ಶ್ರೀ ಶ್ರೀ ರವಿಶಂಕರ್ ಇವರ ಶಾಂತಿಚರ್ಚೆಯ ಪ್ರಸ್ತಾಪ ಧಿಕ್ಕರಿಸಿ ಶಿರಚ್ಛೇದನಗೊಂಡ ವ್ಯಕ್ತಿಯ ಛಾಯಾಚಿತ್ರ ಕಳುಹಿಸಿದ ಐಸಿಸ್ !

ಇಸ್ಲಾಂ ಅಂದರೆ ಶಾಂತಿ ಎಂದು ಹೇಳಲಾಗುತ್ತದೆ; ಆದರೆ ಐಸಿಸ್‌ಗೆ ಶಾಂತಿಯೊಂದಿಗೆ ಏನೂ ಸಂಬಂಧವಿಲ್ಲ 
ಎಂಬುದನ್ನು ಜಗತ್ತು ಗಮನಿಸಿ ಅದರ ಮೇಲೆ ಸೈನ್ಯ ಕಾರ್ಯಾಚರಣೆಯನ್ನೇ ಮಾಡಬೇಕು !
ಅಗರತಲಾ (ತ್ರಿಪುರಾ): ಸಿರಿಯಾ ಮತ್ತು ಇರಾಕ್ ಈ ದೇಶಗಳಲ್ಲಿ ಬರ್ಬರವಾಗಿ ದೌರ್ಜನ್ಯ ಮಾಡುತ್ತಾ ಭಯವನ್ನು ಹರಡಿಸುವ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಎಂಬ ಜಿಹಾದಿ ಉಗ್ರವಾದಿ ಸಂಘಟನೆಯೊಂದಿಗೆ ಆರ್ಟ್ ಆಫ್ ಲಿವಿಂಗ್‌ನ ಸಂಸ್ಥಾಪಕರಾದ ಶ್ರೀ ಶ್ರೀ ರವಿಶಂಕರ ಇವರ ಶಾಂತಿ ಚರ್ಚೆ ಮಾಡುವ ಪ್ರಸ್ತಾಪವನ್ನು ಐಸಿಸ್ ತಳ್ಳಿ ಹಾಕಿದೆ. ಪ್ರಸ್ತಾಪವನ್ನು ತಳ್ಳಿ ಹಾಕಿದ ಐಸಿಸ್ ಶ್ರೀ ಶ್ರೀ ರವಿಶಂಕರರಿಗೆ ಶಿರಚ್ಛೇದ ಮಾಡಿದ ಒಬ್ಬ ಒತ್ತೆಯಾಳಿನ ಮೃತದೇಹದ ಛಾಯಾಚಿತ್ರವನ್ನು ಕಳುಹಿಸಿದೆ.
ಶ್ರೀ ಶ್ರೀ ರವಿಶಂಕರ ಇವರು ಮುಂದಿನಂತೆ ಹೇಳಿಕೆ ನೀಡಿದರು -
೧. ಕೆಲವು ದಿನಗಳ ಹಿಂದೆ ನಾನು ಐಸಿಸ್‌ನೊಂದಿಗೆ ಶಾಂತಿ ಚರ್ಚೆ ಮಾಡಲು ಪ್ರಯತ್ನಿಸಿದೆ; ಆದರೆ ಅವರು ನನಗೆ ಒಂದು
ಶಿರಚ್ಛೇದ ಮಾಡಿದ ವ್ಯಕ್ತಿಯ ಛಾಯಾಚಿತ್ರವನ್ನು ಕಳುಹಿಸಿದರು. ಅದರಿಂದ ಐಸಿಸ್‌ನೊಂದಿಗೆ ಶಾಂತಿ ಚರ್ಚೆ ಮಾಡುವ ನನ್ನ ಪ್ರಯತ್ನ ಯಶಸ್ವಿಯಾಗಲಿಲ್ಲ.
೨. ನನ್ನ ಅಭಿಪ್ರಾಯದಂತೆ ಐಸಿಸ್‌ಗೆ ಯಾವುದೇ ರೀತಿಯ ಶಾಂತಿಯ ಚರ್ಚೆ ಬೇಡವಾಗಿದೆ. ಆದ್ದರಿಂದ ಅದರ ವಿರುದ್ಧ ಕಠೋರವಾದ ಸೈನಿಕ ಕಾರ್ಯಾಚರಣೆ ಮಾಡಬೇಕಾಗುವುದು. (ಶ್ರೀ ಶ್ರೀ ರವಿಶಂಕರ ಇವರಿಗೂ ಐಸಿಸ್‌ಗೆ ಸೈನಿಕ ಕಾರ್ಯಾಚರಣೆಯ ಪಾಠ ಕಲಿಸಬೇಕೆಂದು ಅನಿಸುತ್ತದೆ; ಆದರೆ ಭಾರತದಲ್ಲಿ ಐಸಿಸ್‌ಗೆ ಸೇರಿಕೊಳ್ಳಲು ಪ್ರಯತ್ನಿಸುವವರ ವಿರುದ್ಧ ಕಾರ್ಯಾಚರಣೆ ಮಾಡುವ ಬದಲು ಅವರಿಗೆ ಬುದ್ಧಿವಾದ ಹೇಳಲಾಗುತ್ತದೆ. ಇದನ್ನೂ ಶ್ರೀ ಶ್ರೀ ರವಿಶಂಕರರು ಗಮನಿಸಬೇಕು ! - ಸಂಪಾದಕರು)
೩. ಸರ್ವಧರ್ಮ, ಸಂಸ್ಕೃತಿ ಹಾಗೂ ಭಿನ್ನಾಭಿಪ್ರಾಯಗಳು ಮತ್ತು ವಿಚಾರಧಾರೆಗಳನ್ನು ಒಂದು ದಾರದಲ್ಲಿ ಪೋಣಿಸುವ ಉದ್ದೇಶ ನನ್ನದಾಗಿದೆ. ಅದೇ ಭಾವನೆಯಿಂದ ಐಸಿಸ್‌ನೊಂದಿಗೆ ಶಾಂತಿ ಚರ್ಚೆ ಮಾಡಲು ಪ್ರಯತ್ನಿಸಿದೆ; ಆದರೆ ಈ ಪ್ರಯತ್ನಗಳಿಗೆ ದೊಡ್ಡ ಆಘಾತವಾಗಿದೆ. (ಜಗತ್ತಿನಾದ್ಯಂತ ಧರ್ಮ, ಸಂಸ್ಕೃತಿ ಮತ್ತು ಭಿನ್ನಾಭಿಪ್ರಾಯಗಳನ್ನು ಒಂದೇ ದಾರದಲ್ಲಿ ಪೋಣಿಸಲು ಹಿಂದೂಗಳ ಹಾಗೆಯೇ 'ವಸುದೈವ ಕುಟುಂಬಕಮ್' ಎಂಬ ಭಾವನೆಯು ಎಲ್ಲರಲ್ಲಿಯೂ ಇರುವುದು ಆವಶ್ಯಕವಾಗಿದೆ. - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶ್ರೀ ಶ್ರೀ ರವಿಶಂಕರ್ ಇವರ ಶಾಂತಿಚರ್ಚೆಯ ಪ್ರಸ್ತಾಪ ಧಿಕ್ಕರಿಸಿ ಶಿರಚ್ಛೇದನಗೊಂಡ ವ್ಯಕ್ತಿಯ ಛಾಯಾಚಿತ್ರ ಕಳುಹಿಸಿದ ಐಸಿಸ್ !