ಮಣಿಕಟ್ಟಿಗೆ ಬ್ಯಾಂಡ್ (ಬಣ್ಣದ ಬಟ್ಟೆಯ ಪಟ್ಟಿ) ಕಟ್ಟುವುದರಿಂದಾಗುವ ಹಾನಿಗಳು

ಅ. ಮಣಿಕಟ್ಟಿನ ಮೇಲೆ ಬ್ಯಾಂಡ್‌ನ್ನು ಕಟ್ಟಿಕೊಳ್ಳುವುದರಿಂದ ಮಣಿಕಟ್ಟಿನ ಸುತ್ತಲೂ ಅನಿಷ್ಟ ಶಕ್ತಿಯ ಲಹರಿಗಳ ಆವರಣವು ನಿರ್ಮಾಣವಾಗುತ್ತದೆ : ಮಣಿಕಟ್ಟಿನ ಮೇಲೆ ಬ್ಯಾಂಡ್‌ನ್ನು ಕಟ್ಟಿಕೊಳ್ಳುವುದರಿಂದ ಮಣಿಕಟ್ಟಿನ ಸುತ್ತಲೂ ಕಪ್ಪು ಶಕ್ತಿಯ ಲಹರಿಗಳ ಆವರಣವು ನಿರ್ಮಾಣವಾಗಿ, ಕಪ್ಪು ಶಕ್ತಿಯ ಲಹರಿಗಳು ಮಣಿಕಟ್ಟಿನಿಂದ ಇಡೀ ದೇಹದಲ್ಲಿ ಮತ್ತು ಬೆರಳುಗಳ ಸ್ಪರ್ಶದಿಂದ ವಿವಿಧ ವಸ್ತುಗಳಲ್ಲಿ ಹಾಗೂ ವಾತಾವರಣದಲ್ಲಿ ಪ್ರಕ್ಷೇಪಿಸುತ್ತವೆ. ತಮೋಗುಣಿ ಬ್ಯಾಂಡ್‌ನಿಂದ ಮಣಿಕಟ್ಟಿನ ಮೇಲಿನ ಬಿಂದುಗಳ ಮೇಲೆ ಅನಗತ್ಯವಾಗಿ ಒತ್ತಡವು ನಿರ್ಮಾಣವಾಗುತ್ತದೆ; ಇದರಿಂದ ಅವುಗಳಲ್ಲಿ ತಮೋಗುಣಿ ಲಹರಿಗಳು ಸಂಗ್ರಹವಾಗಿ ಆಯಾ ಸಂಬಂಧಿತ ಅವಯವಗಳಿಗೆ ತಲುಪಿ, ಅವಯವಗಳ ಕಾರ್ಯಕ್ಷಮತೆಯು ಕಡಿಮೆಯಾಗುತ್ತದೆ.
ಆ. ಬ್ಯಾಂಡ್‌ನಿಂದ ದೇಹದಲ್ಲಿ ಹೆಚ್ಚಾಗಿರುವ ತಮೋಗುಣದಿಂದ ಜೀವದ ಬಹಿರ್ಮುಖ ವೃತ್ತಿಯು ಹೆಚ್ಚಾಗುತ್ತದೆ. ಜೀವಕ್ಕೆ ವಾಯುಮಂಡಲದಲ್ಲಿನ ಸಾತ್ತ್ವಿಕ ಲಹರಿಗಳನ್ನು ಮತ್ತು ವಿಚಾರಗಳನ್ನು ಗ್ರಹಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಜೀವದ ಸಾಧನೆಯು ಭಂಗವಾಗಿ ಅದು ಸಾಧನೆಯಿಂದ ದೂರವಾಗುವ ಸಾಧ್ಯತೆಯಿರುತ್ತದೆ. - ಈಶ್ವರ (ಕು. ಮಧುರಾ ಭೋಸಲೆಯವರು ಈಶ್ವರ ಈ ಅಂಕಿತನಾಮದಿಂದ ಬರೆಯುತ್ತಾರೆ.(೧೪.೧೧.೨೦೦೭))

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮಣಿಕಟ್ಟಿಗೆ ಬ್ಯಾಂಡ್ (ಬಣ್ಣದ ಬಟ್ಟೆಯ ಪಟ್ಟಿ) ಕಟ್ಟುವುದರಿಂದಾಗುವ ಹಾನಿಗಳು