ಎಲ್ಲರೊಂದಿಗೆ ಬೆರೆಯುವ ಮತ್ತು ಪರಿಸ್ಥಿತಿಗೆ ಹೊಂದಿಕೊಳ್ಳುವ ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯ ಮೇಲೆ ಜನಿಸಿದ ಪುಣೆಯ ಕು. ಅದಿತಿ ಆಶಿಷ್ ಭೋಜ (೫ ವರ್ಷ)

. ಜನನದ ಮೊದಲು
೧ ಅ. ನವರಾತ್ರಿಯಲ್ಲಿ ಪ್ರತಿನಿತ್ಯ ಶಾಕಂಭರಿ
ಮಹಾತ್ಮೆಯನ್ನು ಓದುವುದು ಹಾಗೂ ಗ್ರಾಮ ದೇವತೆಯ ದರ್ಶನಕ್ಕೆ ಹೋಗುವುದು ಮತ್ತು ಗರ್ಭಸಂಸ್ಕಾರದ ಧ್ವನಿಮುದ್ರಿಕೆಯನ್ನು ನಿಯಮಿತವಾಗಿ ಕೇಳುವುದು : ನಾನು ಗರ್ಭಿಣಿಯಾಗಿದ್ದಾಗ ಮೂರನೇ ತಿಂಗಳಿನಲ್ಲಿ ಅತ್ತೆ-ಮಾವನವರು ವಾಸಿಸುತ್ತಿದ್ದ ಶಿರೋಡಾ ಎಂಬ ಊರಿಗೆ ಹೋದೆನು. ಅಲ್ಲಿ ಹೋದ ಬಳಿಕ ನನಗೆ ಕುಲದೇವಿ ಶ್ರೀ ಶಾಕಂಭರಿ (ಬನಶಂಕರಿ) ಮಹಾತ್ಮೆಯನ್ನು ಓದಬೇಕೆಂದೆನಿಸಿತು. ನಾನು ಅಲ್ಲಿಗೆ ಹೋಗುವ ಒಂದು ತಿಂಗಳು ಮೊದಲು ಅತ್ತೆಯ ತಂದೆಯವರು ಶಾಕಂಭರಿ ಮಹಾತ್ಮೆಯನ್ನು ಅತ್ತೆಯವರಿಗೆ ಕೊಟ್ಟಿದ್ದರು.
ನಾನು ನವರಾತ್ರಿಯಲ್ಲಿ ಘಟಸ್ಥಾಪನೆಯಿಂದ ದಸರಾದವರೆಗೆ ಶಾಕಂಭರಿ ಮಹಾತ್ಮೆಯನ್ನು ಓದಿದೆನು. ನವರಾತ್ರಿಯಲ್ಲಿ ನಾನು ಪ್ರತಿದಿನ ಗ್ರಾಮದೇವತೆಯ ದರ್ಶನಕ್ಕೂ ಹೋಗುತ್ತಿದ್ದೆನು. ಆ ಸಮಯದಲ್ಲಿ ನನಗೆ ಹೆಣ್ಣು ಮಗುವೇ ಜನಿಸುವುದೆಂದು ಅನಿಸುತ್ತಿತ್ತು ಮತ್ತು ಅವಳ ಹೆಸರನ್ನು ಅದಿತಿ ಎಂದು ಇಡುವ ಬಗ್ಗೆ ವಿಚಾರವೂ ಬರುತ್ತಿತ್ತು. ನಾನು ಗರ್ಭಸಂಸ್ಕಾರ ಧ್ವನಿಮುದ್ರಿಕೆಯನ್ನು ನಿಯಮಿತವಾಗಿ ಕೇಳುತ್ತಿದ್ದೆನು.
೧ ಆ. ದಿನವಿಡೀ ಕೆಲಸಗಳನ್ನು ಮಾಡುವಾಗ ಆಯಾಸವಾಗದಿರುವುದು: ನಾಲ್ಕನೇ ತಿಂಗಳಿನಲ್ಲಿ ಪುಣೆಗೆ ಬಂದ ಬಳಿಕ ನನಗಾಗುತ್ತಿದ್ದ ತೊಂದರೆಗಳು ನಿಧಾನವಾಗಿ ಕಡಿಮೆಯಾದವು. ನನಗೆ ದಿನವಿಡೀ ಕೆಲಸಗಳನ್ನು ಮಾಡಿದರೂ ಸ್ವಲ್ಪವೂ ಆಯಾಸವಾಗುತ್ತಿರಲಿಲ್ಲ.
