ಸ್ತ್ರೀಯರೇ, ತೋರಿಕೆಯ ಆಧುನಿಕತೆಯನ್ನು ಬಿಟ್ಟು ತಮ್ಮ ಶಕ್ತಿಯನ್ನು ಜಾಗೃತಗೊಳಿಸಿರಿ !

ಸೌ. ಕ್ಷಿಪ್ರಾ
ಕೆಲವು ಮಹಿಳೆಯರು ಲೈಂಗಿಕ ಸ್ವಾತಂತ್ರ್ಯ, ಉಡುಪುಗಳು ಇತ್ಯಾದಿ ಬಗ್ಗೆ ಆಂದೋಲನ ಮಾಡುತ್ತಿರುವುದು ಕಾಣಿಸುತ್ತದೆ. ‘ಇವು ಮಹಿಳೆಯರ ವೈಯಕ್ತಿಕ ವಿಷಯಗಳಾಗಿರುವುದರಿಂದ ಯಾರಾದರೂ ಅವರಿಗೆ ಏನು ಧರಿಸಬೇಕು ಮತ್ತು ಏನು ಧರಿಸಬಾರದು ಇತ್ಯಾದಿ ವಿಷಯಗಳ ಬಗ್ಗೆ ಹೇಳಲಾರರು, ಎಂದು ನನಗೆ ಅನಿಸಿತು. ಇದರ ಬಗ್ಗೆ ಈಶ್ವರನು ಸೂಚಿಸಿದ ಕೆಲವು ಅಂಶಗಳನ್ನು ಇಲ್ಲಿ ನೀಡುತ್ತಿದ್ದೇನೆ.
. ಸಮಾಜದ ಸದ್ಯದ ಸ್ಥಿತಿ
ಇಂದು ಸಮಾಜದ ಸ್ಥಿತಿಯನ್ನು ನೋಡಿದರೆ, ಸಂಪೂರ್ಣ ಹಿಂದೂ ಸ್ಥಾನದ ಒಂದು ಜಾಗವೂ ಮಹಿಳೆ ಯರಿಗೆ ಸುರಕ್ಷಿತವಾಗಿಲ್ಲ. ಉತ್ತರ ಪ್ರದೇಶದಲ್ಲಿ ಪ್ರತಿ ೪೮ ಗಂಟೆಗೆ ಓರ್ವ ಸ್ತ್ರೀಯು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾಳೆ.
ಕೇರಳದಲ್ಲಿ ಲವ್ ಜಿಹಾದ್ನ ರಾಕ್ಷಸನು ಪ್ರತಿದಿನ ಒಂದಾದರೂ ಹಿಂದೂ ಹುಡುಗಿಯನ್ನು ಬಲಿ ತೆಗೆದುಕೊಳ್ಳುತ್ತಿದ್ದಾನೆ. ಹೀಗೆ ಒಂದು ದಿನವೂ ಮಹಿಳೆಯರ ಮೇಲೆ ಅತ್ಯಾಚಾರವಾಗಲಿಲ್ಲವೆಂಬ ವಾರ್ತೆಯು ವಾರ್ತಾ ಪತ್ರಿಕೆಯಲ್ಲಿ ಬರದೇ ಇರುವುದಿಲ್ಲ. ಸಾಯಂಕಾಲ ತಡವಾಗಿ ಮನೆಗೆ ಬರುವ ಹುಡುಗಿಯರ ತಂದೆ-ತಾಯಿಯರು ಈಶ್ವರನಲ್ಲಿ ಅವರ ಮಗಳು ಕ್ಷೇಮವಾಗಿ ಮನೆಗೆ ಬರಬೇಕೆಂಬ ಒಂದೇ ಪ್ರಾರ್ಥನೆಯನ್ನು ಮಾಡುತ್ತಾರೆ. ಅದರಿಂದ, ‘ಸುಸಂಸ್ಕೃತ ಮನೆಯ ಹೆಣ್ಣು ಮಕ್ಕಳು ಸಾಯಂಕಾಲದ ಸಮಯದಲ್ಲಿ ಬಹಳ ಹೊತ್ತು ಮನೆಯ ಹೊರಗೆ ಇರಬಾರದುಎಂಬ ನಾಣ್ನುಡಿ ಪ್ರಚಲಿತವಾಗಿದೆ.
