ಫಲಕ ಪ್ರಸಿದ್ಧಿಗಾಗಿ

. ಕೇಸರಿ ಭಯೋತ್ಪಾದನೆಯೆಂದು ಹಿಂದೂಗಳನ್ನು ಹೀಯಾಳಿಸುವವರ ಮೇಲೆ ಈಗ ಖಟ್ಲೆ ದಾಖಲಿಸಿ !
ರಾಷ್ಟ್ರೀಯ ತನಿಖಾ ದಳವು (ಎನ್..) ೨೦೦೮ ರ ಮಾಲೇಗಾಂವ್ ಬಾಂಬ್‌ಸ್ಫೋಟ ಪ್ರಕರಣದ ಪುರವಣಿ ಆರೋಪಪತ್ರವನ್ನು ಸಲ್ಲಿಸುತ್ತಾ ಈ ಪ್ರಕರಣದ ಪ್ರಮುಖ ಆರೋಪಿಯೆಂದು ಈ ಮೊದಲು ಬಿಂಬಿತವಾಗಿದ್ದ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ ಮತ್ತು ಇತರ ಮೂವರಿಗೆ ಕ್ಲೀನ್ ಚಿಟ್ ನೀಡಿದೆ.
. ಭೌತಿಕ ವಿಕಾಸಕ್ಕಿಂತ ದೇಶಕ್ಕೆ ಧರ್ಮ ಮತ್ತು ನೈತಿಕತೆಯ
ಅವಶ್ಯಕತೆ ಅಧಿಕವಾಗಿದೆಯೆನ್ನುವುದನ್ನು ಗಮನದಲ್ಲಿಡಬೇಕು !
ಕೆಲವು ರಾಜ್ಯಗಳಲ್ಲಿ ಮದ್ಯಪಾನ ನಿಷೇಧ ಮತ್ತು ಗೋಮಾಂಸ ನಿಷೇಧ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರಿಂದ ದೇಶದ ಆರ್ಥವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆಯೆಂದು ಗೋದ್ರೆಜ್ ಉದ್ಯೋಗ ಸಮೂಹದ ಅಧ್ಯಕ್ಷರಾದ ಆದಿ ಗೋದ್ರೇಜ್ ಹೇಳಿದ್ದಾರೆ.
. ದಿವಾಳಿಯಾದ ಉದ್ಯಮಿಗೆ ದೇಶವನ್ನು ತೊರೆಯಲು ಅವಕಾಶ ನೀಡಿರುವುದರ ಫಲ !
ಬಿಲಿಯನ್‌ಗಟ್ಲೆ ಸಾಲವನ್ನು ತೀರಿಸದೇ ಬ್ರಿಟನ್‌ಗೆ ಪಲಾಯನ ಗೈದಿರುವ ವಿಜಯ ಮಲ್ಯರವರ ಪಾಸ್‌ಪೊರ್ಟನ್ನು ಭಾರತ ಸರಕಾರವು ರದ್ದುಗೊಳಿಸಿದ್ದರೂ ಅವರನ್ನು ಭಾರತಕ್ಕೆ ಮರಳಿಸಲು ಸಾಧ್ಯವಿಲ್ಲ ಎಂದು ಹೇಳಿದ ಬ್ರಿಟನ್ ಸರಕಾರವು ಮಲ್ಯರನ್ನು ಹಸ್ತಾಂತರಿಸಲು ಕೋರಿದ ಕೇಂದ್ರಸರಕಾರದ ಮನವಿಯನ್ನು ಸಾರಾಸಗಟಾಗಿ ತಳ್ಳಿಹಾಕಿದೆ.
. ಜಿಹಾದಿಗಳನ್ನು ರಕ್ಷಿಸುತ್ತಿರುವ ಪಾಕಿಸ್ತಾನ ಸರಕಾರಕ್ಕೆ ಭಾರತ ತಕ್ಕ ಪಾಠವನ್ನು ಕಲಿಸುವುದೇ?
ಮುಂಬಯಿ ಮೇಲಿನ ೨೬/೧೧ ದಾಳಿಯನ್ನು ತನ್ನ ದೇಶದ ಜನರೇ ಮಾಡಿದ್ದರು ಎನ್ನುವ ಮಾಹಿತಿಯನ್ನು ಐ.ಎಸ್..ನ ಆಗಿನ ಮುಖ್ಯಸ್ಥರಾಗಿದ್ದ ಪಾಕಿಸ್ತಾನದ ಮಾಜಿ ರಾಜತಾಂತ್ರಿಕ ಅಧಿಕಾರಿ ಹುಸೇನ ಹಕ್ಕಾನಿ ಇವರು ತಮ್ಮ ಮುಂಬರುವ ಪುಸ್ತಕದಲ್ಲಿ ನಮೂದಿಸಿದ್ದಾರೆ.
