ಮೂಗಿನಲ್ಲಿ ಧರಿಸುವ ಆಭರಣಗಳು

ಮಹತ್ವ
೧. ‘ಮೂಗುತಿಯನ್ನು ಧರಿಸುವುದರಿಂದ ಜೀವದ ಪ್ರಕೃತಿ ಮತ್ತು ಪ್ರಯತ್ನಗಳಿಗನುಸಾರ ಅದರ ಅಹಂಭಾವವು ಕೆಲವು ಪ್ರಮಾಣದಲ್ಲಿ ಕಡಿಮೆಯಾಗಲು ಸಹಾಯವಾಗುತ್ತದೆ.
೨. ಮೂಗುತಿಯನ್ನು ಧರಿಸುವುದರಿಂದ ಜೀವದ ಅಂತರ್ಮುಖತೆಯು ಹೆಚ್ಚಾಗಿ ಸ್ವ-ಪರೀಕ್ಷೆಯನ್ನು ಮಾಡಿಕೊಳ್ಳುವ ಪ್ರಮಾಣವು ಹೆಚ್ಚಾಗುತ್ತದೆ.’ - ಶ್ರೀಕೃಷ್ಣ (ಸೌ. ಪ್ರಾರ್ಥನಾ ಬುವಾರವರು ಶ್ರೀಕೃಷ್ಣ ಈ ಅಂಕಿತನಾಮದಿಂದ ಬರೆಯುತ್ತಾರೆ.(೩.೦೨.೨೦೦೯))
ಮೂಗಿನ ಮುಖಾಂತರ ದೇಹದೊಳಗೆ ಪ್ರವೇಶಿಸುವ ಪ್ರಾಣವಾಯುವಿಗೆ ಮೂಗುತಿಯಲ್ಲಿರುವ ತೇಜವು ಸ್ಪರ್ಶವಾಗುವುದರಿಂದ ಸ್ತ್ರೀಯರ ದೇಹವು ಪಾವನವಾಗುತ್ತದೆ : ‘ಮೂಗುತಿಯ ಮಾವಿನಕಾಯಿಯಂತಹ ಆಕಾರವು ಬ್ರಹ್ಮಾಂಡದಲ್ಲಿನ ತೇಜದ ಶಕ್ತಿಸ್ವರೂಪ ಕ್ರಿಯಾಧಾರಣೆಗೆ ಸಂಬಂಧಿಸಿರುವುದರಿಂದ ಮೂಗಿನಿಂದ ದೇಹದೊಳಗೆ ಪ್ರವೇಶಿಸುವ ಪ್ರಾಣವಾಯುವಿಗೆ ಮೂಗುತಿಯ ತೇಜವು ಸ್ಪರ್ಶವಾಗಿ ಸ್ತ್ರೀಯರ ದೇಹವು ಪಾವನವಾಗುತ್ತದೆ.
ಇಂತಹ ಶುದ್ಧ ಸ್ತ್ರೀಯರು ತೇಜರೂಪೀ ಬಲವರ್ಧನೆಗೆ ಪೂರಕವಾಗಿರುತ್ತಾರೆ. ಆದುದರಿಂದ ಮೂಗುತಿಯನ್ನು ಧರಿಸಿದ ಸ್ತ್ರೀಯರು ತೇಜಸ್ವಿ ಮತ್ತು ಪವಿತ್ರವಾಗಿ ಕಾಣಿಸುತ್ತಾರೆ.’ - ಓರ್ವ ವಿದ್ವಾಂಸರು (ಪೂ. (ಸೌ.) ಅಂಜಲಿ ಗಾಡಗೀಳ ಇವರು ಓರ್ವ ವಿದ್ವಾಂಸರು ಈ ಅಂಕಿತನಾಮದಿಂದ ಬರೆಯುತ್ತಾರೆ. (೨೬.೪.೨೦೦೭))
ಈಶ್ವರನ ಲಹರಿಗಳು ಬಹಳಷ್ಟು ಪ್ರಮಾಣದಲ್ಲಿ ಮತ್ತು ಸಹಜವಾಗಿ ಗ್ರಹಿಸಲ್ಪಡುತ್ತವೆ : ‘ಮೂಗುತಿ ಧರಿಸುವುದರಿಂದ ಸ್ತ್ರೀಯರ ಚಂದ್ರನಾಡಿಯು ಕಾರ್ಯನಿರತವಾಗುತ್ತದೆ. ಇದರಿಂದ ಸ್ತ್ರೀಯರ ದೇಹವು ವಾತಾವರಣದಲ್ಲಿನ ಚೈತನ್ಯವನ್ನು ಗ್ರಹಿಸಲು ಹೆಚ್ಚು ಪೂರಕವಾಗಿ ಈಶ್ವರನ ಲಹರಿಗಳು ಬಹಳಷ್ಟು ಪ್ರಮಾಣದಲ್ಲಿ ಮತ್ತು ಸಹಜವಾಗಿ ಗ್ರಹಿಸಲ್ಪಡುತ್ತವೆ.’ - ಓರ್ವ ಜ್ಞಾನಿ (ಶ್ರೀ. ನಿಷಾದ ದೇಶಮುಖ ಇವರು ಓರ್ವ ಜ್ಞಾನಿ ಈ ಅಂಕಿತನಾಮದಿಂದ ಬರೆಯುತ್ತಾರೆ. (೧೬.೪.೨೦೦೭))

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮೂಗಿನಲ್ಲಿ ಧರಿಸುವ ಆಭರಣಗಳು