ಉಜ್ಜೈನಿ ಸಿಂಹಸ್ಥಪರ್ವದಲ್ಲಿ ಭಾಗವಹಿಸಿದ್ದ ಶೇ. ೯೦ ರಷ್ಟು ಸಂತರು ಅನಾನುಕೂಲತೆಯಿಂದ ತೊಂದರೆ ಅನುಭವಿಸಿದ್ದಾರೆ ! - ಜಗದ್ಗುರು ಮಹೇಶಾಶ್ರಮ

ಉಜ್ಜೈನಿ : ಸಿಂಹಸ್ಥಪರ್ವದಲ್ಲಿ ಭಾಗವಹಿಸಿದ ಶೇ. ೯೦ ರಷ್ಟು ಸಂತರು ಇಲ್ಲಿಯ ಅನಾನುಕೂಲತೆಗಳಿಂದ ತೊಂದರೆಗೊಳಗಾಗಿದ್ದಾರೆ. ಅರ್ಧಕ್ಕಿಂತ ಅಧಿಕ ಸಂತರು ಸಿಂಹಸ್ಥವನ್ನು ಬಿಟ್ಟು ಹೋಗಿದ್ದಾರೆ. ಕನಿಷ್ಟತಮ ಮೂಲಭೂತ ಅವಶ್ಯಕತೆಗಳಾದ ಶೌಚಾಲಯ ಮತ್ತು ನೀರಿನ ವ್ಯವಸ್ಥೆಗಾಗಿ ಸಹ ಸಂತರು ದೆಹಲಿಗೆ ದೂರವಾಣಿ ಕರೆ ಮಾಡಿದ ಬಳಿಕ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಆಡಳಿತಾಧಿಕಾರಿಗಳ ನಿರ್ಲಕ್ಷ್ಯದಿಂದ ಸಿಂಹಸ್ಥ ಕ್ಷೇತ್ರವು ಇಂತಹ ಅವ್ಯವಸ್ಥೆಯ ಆಗರವಾಗಿದೆ. ಇತರ ಸಂತರಿಗೆ ಹಣವನ್ನು ನೀಡಿರುವುದರಿಂದ ಅವರು ಸಿಂಹಸ್ಥ ಪರ್ವವನ್ನು ಪ್ರಶಂಸಿಸುತ್ತಿದ್ದಾರೆ ಎಂದು ಜಗದ್ಗುರು ಮಹೇಶಾಶ್ರಮ ಇವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಜಗದ್ಗುರು ಮಹೇಶಾಶ್ರಮ ಇವರು ಬಗಲಾಮುಖಿದೇವಿಯ ದರ್ಶನಕ್ಕಾಗಿ ನಲಖೇಡಾ, ಉಜ್ಜೈನಿಗೆ ಆಗಮಿಸಿದ್ದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಉಜ್ಜೈನಿ ಸಿಂಹಸ್ಥಪರ್ವದಲ್ಲಿ ಭಾಗವಹಿಸಿದ್ದ ಶೇ. ೯೦ ರಷ್ಟು ಸಂತರು ಅನಾನುಕೂಲತೆಯಿಂದ ತೊಂದರೆ ಅನುಭವಿಸಿದ್ದಾರೆ ! - ಜಗದ್ಗುರು ಮಹೇಶಾಶ್ರಮ