ಸಭೆ, ಸತ್ಸಂಗ ಇತ್ಯಾದಿ ನಡೆಯುತ್ತಿರುವಾಗ ಸಂಚಾರಿವಾಣಿ ಉಪಯೋಗಿಸುವುದಕ್ಕಿಂತ ಸಭೆಯಲ್ಲಿ ಹೇಳುವ ಅಂಶಗಳನ್ನು ಗಮನವಿಟ್ಟು ಕೇಳಿರಿ !

ಸಾಧಕರಿಗಾಗಿ ಸೂಚನೆ
‘ಕೆಲವು ಸಾಧಕರು ಸಭೆ, ಸತ್ಸಂಗ ಅಥವಾ ವ್ಯಷ್ಟಿ ವರದಿ ನಡೆಯುತ್ತಿರುವಾಗ ಸಂಚಾರಿವಾಣಿಯಲ್ಲಿ ಕಿರುಸಂದೇಶ ಕಳುಹಿಸುವುದು, ವಾಟ್ಸ್‌ಆ್ಯಪ್‌ನ ಸಂದೇಶ ನೋಡುವಂತಹ ಅಯೋಗ್ಯ ಕೃತಿಗಳನ್ನು ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ರೀತಿಯಲ್ಲಿ ಗಾಂಭೀರ್ಯತೆ ಮತ್ತು ಕಲಿಯುವ ಸ್ಥಿತಿ ಇಲ್ಲದಿದ್ದರೆ ಸಾಧಕರಿಗೆ ಸಭೆ, ಸತ್ಸಂಗಗಳಲ್ಲಿ ಯಾವ ವಿಷಯ ನಡೆಯುತ್ತಿದೆ ಎಂಬುದು ಗೊತ್ತಾಗುವುದಿಲ್ಲ ಮತ್ತು ಅದರಲ್ಲಿ ಅಪೇಕ್ಷಿತವಾದಂತಹ ಸಹಭಾಗವನ್ನು ಪಡೆಯಲಾಗುವುದಿಲ್ಲ.
ಇನ್ನು ಮುಂದೆ ಎಲ್ಲ ಸಾಧಕರು ಸಭೆ, ಸತ್ಸಂಗದ ಸಮಯದಲ್ಲಿ ಸಂಚಾರಿವಾಣಿಯನ್ನು ಉಪಯೋಗಿಸದೇ ಅಲ್ಲಿ ನಡೆಯುತ್ತಿರುವ ವಿಷಯದ ಕಡೆಗೆ ಏಕಾಗ್ರತೆಯಿಂದ ಗಮನ ನೀಡಬೇಕು. ತುರ್ತು ಸೇವೆಯಿಂದಾಗಿ ಸಂಚಾರಿವಾಣಿ ಉಪಯೋಗಿಸಬೇಕಾದರೆ ಜವಾಬ್ದಾರ ಸಾಧಕರಿಗೆ ಕೇಳಿಕೊಳ್ಳಬೇಕು. ಸಾಧಕರು ಸಭೆಯಲ್ಲಿ ಸಂಚಾರಿವಾಣಿ ಉಪಯೋಗಿಸುತ್ತಿದ್ದರೆ ಜವಾಬ್ದಾರ ಸಾಧಕರು ಅವರಿಗೆ ಅದರ ಅರಿವು ಮಾಡಿಕೊಡಬೇಕು.’ - (ಪೂ.) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೪.೫.೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಭೆ, ಸತ್ಸಂಗ ಇತ್ಯಾದಿ ನಡೆಯುತ್ತಿರುವಾಗ ಸಂಚಾರಿವಾಣಿ ಉಪಯೋಗಿಸುವುದಕ್ಕಿಂತ ಸಭೆಯಲ್ಲಿ ಹೇಳುವ ಅಂಶಗಳನ್ನು ಗಮನವಿಟ್ಟು ಕೇಳಿರಿ !