. ಅನುಕರಣೆಯೋ ಅಥವಾ ಬುದ್ಧಿಯ ವ್ಯರ್ಥ ಉಪಯೋಗವೋ ?
ಇಂತಹ ಘಟನೆಗಳು ನಡೆಯುತ್ತಿರುವಾಗ ಈ ರೀತಿಯ ಸಂಕಟಗಳು ಸ್ತ್ರೀಯರಿಗೇ ಏಕೆ ಬರುತ್ತಿವೆ ಎಂದು ಸ್ತ್ರೀಯರು ಎಂದಾದರೂ ಯೋಚನೆ ಮಾಡಿದ್ದಾರೆಯೇ ? ಪ್ರತಿದಿನ ಒತ್ತಡದಿಂದ ಏಕೆ ಜೀವಿಸಬೇಕಾಗುತ್ತಿದೆ ? ಬಸ್‌ನಲ್ಲಿ ಪ್ರಯಾಣಿಸುವಾಗ, ಕಛೇರಿಗೆ ಹೋಗುವಾಗ, ಶಾಲೆ-ಮಹಾವಿದ್ಯಾಲಯ ಗಳಿಗೆ ಹೋಗುವಾಗ ನಮ್ಮ ಕಡೆಗೆ ನೋಡುವ ಪ್ರತಿಯೊಬ್ಬ ವ್ಯಕ್ತಿಯಿಂದ ಹೆದರಿಕೆಯಾಗುತ್ತದೆ. ಇದಕ್ಕೆ ಅನೇಕ ಕಾರಣಗಳಿವೆ. ಹೆಚ್ಚುತ್ತಿರುವ ಪಾಶ್ಚಾತ್ಯರ ಪ್ರಭಾವ, ನೈತಿಕ ಮೌಲ್ಯಗಳ ಅಧಃಪತನ, ವಾತಾವರಣದಲ್ಲಿ ಹೆಚ್ಚುತ್ತಿರುವ ರಜ-ತಮ ಇತ್ಯಾದಿ; ಆದರೆ ಕೆಲವು ಬುದ್ಧಿಜೀವಿಗಳು ಹೇಳುವುದೇನೆಂದರೆ ಮೊದಲು ನಾವು ನಮ್ಮ ದೋಷಗಳನ್ನು ಅರಿತು ಕೊಳ್ಳಬೇಕು. ಇತ್ತೀಚೆಗೆ ತಾವು ಪ್ರಗತಿಪರರು ಎಂದು ಹೇಳಿಕೊಳ್ಳಲು ಎಲ್ಲರೂ ಮಂಚೂಣಿಯಲ್ಲಿದ್ದಾರೆ. ತಮ್ಮ ತಿಂಡಿ-ತಿನಿಸು, ಉಡುಪು, ನಡೆ-ನುಡಿ, ವಿಚಾರ, ಇವೆಲ್ಲವೂ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ದಲ್ಲಿಯೇ ಆಗುತ್ತಿದೆ. ಇಂತಹ ಸಮಯದಲ್ಲಿ ಕೆಲವು ಸಲ ಇಸ್ಕಾನಿನ ದೇವಸ್ಥಾನಗಳಲ್ಲಿ, ಕಾಶಿಯಲ್ಲಿನ ಗಂಗೆಯ ದಡದಲ್ಲಿ ವಿದೇಶಿ ಸ್ತ್ರೀಯ ರನ್ನು ಸೀರೆ-ಪಂಜಾಬಿ ಉಡುಪುಗಳಲ್ಲಿ ಹಾಗೂ ದರ್ಶನಕ್ಕೆ ಬಂದ ಭಾರತೀಯ ಸ್ತ್ರೀಯರನ್ನು ಜೀನ್ಸ್, ಟೀಶರ್ಟ್ ಗಳಲ್ಲಿ ನೋಡಿದಾಗ ಖೇದವೆನಿಸುತ್ತದೆ. ಇದಕ್ಕೆ ಏನು ಹೇಳಬೇಕು ? ಅಂಧಾನು ಕರಣೆಯೋ ಅಥವಾ ಬುದ್ಧಿಯ ವ್ಯರ್ಥ ಉಪಯೋಗವೋ ?
. ಆಧುನಿಕತೆಯಿಂದಾಗಿ ಮಾನಸಿಕತೆಯಲ್ಲಾಗುವ ಅಧೋಗತಿ !
