ಸಾಧಕರೇ, ಪ.ಪೂ.ಗುರುದೇವರು ಹೇಳಿದ ಉಪಾಯಗಳೆಂದರೆ, ಸಂಭಾವ್ಯ ಆಪತ್ಕಾಲದಲ್ಲಿ ಜೀವಂತವಾಗಿರಲು ಸಂಜೀವಿನಿಯೇ ಆಗಿದೆ, ಎಂಬುದನ್ನು ಗಮನದಲ್ಲಿಟ್ಟು ಎಲ್ಲ ಉಪಾಯಗಳನ್ನು ಗಾಂಭೀರ್ಯದಿಂದ ಮಾಡಿರಿ !

ಸದ್ಯ ಆಪತ್ಕಾಲವು ತೀರಾ ಸಮೀಪ ಬಂದಿದೆ. ಆದರೂ ಪ್ರಸಾರ ಹಾಗೂ ಆಶ್ರಮಗಳಲ್ಲಿನ ಅನೇಕ ಸಾಧಕರು ಆಧ್ಯಾತ್ಮಿಕ ಉಪಾಯಗಳನ್ನು ಪೂರ್ಣಗೊಳಿಸುವುದಿಲ್ಲವೆಂದು ಅರಿವಾಗಿದೆ. ಉಪಾಯದ ವಿಷಯದಲ್ಲಿ ಸಾಧಕರಿಂದಾಗುವ ತಪ್ಪುಗಳು, ಸಾಧಕರು ಉಪಾಯ ಮಾಡದಿರುವುದರಿಂದ ಹೆಚ್ಚಾಗುವ ತೊಂದರೆಗಳು ಹಾಗೂ ಉಪಾಯಗಳ ಅಸಾಧಾರಣ ಮಹತ್ವದ ವಿಷಯಗಳ ಮಾಹಿತಿಯನ್ನು ಮುಂದೆ ನೀಡುತ್ತಿದ್ದೇವೆ.
. ಸಾಧಕರಲ್ಲಿ ಉಪಾಯದ ವಿಷಯದಲ್ಲಿ ಗಾಂಭೀರ್ಯವಿಲ್ಲದಿರುವುದರಿಂದ ಅವರಿಂದಾಗುವ ತಪ್ಪುಗಳು
. ಪ್ರತಿದಿನ ಕೆಲವು ಗಂಟೆಗಳ ಕಾಲ ಕುಳಿತುಕೊಂಡು ನಾಮಜಪ ಮಾಡಲು ಹೇಳಿದ್ದರೆ ಅದನ್ನು ಮಾಡದಿರುವುದು
. ಉಪಾಯದ ಸಮಯದಲ್ಲಿ ಅನಾವಶ್ಯಕ ಏನಾದರೂ ಮಾಡು ವುದರಲ್ಲಿ ಸಮಯ ವ್ಯರ್ಥಗೊಳಿಸುವುದು ಹಾಗೂ ಅದರಿಂದ ಸಾಧನೆಯ ಸಮಯವೂ ವ್ಯರ್ಥವಾಗುವುದು.
. ತನಗೆ ಆಧ್ಯಾತ್ಮಿಕ ತೊಂದರೆ ಆಗುತ್ತಿದೆಯೆಂದು ತಿಳಿದರೂ ಅದಕ್ಕೆ ತಕ್ಷಣ ಆಧ್ಯಾತ್ಮಿಕ ಉಪಾಯ ಮಾಡದಿರುವುದು
. ಆಧ್ಯಾತ್ಮಿಕ ಕಾರಣಗಳಿಂದಾಗುವ ತೊಂದರೆಗಳಿಂದ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳು ಬಂದರೆ ಹೆಚ್ಚೆಚ್ಚು ಉಪಾಯ ಮಾಡದೆ, ಮಲಗಿಕೊಂಡಿರುವುದು
. ಎಲ್ಲರಿಗಾಗಿರುವ ಉಪಾಯ ನಿಯಮಿತವಾಗಿ ಮಾಡದಿರುವುದು.
. ರಾತ್ರಿ ಮಲಗುವಾಗ ಹಾಸಿಗೆಯ ಸುತ್ತಲೂ ದೇವರ ನಾಮಜಪದ ಪಟ್ಟಿಗಳ ಮಂಡಲ ಹಾಕದಿರುವುದು.
. ಪ್ರತಿದಿನ ಊದುಬತ್ತಿ, ಅತ್ತರ್, ಕರ್ಪೂರ ಇವುಗಳ ಉಪಾಯ ಮಾಡದಿರುವುದು.
. ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು ಆಧ್ಯಾತ್ಮಿಕ ಉಪಾಯಗಳ ಪ್ರಮಾಣವನ್ನು ಹೆಚ್ಚಿಸುವ ಕುರಿತು ದೈನಿಕ ಸನಾತನ ಪ್ರಭಾತದಲ್ಲಿ ಚೌಕಟ್ಟು ಪ್ರಕಟವಾಗುತ್ತಿದ್ದರೂ ಹಾಗೆ ಮಾಡದಿರುವುದು.
