ಪುಣ್ಯಶ್ಲೋಕ ಅಹಲ್ಯಾಬಾಯಿ ಹೋಳಕರ ಸ್ಮೃತಿದಿನ

ಶ್ರಾವಣ ಕೃಷ್ಣ ಪಕ್ಷ ಚತುರ್ದಶಿ (೩೧..೨೦೧೬)
 

ಈ ನಿಮಿತ್ತ ಇವರಿಗೆ ಕೋಟಿ ಕೋಟಿ ನಮನಗಳು

ಸನಾತನದ ಧರ್ಮಕಾರ್ಯದ ರಜತ ಮಹೋತ್ಸವದ ನಿಮಿತ್ತ ಪರಾತ್ಪರ ಗುರು ಡಾ. ಆಠವಲೆಯವರ ಸಂದೇಶ

.ಪೂ. ಭಕ್ತರಾಜ ಮಹಾರಾಜರ ಆಶೀರ್ವಾದದಿಂದ
ಸನಾತನದ ಸ್ಥಾಪನೆಯ ಹಿಂದಿನ ಉದ್ದೇಶವು ಸಫಲವಾಗುವುದು !
೧೯೯೧ ರಲ್ಲಿ ಪ.ಪೂ. ಭಕ್ತರಾಜ ಮಹಾರಾಜರ ಆಶೀರ್ವಾದದಿಂದ ಆರಂಭವಾದ ಸನಾತನದ ಬೀಜರೂಪಿ ಕಾರ್ಯವು ಇಂದು ವಟವೃಕ್ಷವಾಗಿ ರೂಪಾಂತರಗೊಂಡಿದೆ. ಅಧ್ಯಾತ್ಮದ ಪ್ರಸಾರ ಮಾಡುವುದು, ಸನಾತನದ ಸ್ಥಾಪನೆಯ ಹಿಂದಿನ ಉದ್ದೇಶವಾಗಿತ್ತು. ಇಂದು ಧರ್ಮಶಿಕ್ಷಣ ನೀಡುವ ಸತ್ಸಂಗ, ಧ್ವನಿಚಿತ್ರ-ಮುದ್ರಿಕೆಗಳು, ಫಲಕ ಪ್ರದರ್ಶನ ಮತ್ತು ಜಾಲತಾಣಗಳ ಮೂಲಕ ನಡೆಯುತ್ತಿರುವ ಅಧ್ಯಾತ್ಮ ಪ್ರಸಾರ, ಅಧ್ಯಾತ್ಮಕ್ಕೆ ಸಂಬಂಧಿತ ೨೯೦ ಗ್ರಂಥಗಳ ನಿರ್ಮಿತಿ ಮತ್ತು ೧೫ ಭಾಷೆಗಳಲ್ಲಿ ಅದರ ಪ್ರಕಾಶನ, ಸಾಧಕ-ಪುರೋಹಿತ ಪಾಠಶಾಲೆಯ ಮೂಲಕ ನಡೆಯುತ್ತಿರುವ ಸಾತ್ತ್ವಿಕ ಪುರೋಹಿತರ ನಿರ್ಮಾಣ, ಅದೇ ರೀತಿ ದೇಶ-ವಿದೇಶಗಳಲ್ಲಿ ೧೫ ಸಾವಿರಕ್ಕಿಂತಲೂ ಅಧಿಕ ಸಾಧಕರು ಅಧ್ಯಾತ್ಮದ ಸಿದ್ಧಾಂತ ಕಲಿತು ಸಾಧನೆ ಮಾಡುವುದು, ಇದು ಈ ಕಾರ್ಯದ ದೃಶ್ಯಸ್ವರೂಪವಾಗಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ


 
ಸನಾತನ ಸಂಸ್ಥೆಯ ಅನೇಕ ಸಾಧಕರು ಎಲ್ಲ ಘಟನೆಗಳತ್ತ ಸಾಕ್ಷಿಭಾವ ದಿಂದ ಅಥವಾ ಎಲ್ಲವೂ ಈಶ್ವರೇಚ್ಛೆ ಯಿಂದ ಘಟಿಸುತ್ತದೆ, ಈ ದೃಷ್ಟಿಯಿಂದ ನೋಡುತ್ತಾರೆ. ಹಾಗಾಗಿ ಸನಾತನ ಸಂಸ್ಥೆಯ ಮೇಲೆ ನಿರ್ಬಂಧ ಬಂದರೂ ಅವರಿಗೆ ದುಃಖವಾಗುವುದಿಲ್ಲ.
- (ಪರಾತ್ಪರ ಗುರು) ಡಾ. ಆಠವಲೆ

ಸನಾತನದ ಶ್ರದ್ಧಾಸ್ಥಾನ ಪ.ಪೂ. ಭಕ್ತರಾಜ ಮಹಾರಾಜರ ಚರಣಗಳಿಗೆ ವಂದನೆ !

