ಸರ
ಕುತ್ತಿಗೆಯಲ್ಲಿ ಚಿನ್ನ ಅಥವಾ ಬೆಳ್ಳಿಯ ಲೋಹದಿಂದ (ಧಾತು) ತಯಾರಿಸಿದ ಸರವನ್ನು ಧರಿಸುತ್ತಾರೆ. ಸರದಲ್ಲಿ ಕೆಲವೊಮ್ಮೆ ಹವಳ ಮತ್ತು ರುದ್ರಾಕ್ಷಿಗಳನ್ನು ಅಳವಡಿಸುತ್ತಾರೆ.
ಚಿನ್ನದ ಸರದ ಮಹತ್ವ
ಅ. ಸರದಲ್ಲಿ ತೇಜತತ್ತ್ವದ ಚೈತನ್ಯಯುಕ್ತ ಲಹರಿಗಳು ಆಕರ್ಷಿತವಾಗುತ್ತವೆ.
ಆ. ತೇಜತತ್ತ್ವದಿಂದ ದೇಹದಲ್ಲಿನ ಉಷ್ಣತೆಯು ಹೆಚ್ಚಾಗುವ ಮಣಿಪುರ ಚಕ್ರವು ಜಾಗೃತವಾಗುತ್ತದೆ ಮತ್ತು ಪಂಚಪ್ರಾಣಗಳಿಗೆ ವೇಗವು ದೊರಕುತ್ತದೆ.
ಇ. ಸರದಿಂದ ಸಾತ್ತ್ವಿಕ ತೇಜಯುಕ್ತ ಲಹರಿಗಳು ಪ್ರಕ್ಷೇಪಿಸುವುದರಿಂದ ವಾಯುಮಂಡಲದಲ್ಲಿನ ಸೀಮಿತ ಕ್ಷೇತ್ರದಲ್ಲಿನ ರಜ-ತಮ ಕಣಗಳ ಉಚ್ಚಾಟನೆಯಾಗುತ್ತದೆ.
ಈ. ತೇಜವು ನಿರ್ಮಾಣವಾಗುವುದರಿಂದ ಸರವನ್ನು ಧರಿಸುವ ಜೀವಗಳಲ್ಲಿ ಕ್ಷಾತ್ರಭಾವವು ನಿರ್ಮಾಣವಾಗುತ್ತದೆ.
- ಓರ್ವ ವಿದ್ವಾಂಸ (ಪೂ. (ಸೌ.) ಅಂಜಲಿ ಗಾಡಗೀಳ ಇವರು ಓರ್ವ ವಿದ್ವಾಂಸ ಈ ಅಂಕಿತನಾಮದಿಂದ ಬರೆಯುತ್ತಾರೆ. (೬.೧೨.೨೦೦೫))

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !