ಪ್ರತ್ಯೇಕತಾವಾದಿಗಳು ಪಾಕಿಸ್ತಾನದೊಂದಿಗೆ ಚರ್ಚಿಸಬಹುದು !- ಭಾರತ

ಪ್ರತ್ಯೇಕತಾವಾದಿಗಳೊಂದಿಗೆ ಭಾರತದ ಗಾಂಧಿಗಿರಿ !
.........................................................................................
ಪಾಕಿಸ್ತಾನದೊಂದಿಗೆ ಹಿಡಿ-ಬಿಡು ವೃತ್ತಿಯನ್ನು ಬಿಟ್ಟು ಈಗಲಾದರೂ ಕಾಶ್ಮೀರದ ಪ್ರಶ್ನೆಯನ್ನು ಶಾಶ್ವತವಾಗಿ ಅಂತ್ಯ ಹಾಡಬೇಕೆನ್ನುವುದೇ ರಾಷ್ಟ್ರಪ್ರೇಮಿ ಜನತೆಯ ಅಪೇಕ್ಷೆಯಾಗಿದೆ !
ನವ ದೆಹಲಿ : ಕಾಶ್ಮೀರದ ಪ್ರಕರಣದ ಕುರಿತು ಪಾಕಿಸ್ತಾನದ ಮುಖಂಡರೊಡನೆ ಚರ್ಚಿಸಲು ಪ್ರತ್ಯೇಕ ತಾವಾದಿ ಮುಖಂಡರಿಗೆ ನಿರ್ಬಂಧನೆಯನ್ನು ವಿಧಿಸಿದ್ದ ಮೋದಿ ಸರಕಾರವು ಈ ಸಂದರ್ಭದಲ್ಲಿ ಈಗ ತನ್ನ ಮೃದು ಧೋರಣೆ ಸ್ವೀಕರಿಸಿರುವುದು ಕಂಡುಬರುತ್ತಿದೆ.
ಕೆಲವು ದಿನಗಳ ಹಿಂದೆ ಸಂಸತ್ತಿನಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ವಿದೇಶ ರಾಜ್ಯಮಂತ್ರಿ ವಿ.ಕೆ. ಸಿಂಗ್ ಇವರು ಜಮ್ಮೂ-ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ದೇಶವನ್ನು ಛಿದ್ರಗೊಳಿಸಲು ಇಚ್ಛಿಸುತ್ತಿರುವ ಕಾಶ್ಮೀರದ ಮುಖಂಡರು ಸಹ ಭಾರತೀಯ ನಾಗರಿಕರೇ ಆಗಿದ್ದಾರೆ. ಆದುದರಿಂದ ಅವರು ಯಾವುದೇ ದೇಶದ ಪ್ರತಿನಿಧಿಗಳೊಂದಿಗೆ ಚರ್ಚಿಸಬಹುದಾಗಿದೆಯೆಂದು ಹೇಳಿದ್ದಾರೆ. ಸಿಮ್ಲಾ ಒಪ್ಪಂದ ಮತ್ತು ಲಾಹೋರ ಘೋಷಣೆಗಳನ್ನು ಅನುಸರಿಸಿ ಭಾರತ-ಪಾಕಿಸ್ತಾನ ಚರ್ಚೆಯ ಸಂದರ್ಭದಲ್ಲಿ ಯಾವುದೇ ಮೂರನೇ ಪಕ್ಷವು ಇರುವುದಿಲ್ಲವೆಂದೂ ಸಿಂಗ್ ಸ್ಪಷ್ಟಪಡಿಸಿದರು.
.........................................................................................

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪ್ರತ್ಯೇಕತಾವಾದಿಗಳು ಪಾಕಿಸ್ತಾನದೊಂದಿಗೆ ಚರ್ಚಿಸಬಹುದು !- ಭಾರತ