ಮರ ಕಡಿದವರನ್ನು ಅಟ್ಟಾಡಿಸಿದ ದೈವ !

ಈ ಬಗ್ಗೆ ಮೂಢನಂಬಿಕೆ ನಿರ್ಮೂಲನೆಯವರಿಗೆ ಏನು ಹೇಳಲಿಕ್ಕಿದೆ ?
ಬಂಟ್ವಾಳದಲ್ಲೊಂದು ವಿಸ್ಮಯ ! ದೈವಕ್ಕೆ ಸಂಬಂಧಿಸಿದ ಮರದ
 ಗೆಲ್ಲು ಕಡಿಯುವ ವ್ಯಕ್ತಿಯ ಶರೀರದಲ್ಲಿ ದೈವದ ಆವಾಹನೆ !
ಬಂಟ್ವಾಳ : ದೈವದ ಬನ ಇರುವ ಪರಿಸರದ ಮರ ಕಡಿದ ಮುಸಲ್ಮಾನ ವ್ಯಕ್ತಿಯ ಮೇಲೆ ‘ದೈವ’ ಆವಾಹನೆಯಾಗಿ ಮರ ಕಡಿಯುತ್ತಿದ್ದವರನ್ನು ಸುಮಾರು ಅರ್ಧ ಕಿ.ಮೀ. ವರೆಗೆ ಅಟ್ಟಾಡಿಸಿದ ಘಟನೆ ಬಂಟ್ವಾಳದ ನರಿ ಕೊಂಬು ಗ್ರಾಮದ ಪೊಯಿತ್ತಾಜೆಯಲ್ಲಿ ನಡೆಯಿತು.

. ಪೊಯಿತ್ತಾಜೆಯ ಶಾಂತದುರ್ಗಾ ದೇವಿಗೆ ಸಂಬಂಧಿಸಿದ ಕಾಡಿನ ಕೆಲವು ಮರಗಳನ್ನು ಕಡಿಯಲು ಜಾಗದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಶ್ರೀಧರ ನಾಯಕ ಇವರು ಕೆಲವು ಮುಸಲ್ಮಾನ ಕೆಲಸಗಾರರಿಗೆ ಒಪ್ಪಿಸಿದ್ದರು.
. ಈ ಸಂದರ್ಭ ಚಾಮುಂಡಿ ದೈವದ ಬನ ಪರಿಸರದ ಮರ ಕಡಿದ ಬಳಿಕ ಅದರ ಗೆಲ್ಲನ್ನು ಕಡಿಯುತ್ತಿದ್ದ ವ್ಯಕ್ತಿಗಳ ಪೈಕಿ ಓರ್ವನ ಮೇಲೆ ದೈವದ ಆವಾಹನೆಯಾಗಿ ಕಡ್ಪಕತ್ತಿ (ಮರ ಕಡಿಯುವ ದೊಡ್ಡ ಕತ್ತಿ)ಯನ್ನು ಝಳಪಿಸುತ್ತ ‘ನನ್ನ ಪರಿಸರದ ಮರ ಕಡಿಯಲು ಹೇಳಿದವರು ಯಾರು? ನಿಮಗೆ ಆ ಹಕ್ಕು ನೀಡಿದವರಾರು ?’ ಎಂದು ಪ್ರಶ್ನಿಸುತ್ತಾ ಮರ ಕಡಿಯುತ್ತಿದ್ದ ಇತರರನ್ನು ಅಟ್ಟಾಡಿಸಿದ ಘಟನೆ ಆತಂಕಕ್ಕೆ ಕಾರಣವಾಯಿತು.
. ಮರ ಕಡಿಯಲು ಬಂದವರು ತಲೆ ಮರೆಸಿಕೊಳ್ಳುವವರೆಗೂ ದೈವ ಅಟ್ಟಾಡಿಸಿತು. ಇವರೆಲ್ಲರೂ ಒಟ್ಟಿಗೆ ಕೆಲಸಕ್ಕೆ ಬಂದಿದ್ದರೂ ತಮ್ಮವರಲ್ಲಿ ಓರ್ವನ ರೌದ್ರಾವತಾರ ಕಂಡ ಇತರರು ದಿಕ್ಕಾಪಾಲಾದರು. ಇದು ಮಟ ಮಟ ಮಧ್ಯಾಹ್ನ ನಡೆಯಿತು.