. ಮಹರ್ಷಿಗಳು ಆಪತ್ಕಾಲದ ವಿಷಯದಲ್ಲಿ ನಿರಂತರವಾಗಿ ಹೇಳು ತ್ತಿದ್ದ ವಿಷಯಗಳು ಸನಾತನ ಪ್ರಭಾತದಲ್ಲಿ ಪ್ರಕಟವಾಗುತ್ತಿದ್ದರೂ, ಉಪಾಯ, ಸಾಧನೆ ಇತ್ಯಾದಿಗಳ ವಿಷಯದಲ್ಲಿ ಗಾಂಭೀರ್ಯ ಅನಿಸದಿರುವುದು.
. ಉಪಾಯವನ್ನು ದುರ್ಲಕ್ಷಿಸುವುದರಿಂದಾಗುವ ತೊಂದರೆಗಳು
ಎಲ್ಲ ಆಧ್ಯಾತ್ಮಿಕ ಉಪಾಯಗಳನ್ನು ನಿಯಮಿತವಾಗಿ ಮಾಡದಿರುವುದ ರಿಂದ ಅನೇಕ ಸಾಧಕರಿಗೆ ಸೇವೆ ಮಾಡುವಾಗ ಏನೂ ತೋಚದಿರುವುದು, ಆಯಾಸವಾಗುವುದು, ಮನಸ್ಸು ಮತ್ತು ಬುದ್ಧಿಯ ಮೇಲೆ ಆವರಣ ಬರು ವುದು, ನಿರಾಶೆ ಮತ್ತು ನಕಾರಾತ್ಮಕ ವಿಚಾರಗಳು ಬರುವುದು ಇತ್ಯಾದಿ ತೊಂದರೆಗಳಾಗುತ್ತವೆ.
. ಸಾಧಕರೇ, .ಪೂ.ಗುರುದೇವರು ಹೇಳಿದ ಎಲ್ಲ ಉಪಾಯಗಳೆಂದರೆ ಈ ಘೋರ ಕಲಿಯುಗದಲ್ಲಿನ ಸಂಜೀವಿನಿಯೇ ಆಗಿದೆ, ಎಂಬುದನ್ನು ಗಮನದಲ್ಲಿಡಿ !
ಇಂದಿನ ಕುಸಿದಿರುವ ಸಮಾಜವ್ಯವಸ್ಥೆಯಿಂದ ಎಲ್ಲೆಡೆ ರಜ-ತಮದ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದ್ದರಿಂದ ಸಾಧನನಿರತರಾಗಿರು ವುದು ಅಸಾಧ್ಯದ ವಿಷಯವಾಗಿದೆ. ಆದರೂ ಕೇವಲ ಪ.ಪೂ. ಗುರುದೇವರ ಕೃಪೆಯಿಂದ ಸಾವಿರಾರು ಸಾಧಕರು ಗುರುಕೃಪಾಯೋಗಾನುಸಾರ ಸಾಧನೆ ಮಾಡಿ ತಮ್ಮ ಆಧ್ಯಾತ್ಮಿಕ ಉನ್ನತಿ ಮಾಡಿಕೊಳ್ಳುತ್ತಿದ್ದಾರೆ.
ಸಾಧಕರ ಸಾಧನೆಯಲ್ಲಿ ವ್ಯತ್ಯಯವನ್ನುಂಟು ಮಾಡಲು ಅಸುರಿ ವೃತ್ತಿಯ ಶಕ್ತಿಗಳು ಶತಪ್ರಯತ್ನ ಮಾಡುತ್ತಿವೆ. ಆದ್ದರಿಂದ ಸಾಧಕರ ರಕ್ಷಣೆಗಾಗಿ ಸನಾತನ ಪ್ರಭಾತ ನಿಯತಕಾಲಿಕೆಗಳ ಮೂಲಕ ಪ.ಪೂ. ಗುರುದೇವರು ಆಯಾ ಸಮಯದಲ್ಲಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ಹೇಳುತ್ತಿದ್ದಾರೆ. ವಾಸ್ತವದಲ್ಲಿ ಈ ಉಪಾಯಗಳು ಕೇವಲ ಉಪಾಯವಲ್ಲ ಪ್ರಸ್ತುತ ಕಾಲದ ಸಂಜೀವಿನಿಯೇ ಆಗಿದೆ. ಆದ್ದರಿಂದ ಸಾಧಕರು ಪ.ಪೂ. ಗುರುದೇವರು ಹೇಳಿದ ಎಲ್ಲ ಉಪಾಯಗಳನ್ನು ನಿಯಮಿತವಾಗಿ ಮನಃಪೂರ್ವಕವಾಗಿ ಮಾಡಿ ಈ ಆಪತ್ಕಾಲವನ್ನು ಎದುರಿಸಲು ಸಿದ್ಧರಾಗಬೇಕು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಾಧಕರೇ, ಪ.ಪೂ.ಗುರುದೇವರು ಹೇಳಿದ ಉಪಾಯಗಳೆಂದರೆ, ಸಂಭಾವ್ಯ ಆಪತ್ಕಾಲದಲ್ಲಿ ಜೀವಂತವಾಗಿರಲು ಸಂಜೀವಿನಿಯೇ ಆಗಿದೆ, ಎಂಬುದನ್ನು ಗಮನದಲ್ಲಿಟ್ಟು ಎಲ್ಲ ಉಪಾಯಗಳನ್ನು ಗಾಂಭೀರ್ಯದಿಂದ ಮಾಡಿರಿ !