ಸ್ತ್ರೀಯರು ದಿನನಿತ್ಯ ಧರಿಸುವ ಆಭರಣಗಳಿಂದಾಗುವ ಲಾಭಗಳು

ಬಳೆಗಳು (ಕಂಕಣಗಳು)
ಬಳೆಗಳನ್ನು ಕುಮಾರಿಯರ ಹಾಗೂ ಮುತ್ತೈದೆ ಸ್ತ್ರೀಯರ ಮಹತ್ವದ ಅಲಂಕಾರಗಳೆಂದು ತಿಳಿದುಕೊಳ್ಳಲಾಗುತ್ತದೆ. ವಿಧವಾ ಸ್ತ್ರೀಯರು ಬಳೆಗಳನ್ನು ಧರಿಸುವುದು ನಿಷಿದ್ಧವಾಗಿದೆ. ವಿವಿಧ ಲೋಹ, ಗಾಜು, ಶಂಖ, ಆರಗು ಮತ್ತು ಆನೆಯ ದಂತಗಳಿಂದ ಬಳೆಗಳನ್ನು ತಯಾರಿಸುವುದು ನಮ್ಮ ಪ್ರಾಚೀನ ಪದ್ಧತಿಯಾಗಿದೆ. ಪಂಜಾಬಿನಲ್ಲಿ ಆನೆದಂತದ ಮತ್ತು ಬಂಗಾಲದಲ್ಲಿ ಶಂಖದಿಂದ ತಯಾರಿಸಿದ ಬಳೆಗಳಿಗೆ ವಿಶೇಷ ಮಹತ್ವವಿದೆ.
ಮಹತ್ವ
೧. ‘ಹಸಿರು ಬಳೆಗಳನ್ನು ಧರಿಸುವುದು ಮುತ್ತೈದೆಯರ ಪಾತಿವ್ರತ್ಯದ ಪ್ರಕಟ ಶಕ್ತಿರೂಪದ ಅಲಂಕಾರ ಸಹಿತ ಪೂಜೆಯನ್ನು ಮಾಡುವುದರ ಪ್ರತೀಕವಾಗಿದೆ’. - ಓರ್ವ ವಿದ್ವಾಂಸ (ಪೂ. (ಸೌ.) ಅಂಜಲಿ ಗಾಡಗೀಳ ಇವರು ಓರ್ವ ವಿದ್ವಾಂಸ ಅಂಕಿತನಾಮದಿಂದ ಬರೆಯುತ್ತಾರೆ. (೬.೮.೨೦೦೬))
೨. ಬಳೆಗಳಲ್ಲಿ ಕಾರ್ಯನಿರತ ದೇವಿತತ್ತ್ವದ ಶಕ್ತಿಲಹರಿಗಳು ಮಣಿಕಟ್ಟಿನೆಡೆಗೆ ಆಕರ್ಷಿಸಿ, ಸಂಪೂರ್ಣ ಕೈಯಲ್ಲಿ ಪಸರಿಸುವುದರಿಂದ ಕೈಗಳಿಗೆ ಕಾರ್ಯವನ್ನು ಮಾಡಲು ಶಕ್ತಿಯು ಸಿಗುತ್ತದೆ. - ಈಶ್ವರ (ಕು. ಮಧುರಾ ಭೋಸಲೆ ಯವರು ಈಶ್ವರ ಈ ಅಂಕಿತನಾಮದಿಂದ ಬರೆಯುತ್ತಾರೆ.)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸ್ತ್ರೀಯರು ದಿನನಿತ್ಯ ಧರಿಸುವ ಆಭರಣಗಳಿಂದಾಗುವ ಲಾಭಗಳು