ಇನ್ನು ಮುಂದಿನ ಕ್ರಮಕೈಗೊಳ್ಳಿ !

ಈಗ ಭಾರತದ ಮಾಧ್ಯಮಗಳಲ್ಲಿ ಉದ್ಯಮಿ ವಿಜಯ ಮಲ್ಯರವರ ಹೆಸರು ರಾರಾಜಿಸುತ್ತಿದೆ. ದೊಡ್ಡ ಆರ್ಥಿಕ ಮುಗ್ಗಟ್ಟಿನಲ್ಲಿರುವ ದೇಶದ ೧೭ ಬ್ಯಾಂಕುಗಳ ಹೆಚ್ಚು ಕಡಿಮೆ ೯ ಸಾವಿರ ಕೋಟಿಗಳನ್ನು ತೀರಿಸಬೇಕಾಗಿರುವ ವ್ಯಕ್ತಿಯು ಈಗ ಇಂಗ್ಲೆಂಡಿನ ಒಂದು ಐಷಾರಾಮಿ ಅರಮನೆಯಂತಹ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಮಾರ್ಚ್ ೨ ರಂದು ಮಲ್ಯ ದೇಶ ಬಿಟ್ಟು ಇಂಗ್ಲೆಂಡಿಗೆ ಓಡಿಹೋದರು. ವರ್ಷದ ಕೊನೆಯ ಮಾರ್ಚ್ ೩೧ ರಂದು ವಾರ್ಷಿಕ ಆಯವ್ಯಯ ಮಾಡುವ ದಿನ ಹತ್ತಿರ ಬಂದಾಗ ೧೭ ಸಾಲದಾತ ಬ್ಯಾಂಕುಗಳು ಎಚ್ಚೆತ್ತು ಮಲ್ಯ ಬಳಿಯಿರುವ ೯ ಸಾವಿರ ಕೋಟಿ ಸಾಲ ವಸೂಲಿ ಮಾಡಲು ಮುಂದಾದವು. ಅವು ಮಲ್ಯರನ್ನು ದೇಶ ಬಿಟ್ಟು ಹೋಗಲು ಬಿಡಬೇಡಿ, ಎಂದು ಸರಕಾರವನ್ನು ವಿನಂತಿಸಿದವು; ಆದರೆ ಮಲ್ಯ ಮೊದಲೇ ದೇಶ ಬಿಟ್ಟು ಹೋಗಿದ್ದನು, ಎಂದು ಹೇಳಿ ಸರಕಾರ ಕೈ ತೊಳೆದುಕೊಂಡಿತು.
ಜನತೆಯ ೯ ಸಾವಿರ ಕೋಟಿ ಮಲ್ಯರ ಬಳಿ ಸಿಲುಕಿ ಕೊಂಡಿದೆ. ಇಷ್ಟು ಮೊತ್ತದಿಂದ ಮಾಡಿದ್ದಾದರೂ ಏನು ? ಮದ್ಯ ಉದ್ಯಮ, ವಿಮಾನ ಸಂಸ್ಥೆ ಎಂಬಂತಹ ದುಬಾರಿ ವ್ಯವಹಾರಗಳಲ್ಲಿ ಹಣವನ್ನು ಹೂಡಿ ಈಗ ದಿವಾಳಿಯಾಗಿದ್ದಾನೆ. ನಾನು ಬ್ಯಾಂಕಿನೊಂದಿಗೆ ಚರ್ಚಿಸಲು ಸಿದ್ಧನಿದ್ದೇನೆ. ಬ್ಯಾಂಕಿನವರು ಸಾಲ ತೀರಿಸಲು ಸುಲಭ ಕಂತುಗಳಂತಹ ಹೊಸ ಪರ್ಯಾಯವನ್ನು ಸೂಚಿಸಲಿ. ನನಗೆ ಸರಿ ಹೊಂದುವ ಪರ್ಯಾಯ ಸಿಕ್ಕರೆ, ಹಂತಹಂತವಾಗಿ ಹಣ ತೀರಿಸಲು