ಎಲ್ಲಿಯವರೆಗೆ ಹಿಂದೂಗಳು ಸ್ವಧರ್ಮದ ರಕ್ಷಣೆಗಾಗಿ ತಮ್ಮ ಸಮಯವನ್ನು ನೀಡುವುದಿಲ್ಲವೋ, ಅಲ್ಲಿಯವರೆಗೆ ಹಿಂದೂಗಳಲ್ಲಿ ಸಂಘಟನೆ ಕಠಿಣ ! - ಶ್ರೀ. ಗುರುಪ್ರಸಾದ, ಹಿಂದೂ ಜನಜಾಗೃತಿ ಸಮಿತಿ

ಲಕೇಶ್ವರ : ಹಿಂದೂಗಳು ತಮ್ಮ ಸಾಂಸಾರಿಕ ಜೀವನದಲ್ಲಿ ಭೋಗಜೀವನ ನಡೆಸುತ್ತಿದ್ದು, ರಾಷ್ಟ್ರ ಮತ್ತು ಧರ್ಮದ ವಿಷಯದಲ್ಲಿ ಅಲಸಿಗಳಾಗಿದ್ದಾರೆ. ಎಲ್ಲಿಯವರೆಗೆ ಸ್ವಧರ್ಮದ ರಕ್ಷಣೆಗಾಗಿ ತಮ್ಮ ಸಮಯವನ್ನು ಲ್ಲವೋ ಅಲ್ಲಿಯವರೆಗೆ ಹಿಂದೂ ಗಳಲ್ಲಿ ಸಂಘಟನೆ ಕಠಿಣವಾಗುತ್ತದೆ. ಹಾಗಾಗಿ ಎಲ್ಲ ಹಿಂದೂಗಳು ರಾಷ್ಟ್ರ-ಧರ್ಮದ ವಿಷಯದಲ್ಲಿ ಜಾಗೃತರಾಗಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಟಿಬದ್ಧರಾಗಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಗುರುಪ್ರಸಾದ ಇವರು ಹಿಂದೂಗಳಿಗೆ ಕರೆ ಕೊಟ್ಟರು.
ಇವರು ೨೪..೨೦೦೧೬ ರಂದು ಲಕ್ಷೇಶ್ವರದ ಶ್ರೀಮತಿ ಪಿ.ಎಸ್.ಬಿ.ಡಿ. ಬಾಲಕಿಯರ ಪ್ರೌಢಶಾಲೆಯ ಮೈದಾನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ನಡೆದ ಹಿಂದೂ ಧರ್ಮಜಾಗೃತಿ ಸಭೆಯಲ್ಲಿ ಮಾತನಾಡಿದರು. ಈ ಸಮಯದಲ್ಲಿ ರಣರಾಗಿಣಿಯ ಸೌ. ವಿದುಲಾ ಹಳದೀಪುರ ಹಾಗೂ ಸನಾತನ ಸಂಸ್ಥೆಯ ಕು. ಸ್ಫೂರ್ತಿ ಬೆನಕನವಾರಿ ಇವರು ಸಹ ವ್ಯಾಸಪೀಠದಲ್ಲಿ ಉಪಸ್ಥಿತರಿದ್ದರು.
ಹಿಂದೂಗಳೇ ಧರ್ಮಚರಣಿಗಳಾಗಿರಿ ಮತ್ತು ಜೀವನದ ಉದ್ಧಾರಕ್ಕಾಗಿ
ಸಾಧನೆಯನ್ನು ಮಾಡಿರಿ ! - ಕು. ಸ್ಫೂರ್ತಿ ಬೆನಕನವಾರಿ, ಸನಾತನ ಸಂಸ್ಥೆ
೪ ತಲೆಮಾರುಗಳಿಂದ ಹಿಂದೂಗಳಿಗೆ ಧರ್ಮಶಿಕ್ಷಣ ಸಿಗದ ಕಾರಣ ಹಿಂದೂಗಳು ಧರ್ಮಚರಣೆಯಿಂದ ಹಿಂದೆ ಉಳಿದಿದ್ದಾರೆ. ಹಾಗಾಗಿ ಇವತ್ತು ಹಿಂದೂ ಧರ್ಮದ ಮೇಲೆ ಇಷ್ಟೊಂದು ಅಘಾತಗಳಾಗುತ್ತಿದ್ದರೂ ಹಿಂದೂಗಳಿಗೆ ಏನೂ ಅನಿಸುತ್ತಿಲ್ಲ. ಧರ್ಮದ ಆಚರಣೆಯಿಂದ ಭಗವಂತನ ಶಕ್ತಿಯನ್ನು ಗ್ರಹಿಸಬಹುದು ಮತ್ತು ಯೋಗ್ಯ ಆಧ್ಯಾತ್ಮಿಕ ಸಾಧನೆಯಿಂದ ಜೀವನ್ಮುಕ್ತರಾಗಬಹುದು. ಹಾಗಾಗಿ ಎಲ್ಲರೂ ಆಧ್ಯಾತ್ಮಿಕ ಸಾಧನೆಯನ್ನು ಮಾಡಬೇಕು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಎಲ್ಲಿಯವರೆಗೆ ಹಿಂದೂಗಳು ಸ್ವಧರ್ಮದ ರಕ್ಷಣೆಗಾಗಿ ತಮ್ಮ ಸಮಯವನ್ನು ನೀಡುವುದಿಲ್ಲವೋ, ಅಲ್ಲಿಯವರೆಗೆ ಹಿಂದೂಗಳಲ್ಲಿ ಸಂಘಟನೆ ಕಠಿಣ ! - ಶ್ರೀ. ಗುರುಪ್ರಸಾದ, ಹಿಂದೂ ಜನಜಾಗೃತಿ ಸಮಿತಿ