೧ ಇ. ಗರ್ಭದ ಚಲನವಲನ ಅರಿವಾಗತೊಡಗಿದಾಗಿನಿಂದ ಅದು ಸಾಮಾನ್ಯಕ್ಕಿಂತ ಹೆಚ್ಚಿದೆ ಎಂದು ಅನಿಸುತ್ತಿತ್ತು. - ಸೌ. ದೀಪಾ ಭೋಜ (ಅದಿತಿಯ ತಾಯಿ) ಪುಣೆ
. ಜನನದ ಬಳಿಕ
೨ ಅ. ಅದಿತಿಯ ಪ್ರಫುಲ್ಲ ವದನವನ್ನು ನೋಡಿ ಆಯಾಸವೆಲ್ಲ ಮರೆತುಹೋಗುವುದು: ಅದಿತಿಗೆ ನಿದ್ದೆ ಕಡಿಮೆಯಿರುವುದರಿಂದ ಅವಳು
ರಾತ್ರಿ ಆಗಾಗ ಏಳುತ್ತಿದ್ದಳು. ಆದರೆ ಅಳದೇ ಆಡುತ್ತಿದ್ದಳು.
೨ ಆ. ಎಲ್ಲರೊಂದಿಗೆ ಬೆರೆಯುವುದು : ಅದಿತಿಗೆ ಸಣ್ಣಂದಿನಿಂದಲೂ ಎಲ್ಲರೊಂದಿಗೆ ಬೆರೆತು ಇರಲು ಇಷ್ಟ ವಾಗುತ್ತದೆ. ಮನೆಗೆ ಯಾರೇ ಬಂದರೂ ಅವರಿಗೆ ಮನೆಯಲ್ಲಿ ಉಳಿದುಕೊಳ್ಳುವಂತೆ ಆಗ್ರಹಿಸುತ್ತಾಳೆ. ಯಾವುದೇ ವಯಸ್ಸಿನ ವ್ಯಕ್ತಿಯೊಂದಿಗೆ ಅವಳು ಕೂಡಲೇ ಬೆರೆಯುತ್ತಾಳೆ. ಅವಳು ಎಲ್ಲರೊಂದಿಗೆ ಮನಸ್ಸು ಬಿಚ್ಚಿ ಮಾತನಾಡುತ್ತಾಳೆ.
೨ ಇ. ತೀಕ ಗ್ರಹಣಶಕ್ತಿ : ಅವಳಿಗೆ ಯಾವುದಾದ ರೊಂದು ಹಾಡು ಅಥವಾ ಕಥೆಯನ್ನು ಒಂದು ಸಲ ಹೇಳಿದರೆ ಅದು ಕೂಡಲೇ ತಿಳಿಯುತ್ತದೆ. ಅವಳು ಎಲ್ಲ ಕೃತಿಗಳನ್ನು ಯೋಗ್ಯ ಪದ್ಧತಿಯಿಂದ ಮಾಡುತ್ತಾಳೆ. ಯಾವುದಾದರೊಂದು ಹಾಡಿನ ಅಥವಾ ಶ್ಲೋಕದ ದಾಟಿಯು ಅದಿತಿಗೆ ಸರಿಯಾಗಿ ನೆನಪಿರುತ್ತದೆ. ಅವಳು ಶ್ಲೋಕವನ್ನು ಹೇಳುತ್ತಿರುವಾಗ ಶಬ್ದ ತಪ್ಪಿದರೂ, ದಾಟಿ ಸರಿಯಾಗಿರುತ್ತದೆ.
೨ ಈ. ಜಿಜ್ಞಾಸು ವೃತ್ತಿ : ಯಾವುದಾದರೊಂದು ಹೊಸ ವಸ್ತು, ಗ್ರಂಥ, ವ್ಯಕ್ತಿ ಮತ್ತು ಪ್ರಸಂಗದ ಬಗ್ಗೆ ಅವಳಿಗೆ ಅರಿತುಕೊಳ್ಳುವುದಿರುತ್ತದೆ. ಆಗ ಅವಳು ನಿರಂತರವಾಗಿ ಅದೇನು ? ಹೇಗೆ ? ಏಕೆ ? ಯಾರು ? ಮುಂತಾದ ಪ್ರಶ್ನೆಗಳನ್ನು ಕೇಳುತ್ತಿರುತ್ತಾಳೆ.
೨ ಉ. ಮನೆಗೆಲಸದಲ್ಲಿ ಸಹಾಯ ಮಾಡುವುದು : ಅದಿತಿಗೆ ತಿಳುವಳಿಕೆ ಬಂದಾಗಿನಿಂದ ಅವಳಿಗೆ ಯಾರಾದರೂ ಒಂದು ವಸ್ತುವನ್ನು ತಂದುಕೊಡು ಎಂದು ಹೇಳಿದರೆ ಅವಳು ಅದನ್ನು ಕೂಡಲೇ ತಂದುಕೊಡುತ್ತಾಳೆ. ನಾವು ತರಕಾರಿಯನ್ನು ಸ್ವಚ್ಛಗೊಳಿಸಲು ಕುಳಿತರೆ ಅದಿತಿ ಸ್ವತಃ ನಾನು ಸಹ ಮಾಡುತ್ತೇನೆ ಎಂದು ಹೇಳಿ ಕೂಡಲೇ ತರಕಾರಿಯನ್ನು ಸ್ವಚ್ಛಗೊಳಿಸಲು ಕುಳಿತುಕೊಳ್ಳುತ್ತಾಳೆ.
೨ ಊ. ಕಲಿಯುವ ವೃತ್ತಿ : ಅವಳಿಗೆ ಹೊಸ ಹೊಸ ವಿಷಯಗಳನ್ನು ಕಲಿಯಲು ಬಹಳ ಇಷ್ಟವಾಗುತ್ತದೆ. ಉದಾ. ಹಾಡು, ನೃತ್ಯ, ಅಡುಗೆ. ನಾನು ಅಡುಗೆಯನ್ನು ಮಾಡುವಾಗ ಅದಿತಿ ನಾನು ರೊಟ್ಟಿ, ಚಪಾತಿ ಮಾಡುತ್ತೇನೆ ಎಂದು ಹೇಳುತ್ತಾ ಪಕ್ಕದಲ್ಲಿ ನಿಂತು ಪುಟ್ಟ ಚಪಾತಿಯನ್ನು ಮಾಡುತ್ತಾಳೆ.
೨ ಋ. ಸಾತ್ತ್ವಿಕ ವೇಷಭೂಷಣಗಳನ್ನು ತೊಡಲು ಇಷ್ಟವಾಗುವುದು: ಅವಳಿಗೆ ಬಳೆ ಹಾಕಲು, ಕುಂಕುಮವಿಡಲು ಇಷ್ಟವಾಗುತ್ತದೆ. ಮೇಲು ಹೊದಿಕೆಯಿರುವ (ಶಾಲು) ಉಡುಪುಗಳು ಅವಳಿಗೆ ಬಹಳ ಇಷ್ಟವಾಗುತ್ತವೆ. ಮನೆಯಲ್ಲಿಯೂ ಯಾವುದೇ ಉಡುಪಿನ ಮೇಲೆ ಅವಳು ತಾಯಿಯ ಶಾಲನ್ನು ಹೊದ್ದುಕೊಳ್ಳುತ್ತಾಳೆ.
೨ ಎ. ದೇವರ ಬಗ್ಗೆ ಸೆಳೆತವಿರುವುದು
. ಅದಿತಿ ನಿಯಮಿತವಾಗಿ ಶುಭಂ ಕರೋತಿ ಹೇಳುತ್ತಾಳೆ.