. ಮರ ಕಡಿಯುವವರು ಓಡಿ ತಲೆಮರೆಸಿಕೊಂಡ ಬಳಿಕ ದೈವದ ಆವಾಹನೆಯಾಗಿರುವ ವ್ಯಕ್ತಿ ಸುಮಾರು ೨೦೦ ಮೀಟರ್ ದೂರದಲ್ಲಿದ್ದ ಆ ಜಮೀನಿನ ಉಸ್ತುವಾರಿ ನೋಡಿಕೊಳ್ಳುವ ಶ್ರೀಧರ ನಾಯಕ್ ಅವರ ಮನೆ ಬಾಗಿಲಿಗೆ ಓಡುತ್ತಲೇ ಬಂದಿದ್ದು, ರಭಸವಾಗಿ ಬಾಗಿಲು ಬಡಿದು ಅವರನ್ನು ಹೊರ ಕರೆದು ‘ನನ್ನ ಬನದ ಮರವನ್ನು ಕಡಿಯಲು ನಿನಗೆ ಅಧಿಕಾರ ಕೊಟ್ಟ ವರು ಯಾರು ?’ ಎಂದು ಪ್ರಶ್ನಿಸಿದ. ಆಗ ಶ್ರೀಧರ ನಾಯಕರು ಆತನಲ್ಲಿ, ‘ಹೊಟ್ಟೆಪಾಡಿಗಾಗಿ ಕಾರ್ಮಿಕರು ಈ ಕೆಲಸ ಮಾಡಿದ್ದಾರೆ. ಅವರಿಗೆ ಏನೂ ತೊಂದರೆ ಆಗದಂತೆ ಕಾಪಾಡಬೇಕು. ಇದಕ್ಕೆ ಸಂಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ; ತಪ್ಪಾಗಿದೆ. ಕ್ಷಮಿಸಬೇಕು’ ಎಂದು ಪರಿಪರಿಯಾಗಿ ಮನವಿ ಮಾಡಿದರು.
. ಈ ಉತ್ತರದಿಂದ ಶಾಂತವಾದ ‘ದೈವ’ ಅವಾಹಿತ ವ್ಯಕ್ತಿಯು ನೀರು ಕೊಡುವಂತೆ ಕೇಳಿದ. ಶ್ರೀಧರ ನಾಯಕರು ಕುಡಿಯಲೆಂದು ನೀರು ತಂದು ಕೊಟ್ಟರೆ ಅಷ್ಟು ಸಾಲದು ಕೊಡಪಾನದಲ್ಲಿ ತಂದು ನನ್ನ ತಲೆಗೆ ಸುರಿಯಿರಿ ಎಂದನು. ಸ್ಥಳದಲ್ಲಿದ್ದ ಕಾರ್ಮಿಕರೊಬ್ಬರು ಬಾವಿಯಿಂದ ನೀರನ್ನು ಸೇದಿ ಆತನ ತಲೆಗೆ ಸುರಿದ ಕೂಡಲೇ ದರ್ಶನ ನಿಂತಿದೆ. ಆವೇಶ ಇಳಿದ ಬಳಿಕ ಮನೆ ಅಂಗಳಕ್ಕೆ ಬಂದಿದ್ದ ವ್ಯಕ್ತಿ ನಾನು ಹೇಗೆ ಇಷ್ಟು ಒದ್ದೆ ಆಗಿದ್ದೇನೆ? ನನ್ನ ಚಪ್ಪಲಿ ಎಲ್ಲಿ? ನನ್ನ ವಸ್ತುಗಳು ಎಲ್ಲಿವೆ? ಎಂದೆಲ್ಲ ಪ್ರಶ್ನಿಸಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಚಾಮುಂಡಿ ದೇವಿಯ ಪ್ರಕೋಪದ
ಬಗ್ಗೆ ಕೆಲಸಗಾರರಿಗೆ ಮುನ್ಸೂಚನೆ ನೀಡಲಾಗಿತ್ತು !
ಪುರಾತನವಾದ ಈ ಬನದಲ್ಲಿ ಅತ್ಯಂತ ಎತ್ತರದ ಗೋಳಿಮರವೊಂದಿದ್ದು, ಅದರ ಅಡಿಯಲ್ಲಿ ಸುಮಾರು ಮೂರೂವರೆ ಅಡಿ ಎತ್ತರದ ಚಾಮುಂಡಿ ದೈವದ ತ್ರಿಶೂಲ ಮತ್ತು ದೈವದ ಕಲ್ಲು ಇದೆ. ಕಟ್ಟಿಗೆ, ಸೊಪ್ಪು, ಸೌದೆಗಾಗಿ ಕೆಲವು ಮರ/ಗೆಲ್ಲು ಕಡಿಯುವಂತೆ ಜಮೀನಿನ ಉಸ್ತುವಾರಿ ನೋಡುಕೊಳ್ಳುವವರು ಕಾರ್ಮಿಕರಿಗೆ ಸೂಚಿಸಿದ್ದರು. ಇದೇ ವೇಳೆ ಚಾಮುಂಡಿ ದೈವದ ಬನದ ಸನಿಹ ಮರ, ಸೊಪ್ಪು ಕಡಿಯದಂತೆ, ಮೈಲಿಗೆ ಮಾಡದಂತೆಯೂ ಸೂಚಿಸಿ ದ್ದರೂ ಕಾರ್ಮಿಕರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎನ್ನಲಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮರ ಕಡಿದವರನ್ನು ಅಟ್ಟಾಡಿಸಿದ ದೈವ !