. ೧೯೯೨ ರಿಂದ ೧೯೯೫
.ಪೂ. ಭಕ್ತರಾಜ ಮಹಾರಾಜರಿಗೆ
ವಂದಿಸುತ್ತಿರುವ ಪರಾತ್ಪರ ಗುರು ಡಾ. ಆಠವಲೆ
.ಪೂ. ಭಕ್ತರಾಜ ಮಹಾರಾಜರು (.ಪೂ. ಬಾಬಾರವರು) ಡಾಕ್ಟರರಿಗೆ ಧರ್ಮಪ್ರಸಾರ ಮಾಡಲು ಹೇಳುವುದು.
೧ ಅ. ೧೯೯೨ : .ಪೂ. ಬಾಬಾರವರು ನನಗೆ ‘ಈಗ ಮಹಾರಾಷ್ಟ್ರದಾದ್ಯಂತ ಧರ್ಮಪ್ರಸಾರ ಮಾಡಿರಿ’ ಎಂದು ಹೇಳಿದರು.

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಪರಿಚಯ

. ಅಂತರರಾಷ್ಟ್ರೀಯ ಖ್ಯಾತಿಯ ಸಮ್ಮೋಹನೋಪಚಾರತಜ್ಞರು
.ಪೂ. ಡಾ. ಆಠವಲೆಯವರು ವೈದ್ಯಕೀಯ ಶಿಕ್ಷಣದ ನಂತರ ೧೯೭೧ ರಿಂದ ೧೯೭೮ರ ವರೆಗೆ ಬ್ರಿಟನ್‌ನಲ್ಲಿ ಉಚ್ಚ ಶಿಕ್ಷಣವನ್ನು ಪಡೆದು ಸಮ್ಮೋಹನ ಉಪಚಾರಪದ್ಧತಿಯ ಸಂಶೋಧನೆ ಮಾಡಿದರು. ೧೯೬೭ ರಿಂದ ೧೯೮೨ ರ ವರೆಗೆ ಒಟ್ಟು ೧೫ ವರ್ಷಗಳಲ್ಲಿ ಅವರು ೫೦೦ ಕ್ಕಿಂತಲೂ ಹೆಚ್ಚು ಡಾಕ್ಟರರಿಗೆ ಸಮ್ಮೋಹನಶಾಸ್ತ್ರ ಮತ್ತು ಸಮ್ಮೋಹನೋಪಚಾರ ಇವು ಗಳ ಸಿದ್ಧಾಂತ ಮತ್ತು ಪ್ರಾತ್ಯಕ್ಷಿಕೆಗಳ ಬಗ್ಗೆ ಅಮೂಲ್ಯ ಮಾರ್ಗದರ್ಶನ ಮಾಡಿದರು.
. ಸಮ್ಮೋಹನೋಪಚಾರದಲ್ಲಿನ ನಾವೀನ್ಯಪೂರ್ಣ ಸಂಶೋಧನೆ
.ಪೂ. ಡಾ. ಆಠವಲೆಯವರು ‘ಅಯೋಗ್ಯ ಕೃತಿಯ ಅರಿವು ಮತ್ತು ಅದರ ಮೇಲೆ ನಿಯಂತ್ರಣ’, ‘ಅಯೋಗ್ಯ ಪ್ರತಿಕ್ರಿಯೆಗಳ ಬದಲು ಯೋಗ್ಯ ಪ್ರತಿಕ್ರಿಯೆ ನಿರ್ಮಾಣ ಮಾಡುವುದು’, ‘ಮನಸ್ಸಿನಲ್ಲಿ ಪ್ರಸಂಗಗಳ ಪೂರ್ವಾಭ್ಯಾಸ ಮಾಡುವುದು’ ಇತ್ಯಾದಿ ಸಮ್ಮೋಹನೋಪಚಾರಗಳ ಹೊಸ ಪದ್ಧತಿಯನ್ನು ನಿರ್ಮಿಸಿದರು. ಅವರು ‘ಇಯೋಸಿನೊಫಿಲಿಯಾ’ ಎಂಬ ರೋಗವು ಮಾನಸಿಕ ಒತ್ತಡದಿಂದಲೂ ಬರುತ್ತದೆ ಎಂದು ಸಂಶೋಧಿಸಿದರು.

ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರ ಪ್ರಗತಿಯು ವಿಹಂಗಮ ವೇಗದಲ್ಲಿ ಆಗಲೆಂದು ನಿರ್ಮಿಸಿದ ‘ಗುರುಕೃಪಾಯೋಗ’ !


. ಗುರುಕೃಪಾಯೋಗದ ಉಗಮ
ಪೂ. (ಡಾ.) ವಸಂತ ಬಾಳಾಜಿ ಆಠವಲೆ
ಕೃಪ್’ ಎಂಬ ಧಾತುವಿನಿಂದ ‘ಕೃಪಾ’ ಎಂಬ ಶಬ್ದವು ಬಂದಿದೆ. ‘ಕೃಪ್’ ಅಂದರೆ ದಯೆ ತೋರಿಸುವುದು ಹಾಗೂ ಕೃಪಾ ಎಂದರೆ ದಯೆ, ಕರುಣೆ, ಅನುಗ್ರಹ ಅಥವಾ ಪ್ರಸಾದ. ಗುರುಕೃಪೆಯ ಮಾಧ್ಯಮದಿಂದ ಜೀವವು ಶಿವನೊಂದಿಗೆ ಸೇರುತ್ತದೆ, ಇದನ್ನೇ ‘ಗುರುಕೃಪಾಯೋಗ’ ಎಂದು ಹೇಳುತ್ತಾರೆ. ಅಧ್ಯಾತ್ಮದಲ್ಲಿ ಈಶ್ವರ ಪ್ರಾಪ್ತಿಗಾಗಿ, ಅಂದರೆ ಮೋಕ್ಷಪ್ರಾಪ್ತಿಗಾಗಿ ಕರ್ಮಯೋಗ, ಜ್ಞಾನಯೋಗ, ಭಕ್ತಿಯೋಗ, ಧ್ಯಾನಯೋಗ, ಹಠ ಯೋಗ ಇತ್ಯಾದಿ ಹೀಗೆ ಹಲವಾರು ಯೋಗಮಾರ್ಗಗಳು, ಅಂದರೆ ಸಾಧನಾಮಾರ್ಗಗಳು ಲಭ್ಯವಿರುವಾಗ ಎಲ್ಲ ಮಾರ್ಗಗಳಿಗಿಂತಲೂ ಶೀಘ್ರಗತಿಯಲ್ಲಿ ಸಾಧಕರ ಪ್ರಗತಿಯಾಗಲೆಂದು ಪರಾತ್ಪರ ಗುರು ಡಾ. ಆಠವಲೆಯವರು ತಮ್ಮದೇ ಅನುಭವದಲ್ಲಿ ‘ಗುರುಕೃಪಾಯೋಗ’ವನ್ನು ನಿರ್ಮಿಸಿದರು.

ಸನಾತನವು ಪ್ರಾರಂಭಿಸಿದ ರಾಷ್ಟ್ರಹಿತದ ಕಾರ್ಯಕ್ರಮಗಳು

ಸದ್ಗುರು (ಕು.) ಅನುರಾಧಾ ವಾಡೇಕರ
ಸನಾತನವು ೧೦-೧೫ ವರ್ಷಗಳ ಹಿಂದೆಯೇ ದೂರದೃಷ್ಟಿಯಿಂದ ಸ್ವಸಂರಕ್ಷಣಾ ತರಬೇತಿ, ಪ್ರಥಮೋಪಚಾರ ತರಬೇತಿ, ಆಪತ್ಕಾಲೀನ ಸಹಾಯದ ತರಬೇತಿವರ್ಗ ಹಾಗೂ ಅಗ್ನಿಶಾಮಕ ತರಬೇತಿವರ್ಗ ಮುಂತಾದ ರಾಷ್ಟ್ರಹಿತ ಕಾರ್ಯಕ್ರಮಗಳನ್ನು ಆರಂಭಿಸಿದೆ. ಈ ವಿಷಯದಲ್ಲಿ ಸನಾತನದ ವತಿಯಿಂದ ವಿವಿಧ ಗ್ರಂಥಗಳು ಸಹ ಪ್ರಕಾಶಿತಗೊಂಡಿವೆ. ಈಗಲೂ ಸನಾತನದ ಸಾಧಕರು ಇತರ ಸಂಘಟನೆಗಳ ವತಿಯಿಂದ ನಡೆಸುವ ವಿವಿಧ ರಾಷ್ಟ್ರಹಿತದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ.
ಸಂಕಲನ : ಸದ್ಗುರು (ಕು.) ಅನುರಾಧಾ ವಾಡೇಕರ, ಪ್ರಚಾರಸೇವಕರು, ಸನಾತನ ಸಂಸ್ಥೆ

ಸನಾತನವು ಅಲ್ಪಾವಧಿಯಲ್ಲಿ ವ್ಯಾಪಕವಾಗಿರುವ ಹಿಂದಿನ ಕಾರಣಕರ್ತರು : ಪರಾತ್ಪರ ಗುರು ಡಾ. ಆಠವಲೆ !