. ಅವಳಿಗೆ ಶಾಲೆಯಲ್ಲಿ ಕಲಿಸಿದ ಶ್ಲೋಕಗಳನ್ನೂ ಮನೆಯಲ್ಲಿ ಹೇಳುತ್ತಾಳೆ. ನಾನು ಹೇಳಿದಂತೆ ಪ್ರಾರ್ಥನೆ ಮಾಡುತ್ತಾಳೆ.
. ಅವಳು ಆಡುವಾಗ ಆಗಾಗ ದೇವರ ಹೆಸರು ಹೇಳುತ್ತಾಳೆ ಮತ್ತು ಜಯಘೋಷ ಮಾಡುತ್ತಾಳೆ.
. ಈಗ ಅವಳು ಇತರರಿಗೆ ಭಕ್ತ ಪ್ರಹ್ಲಾದ ಮತ್ತು ಶ್ರವಣಕುಮಾರನ ಕಥೆಗಳನ್ನು ಸರಿಯಾಗಿ ಹೇಳುತ್ತಾಳೆ. ಅವಳು ಮಲಗುವಾಗ ಈ ಕಥೆಗಳನ್ನು ಕೇಳಿಯೇ ಮಲಗುತ್ತೇನೆಂದು ಹಠ ಮಾಡುತ್ತಾಳೆ.
೨ ಏ. ಆಧ್ಯಾತ್ಮಿಕ ಉಪಾಯಗಳನ್ನು ಮಾಡಲು ಇಷ್ಟಪಡುವುದು : ಅದಿತಿ ಶಾಲೆಗೆ ಹೋಗುವಾಗ ಅತ್ತರ್ ಮತ್ತು ಕರ್ಪೂರವನ್ನು ಹಚ್ಚಿಕೊಂಡೇ ಹೋಗುತ್ತಾಳೆ. ಅವಳು ಶಾಲೆಯಿಂದ ಬಂದ ಬಳಿಕ ಆಡಲು ಹೋಗುವಾಗ, ಆಟವಾಡಿ ಬಂದ ಬಳಿಕ ಮತ್ತು ಮಲಗುವಾಗ ಉಪಾಯ ಮಾಡುತ್ತಾಳೆ. ಊದುಬತ್ತಿಯಿಂದ ತನ್ನ ಮೇಲಿನ ಆವರಣವನ್ನು ತೆಗೆಯಲು ಹೇಳುತ್ತಾಳೆ.
೨ ಐ. ಪರಿಸ್ಥಿತಿಗೆ ಹೊಂದಿಕೊಳ್ಳುವುದು : ಅವಳು ಅಜ್ಜನಲ್ಲಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗುವಂತೆ ಹೇಳುತ್ತಾಳೆ. ಅವಳ ಸ್ವಭಾವ ಹಠಮಾರಿಯಾಗಿದೆ; ಆದರೆ ಸರಿಯಾಗಿ ತಿಳಿಸಿ ಹೇಳಿದರೆ ಕೇಳುತ್ತಾಳೆ ಮತ್ತು ಪರಿಸ್ಥಿತಿಯನ್ನು ಸ್ವೀಕರಿಸುತ್ತಾಳೆ. ಉದಾ : ಅವಳಿಗೆ ಪ್ರತಿದಿನ ಸಾಯಂಕಾಲ ತುಂಬ ಸಮಯ ಆಟವಾಡಬೇಕನ್ನಿಸುತ್ತದೆ, ಆದರೆ ಜೊತೆಗೆ ಹೋಗಲು ಯಾರಿರದಿದ್ದರೆ ಅವಳು ಶಾಂತವಾಗಿರುತ್ತಾಳೆ. - ಸೌ. ವಂದನಾ ಭೋಜ ಹುಬ್ಬಳ್ಳಿ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಎಲ್ಲರೊಂದಿಗೆ ಬೆರೆಯುವ ಮತ್ತು ಪರಿಸ್ಥಿತಿಗೆ ಹೊಂದಿಕೊಳ್ಳುವ ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯ ಮೇಲೆ ಜನಿಸಿದ ಪುಣೆಯ ಕು. ಅದಿತಿ ಆಶಿಷ್ ಭೋಜ (೫ ವರ್ಷ)