ಗೋವಾದಲ್ಲಿ ಪಂಚಮ ‘ಅಖಿಲ ಭಾರತೀಯ ಹಿಂದೂ ಅಧಿವೇಶನ’ದ ಸಿದ್ಧತೆಗೆ ಆರಂಭ !

ಫೋಂಡಾ (ಗೋವಾ) : ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಇಲ್ಲಿ ೧೯ ರಿಂದ ೨೫ ಜೂನ್ ೨೦೧೬ ರ ಕಾಲಾವಧಿಯಲ್ಲಿ ಐದನೇ (ಪಂಚಮ) ‘ಅಖಿಲ ಭಾರತೀಯ ಹಿಂದೂ ಅಧಿವೇಶನ’ವನ್ನು ಆಯೋಜಿಸಲಾಗಿದೆ. ಈ ಅಧಿವೇಶನಕ್ಕೆ ಹಿಂದೂ ಧರ್ಮ ಮತ್ತು ಸಮಾಜ ಇವುಗಳ ಮೇಲಾಗುತ್ತಿರುವ ಆಘಾತಗಳನ್ನು ನಿಷೇಧಿಸುವುದು ಮತ್ತು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಕಾರ್ಯ ಮಾಡುತ್ತಿರುವ ವ್ಯಕ್ತಿಗಳು (ಸಂಘಟನೆಗಳ ಪದಾಧಿಕಾರಿಗಳು, ನ್ಯಾಯವಾದಿಗಳು, ಸಂಪಾದಕರು ಮತ್ತು ಲೇಖಕರು) ಸಹಭಾಗಿಯಾಗಲಿದ್ದಾರೆ. ‘ಹಿಂದೂ ರಾಷ್ಟ್ರದ ಸ್ಥಾಪನೆ’ಯೇ ಈ ಅಧಿವೇಶನದ ಮುಖ್ಯ ಉದ್ದೇಶವಾಗಿದೆ. ಈ ಅಧಿವೇಶನಕ್ಕೆ ಮಹಾರಾಷ್ಟ್ರ, ಗೋವಾ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಅಂಡಮಾನ್, ಓಡಿಶಾ, ಅಸ್ಸಾಂ, ಬಂಗಾಲ, ಝಾರಖಂಡ, ಜಮ್ಮೂ-ಕಾಶ್ಮೀರ, ಹರಿಯಾಣಾ, ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಡ್, ರಾಜಸ್ಥಾನ ಮತ್ತು ಗುಜರಾತ್ ಈ ರಾಜ್ಯಗಳ ಹಿಂದುತ್ವನಿಷ್ಠರು ಸಹಭಾಗಿಯಾಗಲಿದ್ದಾರೆ. ಈ ಹಿಂದೂ ಅಧಿವೇಶನದಲ್ಲಿ ಸಹಭಾಗಿಯಾಗಲು ಬಯಸುವ ಹಿಂದುತ್ವವಾದಿ ಸಂಘಟನೆಯ ಪದಾಧಿಕಾರಿಗಳು, ಹಿಂದುತ್ವವಾದಿ ನ್ಯಾಯವಾದಿ ಗಳು, ಪತ್ರಕರ್ತರು http://www.hindujagruti.org/hjs-activities/hindu-adhiveshan ಈ ಮಾರ್ಗಿಕೆಯಲ್ಲಿ ಆನ್‌ಲೈನ್’ ನೋಂದಣಿ ಮಾಡಬೇಕು ಎಂದು ಸಮಿತಿಯಿಂದ ತಿಳಿಸಲಾಗಿದೆ.

ಅಧಿವೇಶನದ ಆಯೋಜನೆಗಾಗಿ ಧರ್ಮದಾನ ಮಾಡಲು ವಿನಂತಿ !
ಅಧಿವೇಶನಕ್ಕಾಗಿ ಸಭಾಗೃಹ, ನಿವಾಸ, ಭೋಜನ, ಪ್ರದರ್ಶನ, ಸ್ಥಳೀಯ ಸಾರಿಗೆ ಇತ್ಯಾದಿಗಾಗಿ ಸುಮಾರು ೪೫ ಲಕ್ಷ ರೂಪಾಯಿ ವೆಚ್ಚ ಬರಬಹುದು. ಧರ್ಮಪ್ರೇಮಿ ದಾನಿಗಳು ಈ ಕಾರ್ಯಕ್ಕಾಗಿ ಉದಾರವಾಗಿ ಆರ್ಥಿಕ ಸಹಾಯ ಮಾಡಬೇಕು. ಈ ಧರ್ಮದಾನಕ್ಕೆ ‘ಆದಾಯ ತೆರಿಗೆ ಕಾನೂನು ೧೯೬೧’ಕ್ಕನುಸಾರ ‘೮೦ಜಿ(೫)’ಗನುಸಾರ ಆದಾಯ ತೆರಿಗೆ ವಿನಾಯಿತಿ ಸಿಗುವುದು. ಅರ್ಪಣೆದಾರರು ಈ ಸೌಲಭ್ಯದ ಲಾಭ ಪಡೆಯಬಹುದು. ಧನಾದೇಶವನ್ನು ಹಿಂದೂ ಜನಜಾಗೃತಿ ಸಮಿತಿಯ ಹೆಸರಿನಲ್ಲಿ ಸ್ವೀಕರಿಸಲಾಗುವುದು.
ಧರ್ಮದಾನಕ್ಕಾಗಿ ವಿವರಣೆಗಳು
ಬ್ಯಾಂಕ್‌ನ ಹೆಸರು : IDBI Bank ಶಾಖೆಯ ಹೆಸರು : ನ್ಯೂ ಪನವೇಲ್
ಸೇವಿಂಗ್ಸ್ ಖಾತೆ ಕ್ರಮಾಂಕ : ೦೨೩೧೦೪೦೦೦೧೮೦೩೨೦
ಐಎಫ್‌ಐಸಿ ಕ್ರಮಾಂಕ : IBKL೦೦೦೦೦೨೩
ವಿಶೇಷ ಸೂಚನೆ : ಧರ್ಮದಾನವೆಂದು ಬ್ಯಾಂಕ್‌ನಲ್ಲಿ ನಿಧಿಯನ್ನು ತುಂಬಿದ ನಂತರ ಅದರ ವಿವರಗಳ ಮಾಹಿತಿಯನ್ನು accsamiti@gmail.com ವಿ-ಅಂಚೆ ವಿಳಾಸಕ್ಕೆ ಕಳುಹಿಸಬೇಕು ಅಥವಾ ಶ್ರೀ. ಸುರಜಿತ್ ಮಾಥುರ ಇವರಿಗೆ ೦೮೪೫೧೦೦೬೦೭೪ ಈ ಸಂಖ್ಯೆಯನ್ನು ಸಂಪರ್ಕಿಸಬೇಕು, ಎಂದು ಸಮಿತಿಯ ವತಿಯಿಂದ ತಿಳಿಸಲಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಗೋವಾದಲ್ಲಿ ಪಂಚಮ ‘ಅಖಿಲ ಭಾರತೀಯ ಹಿಂದೂ ಅಧಿವೇಶನ’ದ ಸಿದ್ಧತೆಗೆ ಆರಂಭ !