ಶ್ರೀ. ಭೂಷಣ ಕೇರಕರ
ಯಾವುದೇ ಸಂಸ್ಥೆಯು ಬೆಳೆಯುವುದರ ಹಿಂದೆ ಕೆಲವು ವೈಶಿಷ್ಟ್ಯಗಳಿರುತ್ತವೆ. ಬಹುತೇಕ ಸಂದರ್ಭದಲ್ಲಿ ಈ ವೈಶಿಷ್ಟ್ಯ ಗಳು ಮಾನಸಿಕ ಮತ್ತು ವ್ಯವಹಾರಿಕ ಮಟ್ಟದ್ದಾಗಿರುತ್ತವೆ. ಸನಾತನ ಸಂಸ್ಥೆಯು ಅಲ್ಪಾವಧಿಯಲ್ಲಿ ವಿಶ್ವವ್ಯಾಪಿ
ಯಾಗುವ ಹಿಂದೆಯೂ ಕೆಲವು ವೈಶಿಷ್ಟ್ಯಗಳಿವೆ. ಆದರೆ ಈ ವೈಶಿಷ್ಟ್ಯಗಳು ಆಧ್ಯಾತ್ಮಿಕ ಮಟ್ಟದ್ದಾಗಿರುತ್ತವೆ. ಪ್ರೀತಿ (ಎಲ್ಲರೊಂದಿಗೆ ನಿರಪೇಕ್ಷ ಪ್ರೇಮ), ಯಾವುದೇ ಅಪೇಕ್ಷೆಯಿಲ್ಲದೇ ನಿರಂತರವಾಗಿ ಕಾರ್ಯನಿರತವಾಗಿರುವುದು, ತನ್ನ ಗುಣ-ದೋಷಗಳನ್ನು ಆತ್ಮನಿರೀಕ್ಷಣೆ ಮಾಡಿಕೊಳ್ಳುವುದು, ಯಾವುದೇ ಆಪತ್ತು ಎದುರಾದರೂ ಈಶ್ವರನ ಮೇಲಿನ ಶ್ರದ್ಧೆಯು ದೃಢವಾಗಿರುವುದು ಹಾಗೂ ವ್ಯಾಪಕತೆ ಇವುಗಳು ಅವುಗಳಲ್ಲಿನ ಆಯ್ದ ಕೆಲವು ವೈಶಿಷ್ಟ್ಯಗಳಾಗಿವೆ. ಸನಾತನದ ವಿಚಾರಧಾರೆಯನ್ನು ಸಂಪೂರ್ಣ ಒಪ್ಪಿಕೊಳ್ಳುವ ಸಾವಿರಾರು ಸಾಧಕರಿಂದ ಈ ವೈಶಿಷ್ಟ್ಯವನ್ನು ಸ್ವಲ್ಪ ಪ್ರಮಾಣದಲ್ಲಿಯಾದರೂ ಅನುಭವಿಸಬಹುದಾಗಿದೆ. ಅಧ್ಯಾತ್ಮದಲ್ಲಿ ‘ಪಿಂಡದಿಂದ ಬ್ರಹ್ಮಾಂಡ’ ಈ ತತ್ತ್ವವಿದೆ. ಸನಾತನದ ಸಾಧಕರಲ್ಲಿಯೂ ಈ ದೈವೀ ವೈಶಿಷ್ಟ್ಯಗಳಿವೆ.

ಎಲ್ಲ ದೃಷ್ಟಿಗಳಿಂದಲೂ ಆದರ್ಶವಾಗಿರುವ ಸನಾತನದ ಆಶ್ರಮಗಳ ವೈಶಿಷ್ಟ್ಯಗಳು !

ಸದ್ಗುರು (ಸೌ.) ಬಿಂದಾ ಸಿಂಗಬಾಳ
ಇಂದು ಹಲವಾರು ಸಂತರ ಆಶ್ರಮಗಳು ಶಿಷ್ಯವರ್ಗಕ್ಕೆ ದಿಕ್ಕು ತೋರಿಸುತ್ತಿದ್ದರೂ ರಾಷ್ಟ್ರ ಮತ್ತು ಧರ್ಮಕ್ಕಾಗಿ ಕಾರ್ಯ ಮಾಡುವ ಆಶ್ರಮಗಳು ದುರ್ಲಭ. ಪರಾತ್ಪರ ಗುರು ಡಾ. ಆಠವಲೆಯವರು ನಿರ್ಮಿಸಿ
ರುವ ಆಶ್ರಮಗಳು ಕೇವಲ ಕಲ್ಲು-ಇಟ್ಟಿಗೆಗಳಿಂದ ನಿರ್ಮಿಸಲ್ಪಟ್ಟ ವಾಸ್ತು ವಾಗಿರದೇ, ಸಾಧನೆಯ ಪರಿಪೂರ್ಣ ಪಾಠವನ್ನು ಕಲಿಸುವ ಹಾಗೂ ಕಣಕಣದಲ್ಲಿಯೂ ಈಶ್ವರನ ಅಸ್ತಿತ್ವದ ಅನುಭೂತಿ ಯನ್ನು ಕೊಡುವ ಆಶ್ರಮಗಳಾಗಿವೆ. ರಾಮನಾಥಿ (ಗೋವಾ)ಯಲ್ಲಿರುವ ಸನಾತನದ ಆಶ್ರಮವೆಂದರೆ ಹಿಂದೂ ರಾಷ್ಟ್ರದ ಚಿಕ್ಕ ಪ್ರತಿಕೃತಿಯೇ ಆಗಿದೆ. ಸನಾತನದ ಆಶ್ರಮಗಳು ಎಲ್ಲ ದೃಷ್ಟಿಯಿಂದಲೂ ಏಕೆ ಆದರ್ಶವಾಗಿವೆ ಎಂಬುದರ ತುಣುಕನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಸಂಕಲನಕಾರರು : ಸದ್ಗುರು (ಸೌ.) ಬಿಂದಾ ಸಿಂಗಬಾಳ

