ಒಡಿಶಾದಲ್ಲಿ ಗೋಕಳ್ಳರ ವಿರುದ್ಧ ಕಾರ್ಯ ಮಾಡುವ ಹಿಂದುತ್ವನಿಷ್ಠನಿಗೆ ೧೬ ದಿನಗಳ ಪೊಲೀಸ್ ಕಸ್ಟಡಿಯಲ್ಲಿ ಥಳಿತ !

ಗೋಕಳ್ಳರ ವಿರುದ್ಧ ಕಾರ್ಯ ಮಾಡುವ ಸಹನಶೀಲ ಹಿಂದೂಗಳಿಗೆ ಹೊಡೆಯುವ ಪೊಲೀಸ್
ಇಲಾಖೆ ಗೋಕಳ್ಳಸಾಗಾಣಿಕೆ, ಗೋಹತ್ಯೆ ಮಾಡಿ ಕೋಟಿಗಟ್ಟಲೆ ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸುವ ಮತಾಂಧರ ವಿರುದ್ಧ ತುಟಿ ಬಿಚ್ಚುವುದಿಲ್ಲ, ಎಂಬುದನ್ನು ಗಮನದಲ್ಲಿಡಿ !
ಮನವಿಪತ್ರದೊಂದಿಗೆ ಶ್ರೀ. ಅನಿಲ್ ಧೀರ್ ()
ಮತ್ತು ಗೋಜ್ಞಾನ ಫೌಂಡೇಶನ್ ಮತ್ತು ಭಾರತ
ರಕ್ಷಾ ಮಂಚ್‌ನ ಹಿಂದುತ್ವನಿಷ್ಠರು
ಭುವನೇಶ್ವರ (ಒಡಿಶಾ) : ಇಲ್ಲಿ ಗೋಕಳ್ಳಸಾಗಾಟ ಮಾಡುವವರ ವಿರುದ್ಧ ಕಾರ್ಯ ಮಾಡುವ ಹಾಗೂ ದೆಹಲಿಯಲ್ಲಿನ ಗೋಜ್ಞಾನ ಫೌಂಡೇಶನ್ ಸಂಘಟನೆಯ ಹಿಂದುತ್ವನಿಷ್ಠ ತೀರ್ಥಕುಮಾರ ಸಾಹೂರವರನ್ನು ಪೊಲೀಸ್ ಕಸ್ಟಡಿಗೆ ತಳ್ಳಿ ಸುಮಾರು ೧೬ ದಿನಗಳ ವರೆಗೆ ವಿಪರೀತ ಹೊಡೆಯಲಾಗಿದೆ. ಆದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು. ಕೊನೆಗೆ ಏಪ್ರಿಲ್ ೨೦ ರಂದು ರಾಯಗಡಾ ಜಿಲ್ಲೆಯ ಜಿಲ್ಲಾ ನ್ಯಾಯಾಧೀಶರು ಅವರಿಗೆ ಜಾಮೀನು ಸಮ್ಮತಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಜಗನ್ನಾಥ ಮೊಹಂತಿಯವರು ಸಾಹೂ ರವರ ವಿರುದ್ಧ ತಲೆಬುಡ ಇಲ್ಲದ ಆರೋಪ ಮಾಡಿ ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಪೊಲೀಸರು ಸಾಹೂರವರ ಮೇಲೆ ವಿವಿಧ ಗಂಭೀರವಾದ ಆರೋಪ ಗಳನ್ನು ದಾಖಲಿಸಿಕೊಂಡಿದ್ದಾರೆ.
ಕೇಂದ್ರೀಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಇವರು ಈ ಪ್ರಕರಣವನ್ನು ಸ್ವತಃ ಅವಲೋಕಿಸಿ ಒಡಿಶಾದ ಮುಖ್ಯಮಂತ್ರಿ ನವೀನ ಪಟ್ನಾಯಕ್ ಇವರಿಗೆ ಜಿಲ್ಲಾಧಿಕಾರಿಗಳ ಸಂಶಯದ ಭೂಮಿಕೆಯ ವಿಷಯದಲ್ಲಿ ಪತ್ರ ಬರೆದಿದ್ದಾರೆ. (ಮನೇಕಾ ಗಾಂಧಿ ಇವರಂತೆ ಗೋರಕ್ಷಣೆಯ ತಳಮಳವು ಇತರ ಹಿಂದುತ್ವನಿಷ್ಠ ನೇತಾರರಲ್ಲಿ ಯಾವಾಗ ನಿರ್ಮಾಣವಾಗುವುದು ? - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಒಡಿಶಾದಲ್ಲಿ ಗೋಕಳ್ಳರ ವಿರುದ್ಧ ಕಾರ್ಯ ಮಾಡುವ ಹಿಂದುತ್ವನಿಷ್ಠನಿಗೆ ೧೬ ದಿನಗಳ ಪೊಲೀಸ್ ಕಸ್ಟಡಿಯಲ್ಲಿ ಥಳಿತ !