ಲಿ ಖಾಲಿ ಜಾಗಗಳ ಸಂಖ್ಯೆ ೧ ಸಾವಿರದ ೫೩೧ಕ್ಕೇರಿದೆ. ನಮಗೆ ೭ ಸಾವಿರದ ೨೨೪ ಹುದ್ದೆಗಳ ಅವಕಾಶ ಇರುವಾಗ ಇಷ್ಟು ಜಾಗಗಳು ಖಾಲಿಯಾಗಿದ್ದರೆ ತನಿಖೆಯ ಮೇಲೆ ಪರಿಣಾಮವಾಗುತ್ತದೆ, ಎಂದು ಸಹ ಸಿನ್ಹಾ ಹೇಳಿದರು. ಅವರ ಹೇಳಿಕೆ ಆಲಿಸಿದ ನಂತರ ಸಂಸತ್ ಸಮಿತಿ ಖಾಲಿ ಇರುವ ಜಾಗವನ್ನು ತುಂಬಿಸುವ ವಿಷಯದಲ್ಲಿ ಕೇಂದ್ರ ಸರಕಾರ ಶೀಘ್ರವೇ ವರದಿ ತೆಗೆದುಕೊಳ್ಳಬೇಕೆಂದು ಸೂಚಿಸಿದೆ. ಇಷ್ಟು ಹುದ್ದೆಗಳು ಖಾಲಿ ಇರುವ ವಿಷಯ ದಲ್ಲಿ ಸಮಿತಿಯು ತೀವ್ರ ಚಿಂತೆಯನ್ನೂ ವ್ಯಕ್ತಪಡಿಸಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮನುಷ್ಯಬಲದ ಅಭಾವದಿಂದ ಕೇಂದ್ರೀಯ ತನಿಖಾ ದಳವೇ ನೆಲಕ್ಕುರುಳುವುದು ! - ಕೇಂದ್ರೀಯ ತನಿಖಾದಳದ ಸಂಚಾಲಕ ಅನಿಲ ಸಿನ್ಹಾ ಮೇರಾ ಭಾರತ ಮಹಾನ್ !