ಆಧುನಿಕತೆಯು ಉಡುಪುಗಳ ಮೇಲೆಯೇ ಅವಲಂಬಿಸಿರುತ್ತಿದ್ದರೆ, ಸ್ವಾಮೀ ವಿವೇಕಾನಂದರು ವಿದೇಶದಲ್ಲಿ ಕಾವಿ ವಸ್ತ್ರಗಳನ್ನು ಧರಿಸಿ ಹಿಂದೂ ಧರ್ಮದ ಮಹತ್ವವನ್ನು ತಿಳಿಸಿ ಜನಪ್ರಿಯತೆಯನ್ನು ಗಳಿಸುತ್ತಿರಲಿಲ್ಲ. ಎಷ್ಟೋ ಜನರು ಯೋಗಋಷಿ ರಾಮದೇವಬಾಬಾರವರ ಭಕ್ತರಾಗುತ್ತಿರಲಿಲ್ಲ. ನಮ್ಮ
ಋಷಿಮುನಿಗಳು ಶಾಸ್ತ್ರಗಳನ್ನು ಸಂಶೋಧಿಸುತ್ತಿರಲಿಲ್ಲ. ನಾವು ಉಡುಪುಗಳಲ್ಲಿ, ತೋರಿಕೆಯಲ್ಲಿ ಆಧುನಿಕ ರಾಗುತ್ತಿದ್ದೇವೆ, ಆದರೆ ನಮ್ಮ ಮಾನಸಿಕತೆಯ ಅಧಃಪತನವಾಗುತ್ತಿದೆ. ಇಂದು ಸಣ್ಣಸಣ್ಣ ವಿಷಯಕ್ಕೆ ಆತ್ಮಹತ್ಯೆ ಮಾಡುವುದೊಂದು ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಸೋಲನ್ನು ಸ್ವೀಕರಿಸುವ ಧೈರ್ಯವಿಲ್ಲದಿರು ವುದರಿಂದ ಅದನ್ನು ಸಹಿಸಲಿಕ್ಕಾಗುವುದಿಲ್ಲ ಮತ್ತು ಜೀವನ ಮುಗಿದಂತೆನಿಸುತ್ತದೆ. ಸಂಬಂಧಿಕರ ಮೇಲಿನ ವಿಶ್ವಾಸವು ಕಳೆದುಹೋಗುತ್ತಿದೆ. ಇಂತಹ ಸಮಯದಲ್ಲಿ ಸಮಾಜದಲ್ಲಿನ ವಿಚಾರವಂತರು ಮುಂದಿನಂತೆ ಉಪಾಯಗಳನ್ನು ಸೂಚಿಸುತ್ತಿದ್ದಾರೆ.
. ಅತ್ಯಾಚಾರಿಗಳನ್ನು ಕಠಿಣವಾಗಿ ಶಿಕ್ಷಿಸಬೇಕು.
. ಸ್ತ್ರೀಯರ ಸುರಕ್ಷೆಗಾಗಿ ಹೊಸ ನಿಯಮಗಳನ್ನು ಮಾಡಬೇಕು.
. ಮಹಿಳೆಯರಿಗೆ ಹೆಚ್ಚು ಮೀಸಲಾತಿ ನೀಡಬೇಕು.
. ಎಲ್ಲ ಸ್ತ್ರೀಯರನ್ನು ಸುಶಿಕ್ಷಿತರನ್ನಾಗಿ ಮಾಡ ಬೇಕು ಇತ್ಯಾದಿ.
ಇವೆಲ್ಲ ಹೊಸ ಉಪಾಯಗಳೇನಲ್ಲ ಅಥವಾ ತಿಳುವಳಿಕೆಯುಳ್ಳವರು ಇವುಗಳನ್ನು ಆಚರಣೆಯಲ್ಲಿ ತರುತ್ತಿದ್ದಾರೆ ಎಂದೇನೂ ಇಲ್ಲ.
. ಅತ್ಯಾಚಾರಗಳ ಅಂಕಿಅಂಶ
ಪ್ರತಿವರ್ಷ ಅತ್ಯಾಚಾರಗಳು ಕಡಿಮೆಯಾಗದೇ ಹೆಚ್ಚು ತ್ತಲೇ ಇವೆ. ಒಂದು ಸಮೀಕ್ಷೆಗನುಸಾರ ಕ್ರಿ.. ೨೦೦೨ ರಲ್ಲಿ -
ಪ್ರತಿ ೩.೫ ನಿಮಿಷಕ್ಕೆ ಭಾರತದಲ್ಲಿ ಓರ್ವ ಮಹಿಳೆಯ ಮೇಲೆ ಅತ್ಯಾಚಾರವಾಗುತ್ತದೆ.