ಸನಾತನದ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯದ ವಿವಿಧ ಅಂಗಗಳನ್ನು ತೋರಿಸುವ ಕ್ಷಣಗಳು


ಸನಾತನಕ್ಕೆ ಶ್ರೀಗುರುಗಳ ಆಶೀರ್ವಾದ : .ಪೂ. ಭಕ್ತರಾಜ ಮಹಾರಾಜರಿಗೆ ಫಲಕವನ್ನು
ತೋರಿಸುತ್ತಿರುವ ಪರಾತ್ಪರ ಗುರು ಡಾ. ಆಠವಲೆ (ವರ್ಷ ೧೯೯೩)

ವಿಶೇಷ ಸಂಪಾದಕೀಯ

ಸನಾತನ ಮತ್ತು ಸನಾತನ ಪ್ರಭಾತ !  
೧೯೯೮ ರ ಜಾತ್ಯತೀತ ವಾತಾವರಣದಲ್ಲಿ ಹಿಂದೂವಿರೋಧವು ಹೆಚ್ಚಾಗಿ ಹಿಂದುತ್ವವು ಇಕ್ಕಟ್ಟಿನಲ್ಲಿ ಸಿಲುಕಿತ್ತು. ಆಗ ಕೇವಲ ಹಿಂದುತ್ವನಿಷ್ಠ ವಿಚಾರ ಗಳ ನಿಯತಕಾಲಿಕೆಯನ್ನು ಆರಂಭಿಸುವುದು, ಅದನ್ನು ನಿಯಮಿತವಾಗಿ ಯಶಸ್ವಿಯಾಗಿ ಹಾಗೂ ಧ್ಯೇಯನಿಷ್ಠೆಯಿಂದ ನಡೆಸುವುದು ಒಂದು ಸವಾಲೇ ಆಗಿತ್ತು. ಈಗ ಎಲ್ಲೆಡೆ ದೊಡ್ಡ ಪ್ರಮಾಣದಲ್ಲಿ ಹಿಂದುತ್ವದ ಚರ್ಚೆ ನಡೆಯುತ್ತಿದೆ, ಅನೇಕ ಸಂಘಟನೆಗಳ ವ್ಯಾಸಪೀಠದಿಂದ ಹಿಂದೂ ರಾಷ್ಟ್ರದ ಬೇಡಿಕೆಯನ್ನು ಮಾಡಲಾಗುತ್ತದೆ; ಆದರೆ ೧೯೯೮ ರಲ್ಲಿಯೇ ಪ್ರಸ್ತುತ ಪ್ರಜಾಪ್ರಭುತ್ವದ ಪರಾಜಯವನ್ನು ಸಮಾಜದ ಮುಂದಿಟ್ಟು ಈಶ್ವರೀ ರಾಜ್ಯದ ಸ್ಥಾಪನೆಯ ಅಂದರೆ ಆದರ್ಶ ರಾಜ್ಯದ ಧ್ಯೇಯವನ್ನು ಸಮಾಜದ ಮುಂದಿಡುವಂತಹ ಶಿವಧನುಷ್ಯವನ್ನು ಎತ್ತುವುದು ಕಠಿಣವಾಗಿತ್ತು.

ನಾನು... ಸನಾತನದ ಗ್ರಂಥವಿಶ್ವ... ಪರಾತ್ಪರ ಗುರು ಡಾ. ಆಠವಲೆಯವರ ಧರ್ಮದೂತ !