ಸಾಧ್ಯ, ಎಂದು ಉದ್ಧಟತನ ತೋರಿದರು. ಮಲ್ಯ ಭಾರತದಲ್ಲಿರುವಾಗ ತಮ್ಮ ಸಾಲವನ್ನು ತೀರಿಸಲು ಬ್ಯಾಂಕಿನವರು ಸುಲಭವಾಗಿ ಕಂತು ಕಟ್ಟಲು ಸೂಚಿಸಲಿಲ್ಲ ಎಂದು ಹೇಳಲು ಸಾಧ್ಯವೇ ? ಬ್ಯಾಂಕಿನಿಂದ ಹಣ ಪಡೆದ ಬಳಿಕ ಅದನ್ನು ತೀರಿಸುವ ವಿಷಯ ಬಂದಾಗ ಮಾತ್ರ ಹೀಗೆ ಅಡ್ಡಿ ಮಾಡುವುದು, ದೊಡ್ಡ ಸಾಲಗಾರರ ಮಾನಸಿಕತೆಯಾಗಿ ಬಿಟ್ಟಿದೆ. ಇದರ ಹಿಂದಿನ ಕಾರಣವೇನು ? ಕಾರಣ ಬಹಳ ಸುಲಭವಾಗಿದೆ. ಒಂದೆಂದರೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಬ್ಯಾಂಕುಗಳೆಂದರೆ ಸರಕಾರದ ಹಣ, ಎಂದು ಸಾಲಗಾರರ ತಿಳುವಳಿಕೆ ಹಾಗೂ ಮತ್ತೊಂದು ನಮ್ಮ ದೇಶ ದಲ್ಲಿ ಚೀನಾದಲ್ಲಿರುವಂತೆ ಆರ್ಥಿಕ ಅವ್ಯವಹಾರಗಳಿಗೆ ಕಠೋರ ಶಿಕ್ಷೆ ವಿಧಿಸುವುದಿಲ್ಲ. ರಾಜಕೀಯ ಹಸ್ತಕ್ಷೇಪದಿಂದ ಯಶಸ್ವಿಯಾಗುತ್ತದೆ, ಎಂಬ ತಿಳುವಳಿಕೆ ಕೂಡ ಇರುತ್ತದೆ. ಮಲ್ಯ ಸ್ವತಃ ರಾಜ್ಯಸಭೆಯ ಸದಸ್ಯರಾಗಿದ್ದಾರೆ, ಎಂಬುದರಿಂದ ಅವರ ಆತ್ಮವಿಶ್ವಾಸ ಬಲವಾಗಿತ್ತು. ಅಂದರೆ ಅವರನ್ನು ಕಳೆದ ವಾರ ರಾಜ್ಯಸಭೆಯಿಂದ ತೆಗೆದು ಹಾಕಲಾಗಿದ್ದು ಸಂಸತ್ತಿನಿಂದಲೂ ತೆಗೆದುಹಾಕಿದ್ದರಿಂದ ಈಗ ಅವರು ಸಂಸತ್ತಿನ ಇತಿಹಾಸದಲ್ಲಿ ಹದಿನೈದನೇ ಸದಸ್ಯರಾಗಿದ್ದಾರೆ. ಬ್ಯಾಂಕಿನ ಹಣವನ್ನು ಮುಳುಗಿಸುವ ಮಲ್ಯರಂತಹ ಹಲವಾರು ಜನರಿದ್ದಾರೆ. ದೊಡ್ಡ ಉದ್ಯಮದ ವ್ಯಾಪಾರಿಗಳೇ ಅದರಲ್ಲಿ ಹೆಚ್ಚಾಗಿದ್ದಾರೆ. ಡಿಸೆಂಬರ್ ೨೦೧೫ ರಲ್ಲಿ ೫ ಲಕ್ಷ ಕೋಟಿ ರೂಪಾಯಿಗಳಷ್ಟು ಬ್ಯಾಂಕಿನ ಮೊತ್ತ ಮುಳುಗುವ ಹಾಗಿತ್ತು. ಈ ಮೊತ್ತವನ್ನು ವಸೂಲು ಮಾಡಲು ಬ್ಯಾಂಕುಗಳು ಸಹ ನ್ಯಾಯಾಲಯದಲ್ಲಿ ಖಟ್ಲೆ ದಾಖಲಿಸುವಂತಹ ಉಪಾಯಯೋಜನೆ ಕೈಗೊಳ್ಳಲಿಲ್ಲ. ಬ್ಯಾಂಕಿನವರು ನ್ಯಾಯಾಲಯದಲ್ಲಿ ಹೂಡಿದ ಖಟ್ಲೆಯ ಮೊತ್ತ ೫೩,೫೨೧ ಕೋಟಿ ರೂಪಾಯಿಗಳು. ಅಂದರೆ ಮುಳುಗಿದ ಒಟ್ಟು ಹಣ ೫ ಕೋಟಿ ೫೦ ಲಕ್ಷ ರೂಪಾಯಿಗಳು ಎಂದು ಹೇಳಬಹುದು ! ರಿಝರ್ವ್ ಬ್ಯಾಂಕಿನ ಮಾಹಿತಿಯಂತೆ ದೇಶದ ಮೊದಲ ದೊಡ್ಡ ೧೦ ಸಾಲಗಾರರ ಬಳಿ ೫೬ ಸಾವಿರ ಕೋಟಿ ರೂಪಾಯಿ ಸಿಲುಕಿಕೊಂಡಿವೆ.
ಸರಕಾರದ ಇಚ್ಛಾಶಕ್ತಿ ಪ್ರಮುಖವಾಗಿದೆ !
ಮಲ್ಯ ವಿರುದ್ಧ ಮನಿ ಲ್ಯಾಂಡಿಂಗ್‌ನ ಆರೋಪವಿದೆ. ಅವರು ಭಾರತದಲ್ಲಿರುವಾಗ ನ್ಯಾಯಾಲಯದ ಹಾಗೂ ನಿರ್ವಹಣಾ ಸಂಚಾಲನಾಲಯದ ನೋಟಿಸನ್ನು ಅವಹೇಳನೆ ಮಾಡಿದ್ದರು. ಇಷ್ಟು ದೊಡ್ಡ ಆರ್ಥಿಕ ಅವ್ಯವಹಾರ ಮಾಡಿದ್ದರೂ ಸಂಬಂಧಪಟ್ಟ ವ್ಯವಸ್ಥೆ ಯೊಂದಿಗೆ ಸಹಕರಿಸುತ್ತಿಲ್ಲ ಎಂಬ ಆರೋಪವಿದೆ. ಬ್ಯಾಂಕ್‌ನಿಂದ ಪಡೆದ ಸಾಲವನ್ನು ಅವರು ತೀರಿಸುತ್ತಿಲ್ಲ ಹಾಗೂ ಅದೇ ಸಮಯದಲ್ಲಿ ಇಂಗ್ಲೆಂಡಿನಲ್ಲಿರುವ ಅರಮನೆಯಂತಹ ಬಂಗಲೆಯಲ್ಲಿ ವಾಸಿಸುತ್ತಾರೆ, ಎಂಬ ಬಗ್ಗೆ ಏನು ಹೇಳುವುದು ? ಕೇಂದ್ರ ಸರಕಾರವು ಮಲ್ಯರವರ ರಹದಾರಿ ಪತ್ರ (ಪಾಸ್‌ಪೋರ್ಟ್) ರದ್ದುಪಡಿಸಿದೆ. ಮಲ್ಯರನ್ನು ಭಾರತಕ್ಕೆ ಒಪ್ಪಿಸಲಿ, ಎಂದು ಸಹ ಇಂಗ್ಲೆಂಡಿನ ಸರಕಾರಕ್ಕೆ ಮನವಿ ಸಲ್ಲಿಸಿದೆ. ಅವರ ಬಂಧನಕ್ಕೆ ಸಂಬಂಧಿಸಿದಂತೆ ಭಾರತ-ಇಂಗ್ಲೆಂಡ್ ನಡುವೆ ಸರಕಾರಿ ಮಟ್ಟದಲ್ಲಿ ಚರ್ಚೆ ನಡೆಯುವ ಸಾಧ್ಯತೆಗಳಿವೆ. ವಿದೇಶದಲ್ಲಿರುವ ವ್ಯಕ್ತಿಯನ್ನು ಬಂಧಿಸುವುದು ಹಾಗೂ ಒಪ್ಪಿಸುವುದು ಎಂಬ ವಿಷಯ ಹೇಳಿದರೆ, ಅಂತಾರಾಷ್ಟ್ರೀಯ ಕಾನೂನು, ಎರಡು ದೇಶಗಳ ನಡುವಿನ ಹಸ್ತಾಂತರದ ಕರಾರು, ಎಂಬ ವಿಷಯಗಳು ಮುಂದೆ ಬರುತ್ತವೆ. ಮಲ್ಯರ ಸಂದರ್ಭದಲ್ಲಿ ಈ ವಿಷಯಗಳನ್ನು ನಿರ್ಲಕ್ಷಿಸಿ ದೇಶದ ಹಿತಕ್ಕಾಗಿ ಸರಕಾರವು ಆಕ್ರಮಕವಾಗಿ ಹೆಜ್ಜೆ ಇಡುವುದು ಅಗತ್ಯ ವಿದೆ. ದೇಶದ ವಿಕಾಸ ಹಾಗೂ ಪ್ರತಿಷ್ಠೆಗೆ ಧಕ್ಕೆಯುಂಟಾಗುವಂತಹ ವಿಷಯ ಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಉದಾಹರಣೆಯನ್ನು ಭಾರತವು ಜಗತ್ತಿನ ಮುಂದಿಡಬಹುದು. ಮಲ್ಯ ತೆಗೆದುಕೊಂಡಿರುವ ಸಾಲ ವಸೂಲಿ ಮಾಡುವ ಪ್ರಶ್ನೆ ಈಗ ದೇಶದ ಮುಂದಿದೆ, ಎಂಬ ವಿಷಯವು ಜಗತ್ತಿಗೆ ತಿಳಿಯಬೇಕು. ಅವರು ಬ್ಯಾಂಕುಗಳಿಂದ ಸಾಲ ಪಡೆದು ಭಾರತದಲ್ಲಿ ಬಹಳಷ್ಟು ಆಸ್ತಿಪಾಸ್ತಿ ಗಳಿಸಿದ್ದಾರೆ. ಬ್ಯಾಂಕಿನವರು ಸಾಲದ ಮೊತ್ತ ಪಡೆದುಕೊಳ್ಳಲು ಇವನ್ನು ವಶಪಡಿಸಿಕೊಂಡಿರುತ್ತಾರೆ. ಅವರ ಆಸ್ತಿಯನ್ನು ಮಾರುಕಟ್ಟೆಯಲ್ಲಿ ಹರಾಜು ಮಾಡಿ ಬ್ಯಾಂಕುಗಳು ತಮ್ಮ ಸಾಲ ವಸೂಲಿ ಮಾಡಿಕೊಳ್ಳಬಹುದು. ವಿಜಯ ಮಲ್ಯ ಅಂತರರಾಷ್ಟ್ರೀಯ ಮಾರುಕಟ್ಟೆಯ ಹರಾಜಿನಲ್ಲಿ ಅತ್ಯಂತ ಯಶಸ್ವಿ ಬಿಡ್ಡರ್ (ಹರಾಜಿನಲ್ಲಿ ಬೆಲೆಕೂಗುವ) ಆಗಿದ್ದಾರೆ. ೨೦೦೪ ರಲ್ಲಿ ಅವರು ಲಂಡನ್‌ನಲ್ಲಿ ನಡೆದ ಹರಾಜಿನಲ್ಲಿ ಯಶಸ್ವಿ ಬಿಡ್ಡಿಂಗ್ ನಿಂದ ಟಿಪ್ಪು ಸುಲ್ತಾನನ ಖಡ್ಗಕ್ಕೆ ೧ ಲಕ್ಷ ೭೫ ಸಾವಿರ ಪೌಂಡ್ ಸ್ಟರ್ಲಿಂಗ್ಸ್ ಅಂದರೆ ಅಂದಾಜು ೧ ಕೋಟಿ ೪೦ ಲಕ್ಷ ರೂಪಾಯಿಗಳಿಗೆ ಪಡೆದುಕೊಂಡಿ ದ್ದರು. ಅನಂತರ ಅವರು ಟಿಪ್ಪು ಸುಲ್ತಾನನಿಗೆ ಸೇರಿದ ೩೦ ವಿವಿಧ ವಸ್ತು ಗಳನ್ನು ಹರಾಜಿನಲ್ಲಿ ಪಡೆದುಕೊಂಡು ಅವನ್ನು ಭಾರತಕ್ಕೆ ತಂದರು. ಐತಿಹಾಸಿಕ ಮಹತ್ವಪೂರ್ಣ ವಸ್ತುಗಳನ್ನು ಭಾರತಕ್ಕೆ ತಂದಿದ್ದರಿಂದ ಅವರನ್ನು ಪ್ರಶಂಸಿಸಲಾಯಿತು. ೨೦೦೯ ರಲ್ಲಿ ನ್ಯೂಯಾರ್ಕ್‌ನಲ್ಲಿ ಕರಮಚಂದ ಗಾಂಧಿಯವರ ವಸ್ತುಗಳನ್ನು ಹರಾಜಿನಲ್ಲಿ ಪಡೆದುಕೊಂಡಿದ್ದನ್ನು ಪ್ರಸಿದ್ಧಿ ಪಡಿಸಲಾಯಿತು. ಮುಖ್ಯವೆಂದರೆ ಅವರು ಇಂತಹ ವ್ಯವಹಾರಗಳಲ್ಲಿ ಹಣ ಹೂಡುತ್ತಿದ್ದು ಆಗ ಅವರಿಗೆ ಆಯಾ ಸಮಯದಲ್ಲಿ ರಾಜಕೀಯ ಬೆಂಬಲ ಸಿಗುತ್ತದೆ, ಎಂಬ ವಿಶ್ವಾಸ ಕೂಡ ನಿರ್ಮಾಣವಾಗಿರಬಹುದು. ತಮ್ಮ ಹವ್ಯಾಸವನ್ನು ಪೂರೈಸಿಕೊಳ್ಳುವಾಗ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಿಂದ ಪಡೆದುಕೊಂಡ ಸಾಲವನ್ನು ಮರುಪಾವತಿಸುವ ಬುದ್ಧಿ ಬರಲಿಲ್ಲ, ಎಂಬುದಷ್ಟೇ ಇಲ್ಲಿ ಮುಖ್ಯವಾಗಿರುವುದು. ಮಲ್ಯರವರ ರಹದಾರಿ ಪತ್ರ ರದ್ದುಪಡಿಸಿದ ಭಾರತ ಸರಕಾರದ ಮುಂದಿನ ಕ್ರಮದ ಮೇಲೆ ಭಾರತೀ ಯರು ಗಮನವಿರಿಸಿದ್ದಾರೆ ಎಂಬುದನ್ನು ಗಮನದಲ್ಲಿಡಬೇಕು. ಉದ್ಯಮಿ ವಿದೇಶಕ್ಕೆ ಹೊರಟಾಗ ಸಾಲದಾತ ಬ್ಯಾಂಕುಗಳಿಂದ ನಿರಾಕ್ಷೇಪಣ ಪತ್ರ ತೆಗೆದುಕೊಳ್ಳುವಂತೆ ಸರಕಾರ ಕಟ್ಟುನಿಟ್ಟು ಕ್ರಮವನ್ನೇಕೆ ಕೈಗೊಳ್ಳಬಾರದು?

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಇನ್ನು ಮುಂದಿನ ಕ್ರಮಕೈಗೊಳ್ಳಿ !