ಸಾಧಕರೇ, ನಾಮಜಪ ಮಾಡುತ್ತಿರುವಾಗ ಮನಸ್ಸಿನಲ್ಲಿ ವಿಚಾರಗಳು ಬರುತ್ತಿದ್ದರೆ ಮುಂದಿನಂತೆ ಪ್ರಯತ್ನಿಸಬಹುದು !

ಪೂ. (ಸೌ.) ಅಂಜಲಿ ಗಾಡಗೀಳ
ಸಾಧಕರು ನಾಮಜಪ ಮಾಡುವಾಗ ಮನಸ್ಸಿನಲ್ಲಿ ತುಂಬ ವಿಚಾರ ಬರುವುದರಿಂದ ನಾಮಜಪವು ಸರಿಯಾಗಿ ಆಗುವುದಿಲ್ಲ. ಅಂತಹ ಸಮಯದಲ್ಲಿ ಸಾಧಕರು ಮುಂದಿನ ಉಪಾಯ ಮಾಡಬೇಕು.
೧. ನಾಮಜಪ ಬರೆಯುವುದು
ಒಂದು ಕಾಗದದಲ್ಲಿ ನಾಮಜಪ ಬರೆಯಬೇಕು. ಇದರಿಂದ ಕೈಯಿಂದ ನಾಮಜಪ ಬರೆಯಲಾಗುತ್ತದೆ. ಕಣ್ಣುಗಳಿಂದ ಓದಲಾಗುತ್ತದೆ ಮತ್ತು ಮನಸ್ಸಿನೊಳಗೆ ಜಪ ಹೇಳಲಾಗುತ್ತದೆ. ಇದರಿಂದ ಮನಸ್ಸಿನ ವಿಚಾರಗಳ ಕಡೆಗೆ ನಿರ್ಲಕ್ಷ್ಯವಾಗುತ್ತದೆ.

 ೨. ಶ್ರೀಕೃಷ್ಣನ ಚಿತ್ರದ ಪ್ರತಿಯೊಂದು
ಅವಯವದ ಮೇಲೆ ಬೆರಳನ್ನಿಟ್ಟು ನಾಮಜಪ ಮಾಡುವುದು
ಶ್ರೀಕೃಷ್ಣನ ಚಿತ್ರವನ್ನು ಎದುರಿಗೆ ಇಟ್ಟುಕೊಂಡು ಶ್ರೀಕೃಷ್ಣನ ತಲೆಯಿಂದ ಆರಂಭಿಸಿ ಅವನ ಪ್ರತಿಯೊಂದು ಅವಯವ, ಅವನ ಆಭರಣಗಳು, ಪ್ರತಿಯೊಂದು ಆಭರಣದ ಮೇಲಿನ ಕಲಾಕೃತಿ, ಸುದರ್ಶನಚಕ್ರ, ನವಿಲುಗರಿ, ಶಾಲು, ಶಾಲಿನ ಮೇಲಿರುವ ಚುಕ್ಕೆಗಳು ಹೀಗೆ ಪ್ರತಿಯೊಂದರ ಮೇಲೆ ತರ್ಜನಿಯನ್ನಿಟ್ಟು ನಾಮಜಪ ಮಾಡಬೇಕು, ಉದಾ. ॐ ನಿಸರ್ಗದೇವೋ ಭವ I ॐ ವೇದಮ್ ಪ್ರಮಾಣಮ್ I ಹರಿ ॐ ಜಯಮೇ ಜಯಮ್ I ಜಯ ಗುರುದೇವ I, ಈ ಪೂರ್ಣ ನಾಮಜಪವನ್ನು ಶ್ರೀಕೃಷ್ಣನ ಶಾಲಿನ ಮೇಲಿರುವ ಒಂದೇ ಚುಕ್ಕೆಯ ಮೇಲೆ ಬೆರಳಿಟ್ಟು ಹೇಳದೇ ನಾಲ್ಕು ಚುಕ್ಕೆಯ ಮೇಲೆ ಪ್ರತಿಯೊಂದಕ್ಕೆ ಒಂದೊಂದು ನಾಮಜಪ ಮಾಡುತ್ತಾ ಬೆರಳಿಡುತ್ತಾ ಹೋಗಬೇಕು. ಈ ಪ್ರಕಾರ ನಾಮಜಪ ಮಾಡಿದರೆ ಶ್ರೀಕೃಷ್ಣನ ಚಿತ್ರದಲ್ಲಿನ ಚೈತನ್ಯ ತರ್ಜನಿಯ ಮೂಲಕ ನಮ್ಮ ಶರೀರದೊಳಗೆ ಪ್ರವೇಶಿಸುತ್ತದೆ. ಶ್ರೀಕೃಷ್ಣನ ತಲೆಯಿಂದ ಚರಣದವರೆಗೂ ಈ ರೀತಿ ನಾಮಜಪ ಮಾಡಿದ ನಂತರ ಮತ್ತೆ ಪುನಃ ಪ್ರಾರಂಭಿಸಬೇಕು.
೩. ಕಣ್ಣುಗಳನ್ನು ಮುಚ್ಚಿ ನಾಮಜಪ ಮಾಡುವುದು
ಸ್ವಲ್ಪ ಸಮಯ ಕಣ್ಣುಗಳನ್ನು ಮುಚ್ಚಿ ಮನಸ್ಸನ್ನು ಏಕಾಗ್ರಗೊಳಿಸಿ ನಾಮಜಪ ಮಾಡಲು ಪ್ರಯತ್ನಿಸಬೇಕು. ಈ ರೀತಿ ನಾಮಜಪ ಮಾಡುವಾಗ ಮನಸ್ಸಿನಲ್ಲಿ ವಿಚಾರಗಳು ಬರುತ್ತಿವೆ ಎಂದೆನಿಸಿದರೆ, ಮತ್ತೆ ಮೇಲಿನಂತೆ ನಾಮಜಪ ಮಾಡಿ ನೋಡಬೇಕು.
ಈ ರೀತಿಯಲ್ಲಿ ನಾಮಜಪ ಮಾಡುತ್ತಿದ್ದರೆ ಉಪಾಯದ ೨-೩ ಗಂಟೆಗಳು ಹೇಗೆ ಕಳೆಯಿತು, ಎಂಬುದೇ ತಿಳಿಯುವುದಿಲ್ಲ.
ಸೇವೆಯನ್ನು ಮಾಡುವಾಗಲೂ ಮನಸ್ಸಿನಲ್ಲಿ ವಿಚಾರಗಳು ಬರುತ್ತಿವೆ ಎಂದೆನಿಸಿದರೆ, ಸ್ವಲ್ಪ ಸಮಯ ತಡೆದು ಮತ್ತೆ ಮೇಲಿನ ರೀತಿಯಲ್ಲಿ ನಾಮಜಪ ಮಾಡಿ ನೋಡಬೇಕು. - ಪೂ. (ಸೌ.) ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೯.೪. ೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಾಧಕರೇ, ನಾಮಜಪ ಮಾಡುತ್ತಿರುವಾಗ ಮನಸ್ಸಿನಲ್ಲಿ ವಿಚಾರಗಳು ಬರುತ್ತಿದ್ದರೆ ಮುಂದಿನಂತೆ ಪ್ರಯತ್ನಿಸಬಹುದು !