ಭಾರತದಲ್ಲಿ ಸುಮಾರು ೮೦೦ ಕೋಟಿಗಳಷ್ಟು ಮೊತ್ತದ ಖೋಟಾನೋಟು ಚಲಾವಣೆಯಲ್ಲಿ !

ದೇಶವನ್ನು ಕಾಡುವ ಈ ಆರ್ಥಿಕ ಜಿಹಾದನ್ನು ಸದೆಬಡಿಯಲು
ಕೇಂದ್ರಸರಕಾರ ಯಾವ ಮಹತ್ವದ ಕ್ರಮಗಳನ್ನು ಕೈಗೊಳ್ಳಲಿದೆ ?
ನವ ದೆಹಲಿ : ಒಂದು ವರದಿಗನುಸಾರ ದೇಶದ ಪ್ರತಿ ೧೦ ಲಕ್ಷ ನೋಟುಗಳಲ್ಲಿ ಸುಮಾರು ೨೫೦ ನೋಟುಗಳು ಖೋಟಾನೋಟುಗಳಿರುವುದು ಕಂಡು ಬಂದಿದೆ. ದೇಶದಲ್ಲಿ ಇವತ್ತಿನ ವರೆಗೆ ಸುಮಾರು ೪೦೦ ಕೋಟಿಗಳಷ್ಟು ಮೊತ್ತದ ಖೋಟಾನೋಟುಗಳಿವೆ. ಭಾರತೀಯ ಅಂಕಿ-ಅಂಶಗಳ ಸಂಸ್ಥೆಯು (ಐ.ಎಸ್.ಐ) ಖೋಟಾನೋಟುಗಳ ಕುರಿತು ನಡೆಸಿದ ಅಧ್ಯಯನದ ವರದಿಯಲ್ಲಿ ವಿವರಿಸಿದೆ. ಈ ವರದಿಯಲ್ಲಿ
೧. ಭಾರತೀಯ ಮಾರುಕಟ್ಟೆಯಲ್ಲಿ ಪ್ರತಿ ವರ್ಷ ೭೦ ಕೋಟಿಗಳಷ್ಟು ಖೋಟಾನೋಟುಗಳನ್ನು ತರಲಾಗುತ್ತಿದೆ. ಆರ್ಥಿಕ ಭಯೋತ್ಪಾದನೆಯೊಂದಿಗೆ ಹೋರಾಡಲು ಕೇಂದ್ರಸರಕಾರವು ಈಗಾಗಲೇ ಕಠಿಣ ಕ್ರಮಗಳನ್ನು ಕೈಕೊಳ್ಳಲು ಪ್ರಾರಂಭಿಸಿದೆ.
೨. ಬ್ಯಾಂಕುಗಳಿಗೆ ಅಧಿಕ ಪ್ರಮಾಣದಲ್ಲಿ ಖೋಟಾನೋಟು ಸಿಗುತ್ತಿದೆ. ಇದನ್ನು ಗಮನಿಸಿದಾಗ ಮಾರುಕಟ್ಟೆಯಲ್ಲಿ ಇಂದಿಗೂ ಅನೇಕ ಖೋಟಾನೋಟುಗಳಿರಬಹುದು.
೩. ಖೋಟಾನೋಟುಗಳನ್ನು ಗುರುತಿಸುವ ಆಂದೋಲನವನ್ನು ಮತ್ತಷ್ಟು ತೀವ್ರಗೊಳಿಸಬೇಕೆಂದೂ ಕೂಡ ಈ ವರದಿಯಲ್ಲಿ ಸೂಚಿಸಲಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಭಾರತದಲ್ಲಿ ಸುಮಾರು ೮೦೦ ಕೋಟಿಗಳಷ್ಟು ಮೊತ್ತದ ಖೋಟಾನೋಟು ಚಲಾವಣೆಯಲ್ಲಿ !