ಅಮರನಾಥ ಯಾತ್ರೆ ಮೇಲೆ ಜಿಹಾದಿ ಉಗ್ರರ ಕರಿನೆರಳು

ಕಾಂಗ್ರೆಸ್‌ನಂತೆ ಈಗಿನ ಸರಕಾರದ ಆಡಳಿತದಲ್ಲಿಯೂ ಹಿಂದೂಗಳಿಗೆ
ಜಿಹಾದಿ ಉಗ್ರರ ಕರಿನೆರಳಿನಲ್ಲಿ ಯಾತ್ರೆ ಮಾಡಬೇಕಾಗುವುದು ಲಜ್ಜಾಸ್ಪದ!
ಜುಲೈ ೨ ರಿಂದ ಯಾತ್ರೆ ಆರಂಭ !
ಯಾತ್ರೆಯನ್ನು ಕೆಡಿಸಲು ಪಣತೊಟ್ಟಿರುವ ಉಗ್ರರು
ಶ್ರೀನಗರ : ಈ ವರ್ಷ ಅಮರನಾಥ ಯಾತ್ರೆಯ ಮೇಲೆ ಉಗ್ರರ ವಕ್ರದೃಷ್ಟಿ ಇದೆ. ಯಾತ್ರಿಕರಿಗೆ ಉಗ್ರರಿಂದ ತೊಂದರೆಯಾಗಬಾರದೆಂದು ಭದ್ರತಾ ವ್ಯವಸ್ಥೆಯೂ ಭರದಲ್ಲಿ ಸಿದ್ಧತೆ ಆರಂಭಿಸಿದ್ದು ಈಗಾಗಲೇ ಎಲ್ಲೆಡೆ ಬಂದೋಬಸ್ತ್ ಮಾಡಲಾಗಿದೆ ಹಾಗೂ ಸಂಶಯ ಬಂದ ತಕ್ಷಣ ದಾಳಿ ಮಾಡಲು ಆರಂಭವಾಗಿದೆ.
ಅಮರನಾಥ ಯಾತ್ರೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಎಂಬ ಜಿಹಾದಿ ಉಗ್ರ ಸಂಘಟನೆಯು ಅಡಚಣೆ ನಿರ್ಮಾಣ ಮಾಡಬಹುದು ಅಥವಾ ಕೆಲವು ಉಗ್ರವಾದಿ ಕುಕೃತ್ಯಗಳನ್ನು ಮಾಡಬಹುದು, ಎಂದು ತನಿಖಾ ಇಲಾಖೆಯು ಭಯ ವ್ಯಕ್ತಪಡಿಸಿದೆ. ಹಿಜ್ಬುಲ್ ಮುಜಾಹಿದ್ದೀನದಲ್ಲಿ ಯುವಕರನ್ನು ಸೇರಿಸಿಕೊಳ್ಳುವ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಅವನ ಹೇಳಿಕೆಯಿಂದ, ಈ ಯಾತ್ರೆಯನ್ನು ಸುಗಮವಾಗಿ ನಡೆಯಲು ಬಿಡಬಾರದು, ಎಂದು ಈ ಸಂಘಟನೆಗಳು ನಿರ್ಧರಿಸಿರುವುದು ಬೆಳಕಿಗೆ ಬಂದಿದೆ. ಆದ್ದರಿಂದ ಪೊಲೀಸರು ಮತ್ತು ಭದ್ರತಾ ದಳದವರು ಈಗಿನಿಂದಲೇ ಜಾಗರೂಕರಾಗಿರಲು ಸೂಚನೆ ನೀಡಲಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಅಮರನಾಥ ಯಾತ್ರೆ ಮೇಲೆ ಜಿಹಾದಿ ಉಗ್ರರ ಕರಿನೆರಳು