ಪೂ. ಸಂದೀಪ ಆಳಶಿ
ಶಿವನ ಜಟೆಯಿಂದ ಹೇಗೆ ಗಂಗಾ ಮಾತೆಯು ಪೃಥ್ವಿಯನ್ನು ಪಾವನಗೊಳಿಸಲು ಅವತರಿಸಿದಳೋ, ಹಾಗೆಯೇ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಪ್ರೇರಣೆಯಿಂದ ಅಖಿಲ ಮನುಕುಲವನ್ನು ಉದ್ಧರಿಸಲು ಸನಾತನದ ಗ್ರಂಥಗಳ ಮಾಧ್ಯಮದಿಂದ ಜ್ಞಾನಗಂಗೆಯು ಅವತರಿಸಿದ್ದಾಳೆ ! ಅಧ್ಯಾತ್ಮಶಾಸ್ತ್ರ, ಸಾಧನೆ, ಆಚಾರಧರ್ಮ, ಧರ್ಮಜಾಗೃತಿ, ರಾಷ್ಟ್ರರಕ್ಷಣೆ, ಬಾಲಸಂಸ್ಕಾರ, ಆಯುರ್ವೇದ, ಸ್ವಭಾಷಾ, ಮುಂಬರುವ ಆಪತ್ಕಾಲದ ಸಂಜೀವನಿಯಾಗಲಿರುವ ಬಿಂದುಒತ್ತಡ ಮುಂತಾದ ಉಪಚಾರ ಪದ್ಧತಿಗಳ ವಿಷಯಗಳ ಬಗ್ಗೆ ೨೯೩ ಗ್ರಂಥಗಳು ೧೫ ಭಾಷೆಗಳಲ್ಲಿ ಸುಮಾರು ೬೬,೨೯,೦೦೦ ಪ್ರತಿಗಳು ಜುಲೈ ೨೦೧೬ ರವರೆಗೆ ಮುದ್ರಣಗೊಂಡಿದೆ. ಸನಾತನದ ರಜತ ಮಹೋತ್ಸದ ನಿಮಿತ್ತ ಸನಾತನದ ಗ್ರಂಥಸಂಪತ್ತಿನ ಅದ್ವಿತೀಯತೆಯನ್ನು ಪ್ರದರ್ಶಿಸುವ ಲೇಖನ...
ಶಬ್ದಗಳ ಆಕರ : ಸನಾತನದ ೧೧ ನೇ ಸಂತರಾಗಿರುವ 
(ಪೂ.) ಶ್ರೀ. ಸಂದೀಪ ಆಳಶಿ, ಸನಾತನದ ಗ್ರಂಥಗಳ ಪ್ರಮುಖ ಸಂಕಲನಕಾರರು

ಸತ್ಯನಿಷ್ಠ ಕಾರ್ಯದಿಂದಾಗಿ ಲಕ್ಷಗಟ್ಟಲೆ ವರ್ಷಗಳ ಹಿಂದಿನ ಮಹರ್ಷಿಗಳ ನಾಡಿಪಟ್ಟಿಯಲ್ಲಿ ಗೌರವಿಸಲ್ಪಟ್ಟಿರುವ ಸನಾತನ ಸಂಸ್ಥೆ !

.‘ಸತ್ಯಮೇವ ಜಯತೇ ’, ಈ ವಚನವನ್ನು ಸಾರ್ಥಕಗೊಳಿಸುವ ಸನಾತನ ಸಂಸ್ಥೆ !
ಮಹರ್ಷಿಗಳು ಸಹ ಸನಾತನ ಸಂಸ್ಥೆಯನ್ನು ವರ್ಣಿಸುವಾಗ, ‘ಸತ್ಯವನ್ನು ಆಧರಿಸಿ ಕಾರ್ಯವನ್ನು ಕೈಗೊಳ್ಳುತ್ತಿರುವ ಸಂಸ್ಥೆ ಇದೊಂದೇ ಆಗಿದೆ. ‘ಸತ್ಯಮೇವ ಜಯತೇ ’ ಎನ್ನುವ ವಚನದಂತೆ ಕೊನೆಗೆ ವಿಜಯವು ಪ.ಪೂ. ಡಾಕ್ಟರರಿಗೆ ದೊರೆಯಲಿದೆ ಮತ್ತು ಯೋಗಾಯೋಗವೆಂದರೆ ಅವರ ಹೆಸರಲ್ಲಿಯೂ ‘ಜಯ’ಎಂದಿದೆ, ಎಂದು ತಿಳಿಸಿದ್ದಾರೆ. (.ಪೂ. ಡಾಕ್ಟರರ ಹೆಸರು ‘ಜಯಂತ’ ಎಂದಿದೆ. - ಸಂಕಲನಕಾರರು)

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಸನಾತನವು ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಆಧ್ಯಾತ್ಮಿಕ ಸಂಶೋಧನೆ


ಸದ್ಗುರು (ಸೌ.) ಅಂಜಲಿ ಗಾಡಗೀಳ
೧೯೯೦ ರಿಂದ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಸನಾತನದ ವತಿಯಿಂದ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸಂಶೋಧನೆಯನ್ನು ಮಾಡಲಾಗುತ್ತಿದೆ. ಕೆಟ್ಟ ಶಕ್ತಿಗಳು, ವಾಸ್ತುಗಳಲ್ಲಿ ಆದ ಬದಲಾವಣೆಗಳು, ದೈವೀ ಕಣಗಳು ಈ ವಿಷಯಗಳ ಬಗ್ಗೆ ನೂರಾರು ಧ್ವನಿಚಿತ್ರಸುರುಳಿಗಳನ್ನು ಸನಾತನವು ನಿರ್ಮಿಸಿದೆ. ಈಗ ಸನಾತನ ಸಂಸ್ಥೆಯ ಈ ಸಂಶೋಧನಾಕಾರ್ಯಕ್ಕೆ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಹಾಯವೂ ದೊರೆಯುತ್ತ್ತಿದೆ. ಈ ಸಂಶೋಧನೆಯನ್ನು ಈಗ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಜಾಲತಾಣದಲ್ಲಿ ಪ್ರಕಾಶಿಸಲಾಗಿದೆ. ಯಾವುದಾದರೊಂದು ಆಧ್ಯಾತ್ಮಿಕ ಸಂಸ್ಥೆಯು ಈ ರೀತಿಯಲ್ಲಿ ವೈಜ್ಞಾನಿಕ ಉಪಕರಣಗಳ ಆಧಾರದಲ್ಲಿ ಧಾರ್ಮಿಕ ಅಥವಾ ಆಧ್ಯಾತ್ಮಿಕ ಘಟನೆಗಳ ಸಂಶೋಧನೆಯನ್ನು ಮಾಡುವುದು ಅದ್ವಿತೀಯವಾಗಿದೆ. ಸನಾತನವು ಬರುವ ಹಲವಾರು ಪೀಳಿಗೆಗಳಿಗಾಗಿ ಈ ಅಮೂಲ್ಯವಾದ ಸಂಪತ್ತನ್ನು ಸಂಗ್ರಹಿಸಿಡುತ್ತಿದೆ. ಇದಕ್ಕಾಗಿ ಸಮಾಜವು ಸನಾತನಕ್ಕೆ ಚಿರಋಣಿಯಾಗಿರಲಿದೆ.
ಸಂಕಲನಕಾರರು : ಸದ್ಗುರು (ಸೌ.) ಅಂಜಲಿ ಗಾಡಗೀಳ

ಸನಾತನದ ಸ್ಥಾಪನೆಯ ಸಾಕ್ಷೀದಾರರಾಗಿರುವ ಸಾಧಕರಿಗೆ ಸೂಚನೆ !

ಈಗಿನ ಪೀಳಿಗೆಗೆ ಸನಾತನದ ಇತಿಹಾಸ ತಿಳಿಯಲು 
ಸನಾತನದ ಕಾರ್ಯಾರಂಭದ ಅನುಭವವನ್ನು ತಿಳಿಸಿರಿ !
ಸನಾತನದ ಕಾರ್ಯವನ್ನು ಸ್ಥಾಪಿಸಲು ಪ್ರಾರಂಭದ ಕೆಲವು ವರ್ಷಗಳಲ್ಲಿ ಸಾಧಕರು ಬಹಳ ಕಷ್ಟ ಪಟ್ಟಿದ್ದಾರೆ. ಕೆಲವು ಸಾಧಕರು ಸಮಾಜದ ಕೋಪವನ್ನು ಸಹ ಎದುರಿಸಬೇಕಾಯಿತು. ಕೆಲವು ಸಾಧಕರಿಗೆ ಒಳ್ಳೆಯ ಕಾರ್ಯವನ್ನು ಮಾಡುತ್ತಿರುವ ಕುರಿತು ಸಮಾಜದಿಂದ ಶ್ಲಾಘನೆಯೂ ದೊರೆಯಿತು. ಈಗ ಸಮಾಜಕ್ಕೆ ಸನಾತನದ ಕಾರ್ಯ, ಸಾಧಕರ ಕುರಿತು ತಿಳಿದಿದೆ. ಕಾರ್ಯದ ಪ್ರಾರಂಭದಲ್ಲಿ ಸಮಾಜಕ್ಕೆ ಸನಾತನ, ಸಾಧನೆ ಮತ್ತು ಗುರುಕೃಪಾಯೋಗಾನುಸಾರ ಸಾಧನೆ ಮುಂತಾದ ವಿಷಯಗಳು ತಿಳಿಯದೇ ಇದ್ದ ಕಾರಣ ಪ್ರಸಾರ ಮಾಡುವುದು, ಸಮಾಜವನ್ನು ಸನಾತನದ ಕಾರ್ಯದೊಂದಿಗೆ ಸಮಾವೇಶಗೊಳಿಸುವುದು ಮತ್ತು ಅವರ ಮನಸ್ಸಿನಲ್ಲಿ ಸನಾತನದ ಕುರಿತು ವಿಶ್ವಾಸ ನಿರ್ಮಾಣ ಮಾಡುವುದು ಇತ್ಯಾದಿ ಸೇವೆ ಮಾಡಲು ಅನೇಕ ಸಾಧಕರು ಕಷ್ಟಪಟ್ಟಿದ್ದಾರೆ.

ವಾಚಕವೃದ್ಧಿ ಅಭಿಯಾನದ ನಿಮಿತ್ತ...

