ಮಹಂತ ಯೋಗಿ ಆದಿತ್ಯನಾಥರನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಅಭ್ಯರ್ಥಿ ಮಾಡಿ !

ಭಾಜಪದ ಅಲ್ಪಸಂಖ್ಯಾತ ಮೋರ್ಚಾದ ಬೇಡಿಕೆ
ಯೋಗಿ ಆದಿತ್ಯನಾಥರಿಗಾಗಿ ದರ್ಗಾದಲ್ಲಿ ಚಾದರ್ ಹೊದಿಸಿದ ಕಾರ್ಯಕರ್ತರು !
ಗೋರಖಪುರ : ಭಾಜಪದ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯಕರ್ತರು ಇಲ್ಲಿನ ಭಾಜಪದ ಸಂಸದ ಮಹಂತ ಯೋಗಿ ಆದಿತ್ಯನಾಥರನ್ನು ಉತ್ತರ ಪ್ರದೇಶದಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಭಾಜಪದಿಂದ ಮುಖ್ಯಮಂತ್ರಿಯ ಅಭ್ಯರ್ಥಿಸ್ಥಾನಕ್ಕೆ ನೇಮಿಸಬೇಕೆಂದು ಸ್ಥಳೀಯ ಹಜರತ್ ಅಲಿ ಶಾಹ ನಕ್ಕೋಬಾಬಾ ದರ್ಗಾದಲ್ಲಿ ಚಾದರ್ ಹೊದಿಸಿದರು. ಈ ಸಂದರ್ಭದಲ್ಲಿ ಪ್ರದೇಶ ಕಾರ್ಯ ಸಮಿತಿಯ ಸದಸ್ಯ ಇರ್ಫಾನ್ ಅಹಮ್ಮದ ಸಹಿತ ಅಲ್ಪಸಂಖ್ಯಾತ ಮೋರ್ಚಾದ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅವರು ‘ಮುಸಲ್ಮಾನರಿಗೆ ಉತ್ತರಪ್ರದೇಶದಲ್ಲಿ ಅಭಿವೃದ್ಧಿ ಬೇಕಾಗಿದೆ ಹಾಗೂ ಕೇವಲ ಯೋಗಿ ಆದಿತ್ಯನಾಥರೇ ಅಭಿವೃದ್ಧಿ ಕಾರ್ಯ ಮಾಡಬಲ್ಲರು, ಎಂದರು. (ಪ್ರಖರ ಹಿಂದುತ್ವವಾದಿ ಯೋಗಿ ಆದಿತ್ಯನಾಥರು ರಾಜ್ಯದ ಮುಖ್ಯಮಂತ್ರಿ ಆಗಬೇಕೆಂದು ಮುಸಲ್ಮಾನರಿಗೆ ಅನಿಸುತ್ತದೆ. ಇದರಿಂದ ಮತ ಕ್ಕಾಗಿ ಮುಸಲ್ಮಾನರನ್ನು ಓಲೈಸಿ ಹಿಂದೂಗಳನ್ನು ಹತ್ತಿಕ್ಕುವ ನೇತಾರರು ಪಾಠ ಕಲಿಯಬೇಕು ! - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮಹಂತ ಯೋಗಿ ಆದಿತ್ಯನಾಥರನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಅಭ್ಯರ್ಥಿ ಮಾಡಿ !