ಬಾಂಗ್ಲಾದೇಶದಲ್ಲಿ ಇಸ್ಲಾಂನ ಅವಮಾನವನ್ನು ಮಾಡಿರುವ ಆಪಾದನೆಯ ಮೇಲೆ ಹಿಂದೂ ಮುಖ್ಯೋಪಾಧ್ಯಾಯನಿಗೆ ಥಳಿತ !

ಭಾರತದಲ್ಲಿ ಯಾವುದೇ ಅಲ್ಪಸಂಖ್ಯಾತ ಶಿಕ್ಷಕನ ವಿರುದ್ಧ ಇಂತಹ ಘಟನೆ ಜರುಗಿದ್ದರೆ, 
ಢೋಂಗಿ ನಿಧರ್ಮಿವಾದಿಗಳು ದೊಡ್ಡ ಗದ್ದಲವೆಬ್ಬಿಸಿ ಅಲ್ಲೋಲಕಲ್ಲೋಲ ಮಾಡುತ್ತಿದ್ದರು ಮತ್ತು ಅವರದ್ದೇ
ಸೋದರ ಸಂಬಂಧಿಗಳಾಗಿರುವ ಪ್ರಸಾರಮಾಧ್ಯಮಗಳು ಅದಕ್ಕೆ ಮತ್ತಷ್ಟು ಎಣ್ಣೆ, ತುಪ್ಪವನ್ನು ಹೊಯ್ಯುತ್ತಿದ್ದರು.
ಢಾಕಾ : ಬಾಂಗ್ಲಾದೇಶದಲ್ಲಿರುವ ಬಂದಾರ ಉಪಜಿಲ್ಲೆಯ ಪಿಯರ ಸತ್ತರ ಲತೀಫ ಶಾಲೆಯ ಮುಖ್ಯೋಪಾಧ್ಯಾಯ ಶ್ಯಾಮಲ ಕಾಂತಿ ಭಕ್ತ ಇವರಿಗೆ ಇಸ್ಲಾಂ ಧರ್ಮದ ಅವಮಾನ ಮಾಡಿರುವ ಅಪಾದನೆಯ ಮೇಲೆ ಥಳಿಸಿರುವ ಘಟನೆ ಜರುಗಿದೆ. ಅವರಿಗೆ ಬಸ್ಕಿ ಮಾಡಿಸಲಾಯಿತು. ಈ ಸಮಯದಲ್ಲಿ ಅವಾಮಿ ಲೀಗನ ಸ್ಥಳೀಯ ಶಾಸಕನು ಉಪಸ್ಥಿತನಿದ್ದನು. ಈ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಬಾಂಗ್ಲಾದೇಶದ ಸರಕಾರವು ಆದೇಶಿಸಿದೆ.
೧. ಶ್ಯಾಮಲ ಇವರು ಒಬ್ಬ ಮುಸ್ಲಿಂ ವಿದ್ಯಾರ್ಥಿಗೆ ಅಧ್ಯಯನ ಮಾಡದ ಕಾರಣ ದಂಡಿಸುವಾಗ ಇಸ್ಲಾಂ ಬಗ್ಗೆ ಅಪಮಾನಕಾರಿ ಹೇಳಿಕೆ ನೀಡಿರುವುದಾಗಿ ಆಪಾದನೆ ಹೊರಿಸಲಾಯಿತು.
೨. ಬಳಿಕ ಮಸೀದಿಯ ಮೈಕ್ ಮೂಲಕ ಇದರ ಮಾಹಿತಿಯನ್ನು ಜನರಿಗೆ ನೀಡಿದಾಗ ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನರು ಶಾಲಾ ಆವರಣದಲ್ಲಿ ಸೇರಿದರು.
೩. ಈ ಮತಾಂಧರು ಶ್ಯಾಮಲರನ್ನು ಥಳಿಸಿದರು.
೪. ಪೊಲೀಸರು ಘಟನಾ ಸ್ಥಳಕ್ಕೆ ಬಂದು ಶ್ಯಾಮಲರನ್ನು ರಕ್ಷಿಸಿದರು.
೫. ಶ್ಯಾಮಲ ಮಾತನಾಡುತ್ತಾ, ಇಸ್ಲಾಮ್ ವಿರುದ್ಧ ಯಾವುದೇ ಅಪಮಾನಕಾರಕ ಹೇಳಿಕೆಯನ್ನು ನೀಡಿಲ್ಲ. ಶಾಲೆಯ ಆಡಳಿತ ಮಂಡಳಿಯ ಕೆಲವು ಸದಸ್ಯರು ಅವರ ವಿರುದ್ಧವಿರುವುದರಿಂದ ಅವರು ಜನರನ್ನು ಪ್ರಚೋದಿಸಿ, ಥಳಿಸಿದ್ದಾರೆ ಎಂದು ಹೇಳಿದರು.
೬. ಮುಖ್ಯೋಪಾಧ್ಯಾಯರು ಇಸ್ಲಾಂಗೆ ಅವಮಾನಿಸಿಲ್ಲ ಎಂದು ಶಿಕ್ಷೆಗೊಳಗಾದ ವಿದ್ಯಾರ್ಥಿ ಹೇಳಿದ್ದಾನೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಬಾಂಗ್ಲಾದೇಶದಲ್ಲಿ ಇಸ್ಲಾಂನ ಅವಮಾನವನ್ನು ಮಾಡಿರುವ ಆಪಾದನೆಯ ಮೇಲೆ ಹಿಂದೂ ಮುಖ್ಯೋಪಾಧ್ಯಾಯನಿಗೆ ಥಳಿತ !