. ಈ ರೀತಿಯ ಅನುದಾನವನ್ನು ಎಂದಾದರೂ ಗೋಶಾಲೆ
ಅಥವಾ ವೇದಪಾಠಶಾಲೆ ಮುಂತಾದ ಸಂಸ್ಥೆಗಳಿಗೆ ನೀಡಿದ್ದಾರೆಯೇ ?
ಲೋಕಸಭೆಯಲ್ಲಿ ಅಲ್ಪಸಂಖ್ಯಾತ ವ್ಯವಹಾರ ಖಾತೆಯ ಮಂತ್ರಿ ಮುಖ್ತಾರ ಅಬ್ಬಾಸ ನಕ್ವಿ ಇವರು ನೀಡಿರುವ ಮಾಹಿತಿಗನುಸಾರ ೨೦೧೫-೧೬ರಲ್ಲಿ ಕೇಂದ್ರ ಸರಕಾರವು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳಿಗೆ ಸುಮಾರು ರೂ.೪೪ ಕೋಟಿ ೬೮ ಲಕ್ಷ ಮೊತ್ತವನ್ನು ನೀಡಿದೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಈ ಮೊತ್ತ ರೂ. ೧೯ ಕೋಟಿ ೪೬ ಲಕ್ಷಗಳಗಷ್ಟೇ ಇತ್ತು.
. ಮುಸಲ್ಮಾನರಿಗಾಗಿ ದೇವಸ್ಥಾನ ಮುಚ್ಚುವ ಪ್ರಮೇಯ ಬರಲು ಇದು ಭಾರತವೋ ಪಾಕಿಸ್ತಾನವೋ ?
ಪುಣೆಯ ಗಂಜಪೇಠದಲ್ಲಿ ಮಾಲೇಗಾಂವ್ ಬಾಂಬ್‌ಸ್ಫೋಟ ಪ್ರಕರಣದಲ್ಲಿ ನಿರಪರಾಧಿಗಳೆಂದು ಬಿಡುಗಡೆಯಾದ ಮುಸಲ್ಮಾನರ ಸತ್ಕಾರದ ಕಾರ್ಯಕ್ರಮವನ್ನು ಮೇ ೧೪ ರಂದು ಸಾಯಂಕಾಲ ಆಯೋಜಿಸ ಲಾಗಿತ್ತು. ಈ ವೇಳೆ ಪೊಲೀಸರು ಕಾರ್ಯಕ್ರಮದ ಸ್ಥಳದ ಸಮೀಪ ಇರುವ ಶಿವನ ದೇವಸ್ಥಾನವನ್ನು ಬಿಳಿ ಬಟ್ಟೆಯಿಂದ ಮುಚ್ಚಿದ್ದರು.
. ಶಾಂತಿ ವಿಧಿಗಳನ್ನು ಏಕೆ ಮಾಡಬೇಕು ?
ಇಳಿವಯಸ್ಸಿನಲ್ಲಿ ಇಂದ್ರಿಯಗಳ ಕಾರ್ಯಕ್ಷಮತೆಯು ಕಡಿಮೆ ಯಾಗತೊಡಗುತ್ತದೆ, ಉದಾ. ಕಿವಿಗಳು ಕೇಳಿಸುವುದು ಕಡಿಮೆಯಾಗು ವುದು, ಕಣ್ಣುಗಳಿಗೆ ಸರಿಯಾಗಿ ಕಾಣಿಸದಿರುವುದು, ವಿವಿಧ ರೋಗಗಳು ನಿರ್ಮಾಣವಾಗುವುದು. ದೇವತೆಗಳ ಕೃಪೆಯಿಂದ ಇವುಗಳ ನಿವಾರಣೆ ಯಾಗಿ ಉಳಿದ ಆಯುಷ್ಯವು ಸುಖಕರವಾಗಿರಬೇಕೆಂದು ೫೦ ನೇ ವರ್ಷದಿಂದ ೧೦೦ ವರ್ಷದ ವರೆಗೆ ಪ್ರತಿ ೫ ವರ್ಷಕ್ಕೊಮ್ಮೆ ಶಾಂತಿವಿಧಿ ಗಳನ್ನು ಮಾಡಬೇಕೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಫಲಕ ಪ್ರಸಿದ್ಧಿಗಾಗಿ