ರಾಮನಾಥಿ (ಗೋವಾ)ಯಲ್ಲಿನ ಸನಾತನ ಆಶ್ರಮದಲ್ಲಿ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಶುಭಹಸ್ತದಿಂದ ಎರಡನೇ ಸಾಗ್ನಿಚಿತ್ ಅಶ್ವಮೇಧ ಮಹಾಸೋಮಯಾಗದ ಸಂಕಲ್ಪ !

ಹಿಂದೂ ರಾಷ್ಟ್ರದ ಸ್ಥಾಪನೆಯಲ್ಲಿನ ಅಡಚಣೆಗಳು ದೂರವಾಗಬೇಕು ಮತ್ತು ಇಡೀ ವಿಶ್ವದಲ್ಲಿ ಸುಖ ಮತ್ತು ಶಾಂತಿ ನೆಲೆಸಬೇಕೆಂದು ಬಾರ್ಶಿ (ಸೋಲಾಪುರ ಜಿಲ್ಲೆ)ಯಲ್ಲಿನ ಯೋಗಿರಾಜ ವೇದವಿಜ್ಞಾನ ಆಶ್ರಮದ ವತಿಯಿಂದ ದ್ವಿತೀಯ ಸಾಗ್ನಿಚಿತ್ ಅಶ್ವಮೇಧ ಮಹಾಸೋಮಯಾಗದ ಆಯೋಜನೆ
ಸಾಗ್ನಿಚಿತ್ ಅಶ್ವಮೇಧ ಮಹಾಸೋಮಯಾಗದ ಸಂಕಲ್ಪ ಮಾಡುತ್ತಿರುವ
ಪರಾತ್ಪರ ಗುರು ಡಾ. ಜಯಂತ ಆಠವಲೆ. ಜೊತೆಗೆ ವಾಜಪೇಯಿಯಾಜಿ ಶ್ರೀ. ಕೇತನ ಕಾಳೆ ಗುರೂಜಿ
ರಾಮನಾಥಿ (ಗೋವಾ) : ಹಿಂದೂ ರಾಷ್ಟ್ರದ ಸ್ಥಾಪನೆಯಲ್ಲಿನ ಅಡಚಣೆಗಳು ದೂರವಾಗಬೇಕು ಮತ್ತು ಇಡೀ ವಿಶ್ವದಲ್ಲಿ ಸುಖ ಮತ್ತು ಶಾಂತಿ ನೆಲೆಸಬೇಕೆಂದು ಸೋಲಾಪುರ ಜಿಲ್ಲೆಯ ಬಾರ್ಶಿ ತಾಲೂಕಿನ ಕಾಸಾರವಾಡಿಯಲ್ಲಿನ ಶ್ರೀ ಯೋಗಿರಾಜ ವೇದ ವಿಜ್ಞಾನ ಆಶ್ರಮದಲ್ಲಿ ದ್ವಿತೀಯ ಸಾಗ್ನಿಚಿತ್ ಅಶ್ವಮೇಧ ಮಹಾಸೋಮಯಾಗದ ಆಯೋಜನೆ ಮಾಡಲಾಗಿದೆ. ಈ ಯಾಗದ ಸಂಕಲ್ಪವನ್ನು ಸನಾತನದ ಸಂಸ್ಥಾಪಕರಾದ ಪರಾತ್ಪರ ಗುರುಗಳು ಡಾ. ಜಯಂತ ಆಠವಲೆಯವರ ಶುಭಹಸ್ತದಿಂದ ೨೦೧೬ರ ಎಪ್ರಿಲ್ ೧೪ ರಂದು ರಾಮನಾಥಿ, ಗೋವಾದಲ್ಲಿನ ಸನಾತನದ ಆಶ್ರಮದಲ್ಲಿ ಮಾಡಲಾಯಿತು.
ಆಗ ಅಶ್ವಮೇಧಯಾಜಿ ಪ.ಪೂ. ನಾನಾ ಕಾಳೆ ಗುರೂಜಿಯವರ ಹಿರಿಯ ಚಿರಂಜೀವ ವಾಜಪೇಯಿಯಾಜಿ ಶ್ರೀ. ಕೇತನ ಕಾಳೆ ಗುರೂಜಿ ಮತ್ತು ವೇದಮೂರ್ತಿ ಶ್ರೀ. ಧನಂಜಯ ಗೋಡಬೋಲೆಯವರು ಉಪಸ್ಥಿತರಿದ್ದರು. ಅದರನಂತರ ಅವರ ಅಂಗಭೂತ ಅಶ್ವೀಯ ಹೋಮವನ್ನು ಮಾಡಲಾಯಿತು. ಈ ಹೋಮದ ಶ್ರೀ. ಕೇತನ ಕಾಳೆ ಗುರೂಜಿ ಮತ್ತು ವೇದಮೂರ್ತಿ ಶ್ರೀ. ಧನಂಜಯ ಗೋಡಬೋಲೆಯವರು ಮಾಡಿದರು. ಅದರೊಂದಿಗೆ ಶ್ರೀ ಜಗದಂಬಾರವರ ಕೃಪೆಯಾಗಬೇಕೆಂದು ಒಂದು ಸಪ್ತಶತಿ ಪಾಠದ ಹವನವನ್ನೂ ಮಾಡಲಾಯಿತು. ಇದರ ಮೊದಲು ಶ್ರೀ ಯೋಗಿರಾಜ ವೇದವಿಜ್ಞಾನ ಆಶ್ರಮದ ವತಿಯಿಂದ ಅಶ್ವಮೇಧಯಾಜಿ ಪ.ಪೂ. ನಾನಾ ಕಾಳೆಗುರೂಜಿಯವರ ಮಾರ್ಗದರ್ಶನದಲ್ಲಿ ೨೦೧೩ರ ೨೪ ಎಪ್ರಿಲ್ ರಿಂದ ೨೦೧೪ ರ ಜುಲೈ ೧೫ ಈ ೧೬ ತಿಂಗಳುಗಳ ಕಾಲಾವಧಿಯಲ್ಲಿ ಮೊದಲನೇ ಸಾಗ್ನಿಚಿತ್ ಅಶ್ವಮೇಧ ಮಹಾಸೋಮಯಾಗವನ್ನು ಮಾಡಲಾಗಿತ್ತು. ಆಗ ಕೂಡ ಆ ಯಾಗದ ಸಂಕಲ್ಪವನ್ನು ಸನಾತನದ ಸಂಸ್ಥಾಪಕರಾದ ಪರಾತ್ಪರ ಗುರುಗಳು ಡಾ. ಜಯಂತ ಆಠವಲೆಯವರ ಶುಭಹಸ್ತದಿಂದ ಮಾಡಲಾಗಿತ್ತು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ರಾಮನಾಥಿ (ಗೋವಾ)ಯಲ್ಲಿನ ಸನಾತನ ಆಶ್ರಮದಲ್ಲಿ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಶುಭಹಸ್ತದಿಂದ ಎರಡನೇ ಸಾಗ್ನಿಚಿತ್ ಅಶ್ವಮೇಧ ಮಹಾಸೋಮಯಾಗದ ಸಂಕಲ್ಪ !