ಹಿಂದಿನ ಕಾಲದ ಅಶಿಕ್ಷಿತ ತಾಯಂದಿರು ಮತ್ತು ಇಂದಿನ ವಿಜ್ಞಾನಯುಗದ ಪ್ರಗತಿಶೀಲ ತಾಯಂದಿರು !

ಮಕ್ಕಳ ಮೇಲೆ ಸುಸಂಸ್ಕಾರವನ್ನು ಮಾಡುವ ಹಿಂದಿನ ಕಾಲದ ಅಶಿಕ್ಷಿತ ತಾಯಂದಿರು ಹಾಗೂ ಪಾಲಕರ ಶಿಕ್ಷಣಹಾಗೂ ಬಾಲ ಸಂಗೋಪನೆಮುಂತಾದವುಗಳ ಅಧ್ಯಯನವನ್ನು ಮಾಡಿದ, ಹಾಗೆಯೇ ಹೊಸ ಕೌಶಲ್ಯಗಳನ್ನು ಕಲಿತ ಇಂದಿನ ವಿಜ್ಞಾನಯುಗದ ಪ್ರಗತಿಶೀಲ ಕೃತಕತಾಯಂದಿರು !
. ಜೀಜಾಮಾತೆಯವರಿಗೆ ಓದಲು ಬರೆಯಲು ಬರುತ್ತಿರಲಿಲ್ಲ. ಅವರು ಅನಕ್ಷರಸ್ಥರಾಗಿದ್ದರು. ಆದರೂ ಛ. ಶಿವಾಜಿ ಮಹಾರಾಜರನ್ನು ಸಿದ್ಧಗೊಳಿಸಿದರು.
. ಎಲ್ಲಿಯವರೆಗೆ ಮೇಲ್ದರ್ಜೆಯ ಆಂಗ್ಲ ಶಿಕ್ಷಣ, ಅಂತಹ ವಿಚಾರ ಪ್ರಕ್ರಿಯೆ ಮತ್ತು ಜೀವನ ಮುಂತಾದವುಗಳ ಬಗ್ಗೆ ಪಾಶ್ಚಿಮಾತ್ಯರ ಕೃತಕ ರೀತಿನೀತಿಗಳಿರಲಿಲ್ಲವೋ. ಅಲ್ಲಿಯವರೆಗೆ ಹುಡುಗ-ಹುಡುಗಿಯರ ನಡುವೆ ಪ್ರೇಮ ಪ್ರಕರಣಗಳಿರಲಿಲ್ಲ, ಸಲಿಂಗಿಗಳು, ಹಸ್ತಮೈಥುನ ಇತ್ಯಾದಿ ಲೈಂಗಿಕ ಸಮಸ್ಯೆಗಳು ಇರಲಿಲ್ಲ, ಗರ್ಲ್‌ಫ್ರೆಂಡ್ ಮತ್ತು ಬಾಯ್‌ಫ್ರೆಂಡ್ ಇರಲಿಲ್ಲ ಹಾಗೂ ಕುಮಾರಿ ಮಾತೆಯರೂ ಇರಲಿಲ್ಲ. ಆ ಸಮಯದಲ್ಲಿ ನರಕದಲ್ಲಿ ಹೊರಳಾಡುವಂತಹ ಯಾವುದೇ ಸಮಸ್ಯೆಗಳೂ ಇರಲಿಲ್ಲ.
. ನೂರು-ನೂರಿಪ್ಪತ್ತು ವರ್ಷಗಳ ಹಿಂದೆ ಅಜ್ಜಿ ಮತ್ತು ತಾಯಿಯಿಂದ ಶ್ರಾವಣ-ಭಾದ್ರಪದ ಮಾಸದಲ್ಲಿ ಕಥೆಗಳನ್ನು ಕೇಳಿದ ಯಾವ ಹೆಣ್ಣುಮಕ್ಕಳು ಇಂದು ತಾಯಿಯಾಗಿದ್ದಾರೆಯೋ, ಅವರ ತ್ಯಾಗ, ಅವರ ಆತ್ಮಶ್ರದ್ಧೆ ತುಂಬಾ ಶಕ್ತಿಶಾಲಿಯಾಗಿತ್ತು. ನಮ್ಮ ಆ ತಾಯಂದಿರ ಹಿಂದಿನ ಪೀಳಿಗೆಯ ಸಂಸ್ಕಾರಗಳು, ಹಳೆಯ ರೀತಿನೀತಿಗಳ ಜೀವನಶೈಲಿಯ ರಕ್ಷಣಾ ಕವಚವು, ಕರ್ಣನ ಕವಚ ಕುಂಡಲಗಳಂತೆ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿತ್ತು.
. ಸಾವಿತ್ರಿಯ ವ್ರತವನ್ನಾಚರಿಸುವ ಮತ್ತು ಆ ಪದ್ಧತಿಯನ್ನು ಪಾಲಿಸುವ ಹಾಗೂ ತಮ್ಮ ಮಕ್ಕಳಿಗೆ ಆ ಪದ್ಧತಿಯನ್ನು ಚಾಚೂತಪ್ಪದೆ ಪರಿಪಾಲಿಸುವಂತೆ ಮಾಡಿದ ಅಶಿಕ್ಷಿತ ತಾಯಂದಿರೆಲ್ಲಿ ಹಾಗೂ ಎಲ್ಲಿ ಇಂದಿನ ಪಾಲಕರ ಶಿಕ್ಷಣ ಹಾಗೂ ಬಾಲಸಂಗೋಪನೆ ಇವುಗಳ ಶಿಕ್ಷಣ ಪಡೆದು ಪ್ರಾವಿಣ್ಯ ಸಂಪಾದಿಸಿದ ಹಾಗೂ ಕಿಶೋರಾವಸ್ಥೆಯ ಮಕ್ಕಳನ್ನು ರೂಪಿಸಲು ಹೊಸ ಅನೈತಿಕ ಕೌಶಲ್ಯ ಕಲಿಯುವ ಪ್ರಗತಿಶೀಲ ಕೃತಕ ತಾಯಂದಿರು ! - ಗುರುದೇವ ಡಾ. ಕಾಟೇಸ್ವಾಮೀಜಿ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಿಂದಿನ ಕಾಲದ ಅಶಿಕ್ಷಿತ ತಾಯಂದಿರು ಮತ್ತು ಇಂದಿನ ವಿಜ್ಞಾನಯುಗದ ಪ್ರಗತಿಶೀಲ ತಾಯಂದಿರು !