ಪ್ರತಿ ೩೦ ನಿಮಿಷಕ್ಕೆ ಭಾರತದಲ್ಲಿ ಓರ್ವ ಮಹಿಳೆಯ ಮೇಲೆ ಬಲಾತ್ಕಾರವಾಗುತ್ತದೆ.
ಪ್ರತಿ ೧೨ ನಿಮಿಷಕ್ಕೆ ಒಂದು ಮಹಿಳೆಯ ಶಾರೀರಿಕ ಶೋಷಣೆಯಾಗುತ್ತದೆ.
ರಾಜಧಾನಿ ದೆಹಲಿಯಲ್ಲಿ ಪೊಲೀಸರು ನೀಡಿದ ಮಾಹಿತಿಗನುಸಾರ ಪ್ರತಿ ೧೮ ಗಂಟೆಯಲ್ಲಿ ಓರ್ವ ಮಹಿಳೆಯ ಮೇಲೆ ಬಲಾತ್ಕಾರವಾಗುತ್ತಿದೆ ಮತ್ತು ಪ್ರತಿ ೧೪ ಗಂಟೆಯಲ್ಲಿ ಓರ್ವ ಮಹಿಳೆಯ ಶಾರೀರಿಕ ಶೋಷಣೆಯಾಗುತ್ತಿದೆ.
ಈ ಚಿಂತಾಜನಕವಾಗಿವೆ. ಆಧುನಿಕತೆಯು ಹೆಚ್ಚುತ್ತಿರುವಾಗಲೇ, ಅಪರಾಧಗಳೂ ವೇಗವಾಗಿ ಹೆಚ್ಚುತ್ತಿವೆ.
. ಅಪರಾಧಗಳಲ್ಲಿಯೂ ಮಹಿಳೆಯರ ಭೂಮಿಕೆ
ಇಂದು ಸ್ತ್ರೀಯರು ಆಧುನಿಕತೆಯ ಹೆಸರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಾಕುವ ಬಟ್ಟೆಗಳನ್ನು ನೋಡಿ
ದರೆ ನಾಚಿಕೆಯಾಗುತ್ತದೆ. ಸಿನೆಮಾಗಳ ದುಷ್ಪರಿಣಾಮ ಗಳಿಂದಾಗಿ ವಿಭಿನ್ನವಾಗಿರುತ್ತದೆ ಎಂದು ಹುಡುಗಿಯರು ಮರೆಯುತ್ತಿದ್ದಾರೆ. ನಿಜವಾದ ಜೀವನದಲ್ಲಿ ನಟರು ನಮ್ಮನ್ನು ಉಳಿಸಲು ಬರುವುದಿಲ್ಲ; ಕೇವಲ ಈಶ್ವರನು ಮಾತ್ರ ನಮಗೆ ಆ ಪ್ರಸಂಗದಲ್ಲಿ ಆಧಾರವಾಗಿರುತ್ತಾನೆ. ವೈಜ್ಞಾನಿಕತೆಯ ಹೆಸರಿನಲ್ಲಿ ನಾವು ಈಶ್ವರನ ಭಕ್ತಿಯನ್ನೂ ಮಾಡುವುದಿಲ್ಲ, ಆದ್ದರಿಂದಲೇ ನಮಗೆ ಸಂಕಟದ ಸಮಯದಲ್ಲಿ ಸಹಾಯವೂ ಸಿಗುವುದಿಲ್ಲ.
. ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಮಾಡುವ ಹಠವನ್ನು ಬಿಡಬೇಕು !
ಆರಕ್ಷಕರು ಈಗ ರಕ್ಷಕರಾಗದೇ ಭಕ್ಷಕರಾಗಿದ್ದಾರೆ. ಜುಲೈ ೪ ರಂದು ಬಾಗಪತ ಎಂಬ ಪಟ್ಟಣದಲ್ಲಿ ಸಾಮೂಹಿಕ ಬಲಾತ್ಕಾರದಿಂದ ಸಂತ್ರಸ್ತಳಾದ ಮಹಿಳೆ ಮತ್ತು ಅವಳ ಕುಟುಂಬದವರು ಆರಕ್ಷಕರ ಹತ್ತಿರ ನ್ಯಾಯವನ್ನು ಬೇಡಲು ಹೋಗಿದ್ದಾಗ, ಆರಕ್ಷಕರು ಅವರಿಗೆ ನ್ಯಾಯ ಕೊಡುವುದರ ಬದಲು ಅವರನ್ನು ಹೊಡೆದೋಡಿಸಿದರು. ಈ ಪ್ರಸಂಗದಲ್ಲಿ ನೊಂದ ಮಹಿಳೆಯನ್ನೂ ಬಿಡಲಿಲ್ಲ. ನೀವೇ ಹೇಳಿ, ಪರಿಸ್ಥಿತಿ ಹೀಗಾದರೆ ನಮಗೆ ಯಾರು ಸಹಾಯವನ್ನು ಮಾಡುವರು ? ನಮ್ಮನ್ನು ಯಾರು ಕಾಪಾಡುವರು ?
ಇವೆಲ್ಲವನ್ನು ತಿಳಿದುಕೊಳ್ಳಲು ನಾವು ಈಗ ಜಾಗರೂಕತೆ ಯಿಂದ ಇರಬೇಕಾಗಿದೆ. ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಮಾಡುವ ಹಠವನ್ನು ತ್ಯಜಿಸಬೇಕು.
. ಉತ್ತೇಜಕ ಬಟ್ಟೆಗಳನ್ನು ಧರಿಸಿ ಪುರುಷರ ಸಹನಶೀಲತೆಯನ್ನು ಪರೀಕ್ಷಿಸಬೇಡಿರಿ !
ನಾವು ಸ್ತ್ರೀಯರು ಬಿಗಿಯಾದ, ಕಡಿಮೆ, ಅಸಭ್ಯ ಬಟ್ಟೆಗಳನ್ನು ಧರಿಸಿದರೆ, ಪುರುಷರ ಮೇಲೆ ಯಾವ ಪರಿಣಾಮಗಳು ಆಗುತ್ತಿದೆಯೆಂಬುದನ್ನು ನೀವೇ ವಿಚಾರ ಮಾಡಿರಿ. ನಮ್ಮಕಡೆಗೆ ಅವರು ಯಾವ ದೃಷ್ಟಿಯಿಂದ ನೋಡುವರು ? ನಾವು ನಮ್ಮ ಅಸ್ಮಿತೆ ಯನ್ನು ಅವರ ಕೈಗಳಿಗೆ ಒಪ್ಪಿಸಬೇಕೋ ಅಥವಾ ನಮ್ಮ ಸ್ತ್ರೀತ್ವವನ್ನು ನಮ್ರತೆಯಿಂದ ರಕ್ಷಿಸಬೇಕೋ ಎನ್ನುವುದು ಈಗ ನಮ್ಮ ಕೈಯಲ್ಲಿಯೇ ಇದೆ. ಉತ್ತೇಜಿಸುವಂತಹ ಬಟ್ಟೆಗಳನ್ನು ಧರಿಸಿ ಪುರುಷರ ಸಹನಶೀಲತೆಯನ್ನು ಪರೀಕ್ಷಿಸುವುದು ವ್ಯರ್ಥವಾಗಿದೆ. ಹಾಗೆಯೇ ನಮ್ಮ ಆಚರಣೆಯಿಂದ ಸಮಾಜದ ವಾತಾವರಣವು ಹಾಳಾ ಗುತ್ತಿದ್ದರೆ, ಅನೈತಿಕತೆಯನ್ನು ಪಸರಿಸುವ ಪಾಪವೂ ನಮಗೇ ತಗಲುತ್ತದೆ.
. ವೈಯಕ್ತಿಕ ಸಂಗತಿಗಳನ್ನು
ಸಾರ್ವಜನಿಕ ಸ್ಥಳಗಳಲ್ಲಿ ಅನ್ವಯಿಸಬೇಡಿ !
