೧೫೦ ಪಂಡಿತರಿಂದ ಶತಚಂಡಿ ಸಂಹಿತಾ ಮಹಾಯಜ್ಞ ಮಾಡಿಸಲಿದೆ ಜಪಾನ್ !

ಭಾರತ ಸರಕಾರ ಇದರಿಂದ ಏನಾದರೂ ಪಾಠ ಕಲಿಯುವುದೇ ? ಹಿಂದೂ ಪರಂಪರೆಗಳನ್ನು ಸುಳ್ಳೆಂದು
ಹೀಯಾಳಿಸುವ ಬುದ್ಧಿಪ್ರಾಮಾಣ್ಯವಾದಿಗಳು ಈಗ ಜಪಾನಿನ ಈ ಕೃತಿಯನ್ನು ಮೂಢನಂಬಿಕೆಯೆಂದು ಹೇಳುವರೇ ?
  • ಪದೇ ಪದೇ ಬರುವ ನೈಸರ್ಗಿಕ ವಿಪತ್ತುಗಳು ಹಾಗೂ ಜಪಾನಿ ಯುವಕರ ಹೆಚ್ಚುತ್ತಿರುವ ಆತ್ಮಹತ್ಯೆಗಳನ್ನು ತಡೆಯಲು ಯಜ್ಞ ! 
  • ಭಾರತದ ಪ್ರವಾಸಕ್ಕೆ ಬಂದಿದ್ದ ಜಪಾನಿನ ಪ್ರಧಾನಿ ಶಿಂಜೋ ಅಬೆಯವರು ಹಿಂದೂ ಧರ್ಮದಿಂದ ಪ್ರಭಾವಿತರಾಗಿದ್ದರು
ಟೊಕಿಯೋ (ಜಪಾನ್) : ಜಪಾನ್‌ಗೆ ಕಾಡುತ್ತಿರುವ ಸಮಸ್ಯೆಗಳ ನಿವಾರಣೆಗಾಗಿ ಅಕ್ಟೋಬರ್ ೨೦೧೬ ರಲ್ಲಿ ೧೫೦ ಭಾರತೀಯ ಪಂಡಿತರಿಂದ ಶತಚಂಡಿ ಸಂಹಿತ ಮಹಾರುದ್ರ ಯಜ್ಞವನ್ನು ಮಾಡಿಸಲಾಗುವುದು. ಕೆಲವು ತಿಂಗಳ ಹಿಂದೆ ಜಪಾನಿನ ಪ್ರಧಾನಿ ಶಿಂಜೊ ಅಬೆ ಭಾರತದ ಪ್ರವಾಸಕ್ಕಾಗಿ ಬಂದಿದ್ದರು. ಆಗ ಕಾಶಿಯಲ್ಲಿ ಅಬೆ ಇವರನ್ನು ಪಾರಂಪರಿಕ ಹಿಂದೂ ಪದ್ಧತಿಯಿಂದ ಸ್ವಾಗತಿಸಲಾಗಿತ್ತು. ಅಬೆ ಭಾರತದ ಮಹಾನ್ ವೈದಿಕ ಪರಂಪರೆಯಿಂದ ಪ್ರಭಾವಿತರಾಗಿದ್ದರು.
೧. ಅಮೇರಿಕಾದ ಟೆಕ್ಸಾಸ್ ರಾಜ್ಯದಲ್ಲಿರುವ ‘ವೈದಿಕ ಯಜ್ಞ ಕೇಂದ್ರ’ದ ಮುಂದಾಳತ್ವದಿಂದ ಹಾಗೂ ಜಪಾನ್ ಸರಕಾರದ ಅನುಮತಿಯಿಂದ ಶತಚಂಡಿ ಸಂಹಿತ ಮಹಾರುದ್ರ ಯಜ್ಞವನ್ನು ಆಯೋಜಿಸಲಾಗಿದೆ.
೨. ಕಾಶಿ ಮತ್ತು ದಕ್ಷಿಣ ಭಾರತದಲ್ಲಿನ ೧೦೮ ಪ್ರಕಾಂಡ ವೈದಿಕ ಪಂಡಿತರು, ೨ ಆಚಾರ್ಯರು, ೧೦ ಪಂಡಿತರು ಮತ್ತು ಅವರ ೧೫ ಸಹಾಯಕರು ಶುಕ್ರವಾರ ೨೧ ಅಕ್ಟೋಬರ್ ೨೦೧೬ ರಂದು ಜಪಾನಿನ ಸಮಯಕ್ಕನುಸಾರ ಬೆಳಗ್ಗೆ ೮ ರಿಂದ ಮಹಾರುದ್ರ ಯಜ್ಞವನ್ನು ಆರಂಭಿಸುವರು. ರವಿವಾರ, ೨೩ ಅಕ್ಟೋಬರ್ ೨೦೧೬ ರ ರಾತ್ರಿ ೯ ಗಂಟೆಯ ವರೆಗೆ ಈ ಯಜ್ಞವು ಅಖಂಡವಾಗಿ ನಡೆಯುವುದು.
