ಮಾನಸನ್ಮಾನದಂತಹ ಸಣ್ಣ ಸ್ವಾರ್ಥಕ್ಕೋಸ್ಕರ ‘ಹಿಂದೂ ರಾಷ್ಟ್ರಸ್ಥಾಪನೆ’ ಯಂತಹ ದೊಡ್ಡ ಧ್ಯೇಯವನ್ನು ಮರೆಯುವ ಹಿಂದುತ್ವವಾದಿಗಳು !

ಧರ್ಮಪ್ರೇಮಿ ಹಿಂದೂಗಳು ವಿವಿಧ ಸಂಘಟನೆಗಳ ಮೂಲಕ ಒಂದಾಗುತ್ತಾರೆ. ಅದರಲ್ಲಿನ ಯಾವುದೋ ಒಂದು ಸಂಘಟನೆಯು ದೊಡ್ಡದಾಗುತ್ತಿದ್ದರೆ, ಆ ಸಂಘಟನೆಯ ಕಾರ್ಯಕರ್ತರಲ್ಲಿ ವ್ಯಕ್ತಿಗತ ಮಹತ್ವಾಕಾಂಕ್ಷೆಗಳು ಜಾಗೃತಗೊಂಡು ಸಂಘಟನೆಯಲ್ಲಿ ಹುದ್ದೆ, ಮಾನ ಸನ್ಮಾನ, ಅಧಿಕಾರ ಮುಂತಾದ ಅಂಶಗಳಿಂದ ಒಳಪಂಗಡ ಗಳು ನಿರ್ಮಾಣವಾಗುತ್ತವೆ.
ಕೆಲವೊಮ್ಮೆ ಈ ಹುದ್ದೆ, ಮಾನಸನ್ಮಾನ, ಅಧಿಕಾರಗಳಿಂದ ಆ ಸದಸ್ಯರಿಗೂ ವ್ಯಕ್ತಿಗತ ಮಟ್ಟದಲ್ಲಿ ಯಾವುದೇ ಲಾಭ ಇರುವುದಿಲ್ಲ. ಆದರೆ ಕೇವಲ ಅಹಂಕಾರದಿಂದಾಗಿ ಅದಕ್ಕೆ ಅಂಟಿಕೊಂಡಿದ್ದರಿಂದ ನಿರ್ಧರಿತ ಕಾರ್ಯವೂ ಆಗುವುದಿಲ್ಲ ಅಥವಾ ಸಂಘಟನೆಯಲ್ಲಿ ಒಡಕುಂಟಾಗುವ ಮಟ್ಟಿಗೆ ಪರಿಸ್ಥಿತಿಯು ಉದ್ಭವಿಸು ತ್ತದೆ. ವಾಸ್ತವದಲ್ಲಿ ಪ್ರತಿಯೊಂದು ಹಿಂದುತ್ವನಿಷ್ಠ ಸಂಘಟನೆಗಳ ಸರ್ವೋಚ್ಚ ಧ್ಯೇಯವು ‘ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸು ವುದೇ ಇರುತ್ತದೆ; ಆದರೆ ಕೇವಲ ಅಹಂಕಾರದಿಂದಾಗಿ ನಿರ್ಮಾಣವಾದ ಹುದ್ದೆ, ಮಾನಸನ್ಮಾನ, ಅಧಿಕಾರ ಇತ್ಯಾದಿ ವಿಚಾರಗಳಿಂದ ಅವರು ಸರ್ವೋಚ್ಚ ಧ್ಯೇಯವನ್ನು ಮರೆಯುತ್ತಾರೆ. ಹಿಂದುತ್ವವಾದಿಗಳ ವಿಶಾಲ ಸಂಘಟನೆಯ ನಿರ್ಮಿಸಬೇಕಿದ್ದರೆ ಅವರು ಮೊದಲಿಗೆ ಇಂತಹ ಸಣ್ಣ ಸಣ್ಣ ಸ್ವಾರ್ಥಗಳ ತ್ಯಾಗ ಮಾಡಬೇಕಾಗುತ್ತದೆ. ಈ ತ್ಯಾಗವನ್ನು ಪ್ರತಿ ಯೊಬ್ಬ ಹಿಂದುತ್ವವಾದಿಯು ಮಾಡಿದರೆ, ಹಿಂದೂ ರಾಷ್ಟ್ರದ ಸ್ಥಾಪನೆ ಯಾಗಲು ವಿಳಂಬವಾಗಲಾರದು. - (ಪರಾತ್ಪರ ಗುರು) ಡಾ. ಆಠವಲೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮಾನಸನ್ಮಾನದಂತಹ ಸಣ್ಣ ಸ್ವಾರ್ಥಕ್ಕೋಸ್ಕರ ‘ಹಿಂದೂ ರಾಷ್ಟ್ರಸ್ಥಾಪನೆ’ ಯಂತಹ ದೊಡ್ಡ ಧ್ಯೇಯವನ್ನು ಮರೆಯುವ ಹಿಂದುತ್ವವಾದಿಗಳು !