ಬಟ್ಟೆಗಳು ನಿಮ್ಮ ವೈಯಕ್ತಿಕ ವಿಷಯವಾಗಿದೆ ಎಂದೆನಿಸಿದರೆ ಮತ್ತು ನಿಮಗೆ ನಿಮ್ಮ ಇಚ್ಛೆಯನುಸಾರ ಬಟ್ಟೆಗಳನ್ನು ಧರಿಸಬೇಕಿದ್ದರೆ, ಅವುಗಳನ್ನು ವೈಯಕ್ತಿಕ
ಜಾಗದಲ್ಲಿ ಹಾಕಿಕೊಳ್ಳಿರಿ. ಸಾರ್ವಜನಿಕ ಸ್ಥಾನಗಳಲ್ಲಿ ವ್ಯವಹರಿಸುವಾಗಲಾದರೂ ಸಮಾಜದ ಕಟ್ಟುಪಾಡು ಗಳನ್ನು ಪಾಲಿಸಿರಿ. ಇಲ್ಲದಿದ್ದರೆ ನಾಳೆ ನಿಮ್ಮ ದುರ್ದೆಶೆಗೆ ನೀವೇ ಹೊಣೆಗಾರರಾಗುವಿರಿ. ಸಂಕಟ
ಗಳಿಗೆ ಆಹ್ವಾನ ನೀಡುವುದು ಮೂರ್ಖರ ಲಕ್ಷಣ ವಾಗಿದೆ. ಇಂತಹ ಸಮಯದಲ್ಲಿ ವಾಸನಾಂಧ ಸಮಾಜದಲ್ಲಿ ದೇಹಪ್ರದರ್ಶನ ಮಾಡುವ ಬಟ್ಟೆಗಳನ್ನು ಧರಿಸುವುದೆಂದರೆ ಮೂರ್ಖತನವೇ ಆಗಿದೆ.
. ಇತಿಹಾಸದಲ್ಲಿನ ಸ್ಫೂರ್ತಿದಾಯಕ ಸ್ತ್ರೀಯರ ಆದರ್ಶವನ್ನಿಟ್ಟುಕೊಳ್ಳಿ !
ಇತಿಹಾಸದಲ್ಲಿ ಅನೇಕ ಸ್ಫೂರ್ತಿದಾಯಕ ಸ್ತ್ರೀಯರು ಆಗಿಹೋದರು. ಅವರು ತಮ್ಮೊಂದಿಗೆ ಇತರರ ಚಾರಿತ್ರ್ಯ ರಕ್ಷಣೆಯನ್ನೂ ಮಾಡಿದರು. ಅವರಲ್ಲಿ ಆ ಸಾಮರ್ಥ್ಯವು ಧರ್ಮಾಚರಣೆಗಳಿಂದಲೇ ಬಂದಿದೆ. ರಾಣಿ ಲಕ್ಷ್ಮೀಬಾಯಿ, ರಾಣಿ ದುರ್ಗಾವತಿ ಇವರು ಪತಿಯ ನಿಧನದ ನಂತರವೂ ತಮ್ಮ ಹಾಗೂ ಪ್ರಜೆಗಳ ರಕ್ಷಣೆಯನ್ನು ಮಾಡಿದರು. ಅವರು ಆಧುನಿಕತೆಯ ಶಿಕ್ಷಣವನ್ನು ಪಡೆದಿರಲಿಲ್ಲ; ಆದರೆ ಅವರಲ್ಲಿ ಧರ್ಮದ ಅಡಿಪಾಯವು ಗಟ್ಟಿಯಾಗಿತ್ತು. ಅತ್ಯಾಚಾರ ಮಾಡುವವರು ಮಹಿಳೆಯರು ಏನು ಕಲಿತಿದ್ದಾರೆ ಎಂದು ನೋಡುವುದಿಲ್ಲ. ಅದಕ್ಕಾಗಿ ಸ್ತ್ರೀಯರೇ, ತಮ್ಮಲ್ಲಿರುವ ಶಕ್ತಿತತ್ತ್ವವನ್ನು ಜಾಗೃತಗೊಳಿಸಿರಿ. ಧರ್ಮಾಚರಣೆಯನ್ನು ಮಾಡಿರಿ. ಸಮಾಜದಲ್ಲಿ ಗೌರವದಿಂದ ಜೀವಿಸಿ ಇತರರ ಮುಂದೆಯೂ ಆದರ್ಶವನ್ನು ನಿರ್ಮಾಣ ಮಾಡಿರಿ.’
- ಸೌ. ಕ್ಷಿಪ್ರಾ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸ್ತ್ರೀಯರೇ, ತೋರಿಕೆಯ ಆಧುನಿಕತೆಯನ್ನು ಬಿಟ್ಟು ತಮ್ಮ ಶಕ್ತಿಯನ್ನು ಜಾಗೃತಗೊಳಿಸಿರಿ !