೩. ಜಪಾನಿನ ಹೊಸ ಪೀಳಿಗೆಗೆ ಸಕಾರಾತ್ಮಕ ವಾತಾವರಣವನ್ನು ನಿರ್ಮಿಸುವ ಉದ್ದೇಶದಿಂದ ಈ ಯಜ್ಞ ನಡೆಯಲಿದೆ.
೪. ಪೂರ್ಣ ಯಜ್ಞದ ಖರ್ಚು ಮತ್ತು ಬ್ರಾಹ್ಮಣರ ಹೋಗುವ-ಬರುವ ಎಲ್ಲ ಖರ್ಚು ಜಪಾನ್ ಸರಕಾರ ನೋಡಿಕೊಳ್ಳಲಿದೆ. ಎಲ್ಲ ಬ್ರಾಹ್ಮಣರ ಪಾಸ್‌ಪೋರ್ಟ್ ತಯಾರಿಸಲಾಗಿದ್ದು ಅವರಿಗೆ ವೀಸಾ ದೊರಕಿಸುವ ಪ್ರಕ್ರಿಯೆ ನಡೆದಿದೆ.
೫. ಪಂಡಿತರ ಈ ಗುಂಪಿನಲ್ಲಿರುವ ಕಾಶಿಯ ಓರ್ವ ಪಂಡಿತರು ‘ಯಜ್ಞದಿಂದ ವೃಷ್ಟಿ ಆಗುತ್ತದೆ, ವೃಷ್ಟಿಯಿದ ಆಹಾರ ನಿರ್ಮಾಣವಾಗುತ್ತದೆ, ಆಹಾರದಿಂದ ಪ್ರಜೆಗಳ ಪಾಲನೆಯಾಗುತ್ತದೆ. ಈ ಚಕ್ರವು ಸಾವಿರಾರು ವರ್ಷಗಳಿಂದ ನಡೆದುಬಂದಿದೆ’, ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಜಪಾನಿನ ಪ್ರಧಾನಿ ಶಿಂಜೋ ಅಬೆ ಇವರಿಗೆ 
ಆಧ್ಯಾತ್ಮಿಕ ಉಪಾಯ ನಿಯೋಜಿಸಲು ಸಲಹೆ ನೀಡಿದ್ದರು !
ಬಲ್ಲ ಮೂಲಗಳಿಂದ ಲಭಿಸಿದ ಮಾಹಿತಿಗನುಸಾರ ಜಪಾನಿನ ಮೇಲೆ ಪದೇ ಪದೇ ಬಂದೆರಗುವ ನೈಸರ್ಗಿಕ ಆಪತ್ತು, ಜಪಾನಿನ ಜನರಲ್ಲಿ ಹೆಚ್ಚುತ್ತಿರುವ ಚಿಂತೆ ಹಾಗೂ ಯುವಕರಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಇತ್ಯಾದಿ ಸಮಸ್ಯೆಗಳ ವಿಷಯದಲ್ಲಿ ಶಿಂಜೋ ಅಬೆ ಇವರು ಪ್ರಧಾನಿ ಮೋದಿಯವರೊಂದಿಗೆ ಚರ್ಚಿಸಿದ್ದರು. ಆಗ ಮೋದಿಯವರು ಜಪಾನಿಗೆ ಆಧ್ಯಾತ್ಮಿಕ ಉಪಾಯವನ್ನು ನಿಯೋಜಿಸಲು ಸೂಚಿಸಿದ್ದರು. (ಜಪಾನಿಗೆ ಸಲಹೆ ನೀಡುವ ಮೋದಿ ಭಾರತದಲ್ಲಿ ಏಕೆ ಹಾಗೆ ಮಾಡುವುದಿಲ್ಲ ? - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
೧೫೦ ಪಂಡಿತರಿಂದ ಶತಚಂಡಿ ಸಂಹಿತಾ ಮಹಾಯಜ್ಞ ಮಾಡಿಸಲಿದೆ ಜಪಾನ್ !