ಸಾಧಕರಿಗೆ ಸೂಚನೆ ಮತ್ತು ವಾಚಕರಿಗೆ, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ನಮ್ರ ವಿನಂತಿ !
ನಮ್ಮ ಅಂತರಂಗದಲ್ಲಿರುವ ರಾಷ್ಟ್ರ ಮತ್ತು ಧರ್ಮಪ್ರೇಮದ ಜ್ಯೋತಿಯನ್ನು ಪ್ರಜ್ವಲಿತಗೊಳಿಸುವ ನಿಯತಕಾಲಿಕೆ ಸನಾತನ ಪ್ರಭಾತವನ್ನು ಅನೇಕ ಜಿಜ್ಞಾಸುಗಳ ವರೆಗೆ ತಲುಪಿಸಲು
ಶ್ರೀ. ದಿನೇಶ ಎಮ್.ಪಿ. ಯವರ ಆದರ್ಶವನ್ನು ಮುಂದಿಟ್ಟು ಪ್ರಯತ್ನಿಸಿರಿ !
ಮಂಗಳೂರಿನ ಶ್ರೀ. ದಿನೇಶ ಎಮ್. ಪಿ.ಯವರು ಓರ್ವ ಉದ್ಯಮಿಯಾಗಿದ್ದಾರೆ. ಕಳೆದ ೪ ವರ್ಷ ಗಳಿಂದ ಅವರು ಸನಾತನ ಸಂಸ್ಥೆಯ ಕಾರ್ಯದಲ್ಲಿ ಸಕ್ರಿಯವಾಗಿ ಸಹಭಾಗಿಯಾಗುತ್ತಿದ್ದಾರೆ. ಅವರು ಕೆಲವು ದಿನಗಳ ಹಿಂದೆ ತಮ್ಮ ವ್ಯವಹಾರವನ್ನು ನಡೆಸಿಕೊಂಡು ಸಾಪ್ತಾಹಿಕ ಸನಾತನ ಪ್ರಭಾತದ ೧ ಸಾವಿರ ಚಂದಾದಾರರನ್ನಾಗಿಸುವ ಧ್ಯೇಯವನ್ನು ಇಟ್ಟುಕೊಂಡಿದ್ದಾರೆ.

ಧರ್ಮ ಪ್ರಚಾರಕ್ಕೆ ಸಂಬಂಧಿಸಿದ ಪ್ರಚಾರ ಸಾಮಗ್ರಿಗಳ ಆಧ್ಯಾತ್ಮಿಕ ಮಟ್ಟದಲ್ಲಿ ಅಧ್ಯಯನ ಮತ್ತು ಪ್ರಕಟಣೆ

೮ ಭಾಷೆಗಳಲ್ಲಿ ಮುದ್ರಿಸಲಾಗುವ ‘ಸನಾತನ ಪಂಚಾಂಗ, ‘ಸಂಸ್ಕಾರ ನೋಟ್‌ಬುಕ್ (ವಹಿ)’, ಚಿತ್ರಕಲೆಯ ನೋಟ್‌ಬುಕ್, ಧರ್ಮಶಿಕ್ಷಣ ನೀಡುವ ಕರಪತ್ರಗಳು, ಧರ್ಮಶಿಕ್ಷಣ ಹಾಗೂ ರಾಷ್ಟ್ರ-ಧರ್ಮ ಜಾಗೃತಿಯ ಫಲಕಗಳು, ಸನಾತನದ ಕಾರ್ಯಕ್ಕೆ ಸಂಬಂಧಿಸಿದ ಮಾಹಿತಿಯಿರುವ ಕರಪತ್ರಗಳು ಮುಂತಾದ ಧರ್ಮ ಪ್ರಚಾರಕ್ಕೆ ಸಂಬಂಧಿಸಿದ ಪ್ರಚಾರ ಸಾಮಗ್ರಿಗಳಲ್ಲಿರುವ ವೈಯಕ್ತಿಕ ಬರಹಗಳು, ಹಾಗೆಯೇ ಅವುಗಳನ್ನು ಸಾತ್ತ್ವಿಕ ವಾಗಿ ಪ್ರದರ್ಶಿಸುವ ದೃಷ್ಟಿಯಿಂದ ಅದರಲ್ಲಿರುವ ಚಿತ್ರಗಳು ಹಾಗೂ ಬಣ್ಣ ಗಳ ಸಂಯೋಜನೆಯನ್ನು ಸ್ಥೂಲ ಮತ್ತು ಸೂಕ್ಷ್ಮ ಮಟ್ಟದಲ್ಲಿಯೂ ಅಧ್ಯಯನ ಮಾಡಲಾಗುತ್ತದೆ.

ಹಿಂದೂ ಧರ್ಮದ ಪುನರುತ್ಥಾನ ಮತ್ತು ರಾಷ್ಟ್ರದ ನವನಿರ್ಮಾಣಕ್ಕಾಗಿ ಅವಿರತವಾಗಿ ಶ್ರಮಿಸುತ್ತಿರುವ ಸನಾತನ ಸಂಸ್ಥೆ !

. ಸನಾತನದ ಸ್ಥಾಪನೆ ಮತ್ತು ಉದ್ದೇಶ
.ಪೂ. ಡಾ. ಜಯಂತ ಬಾಳಾಜಿ ಆಠವಲೆ ಇವರು ತಮ್ಮ ಸದ್ಗುರು ಪ.ಪೂ. ಭಕ್ತರಾಜ ಮಹಾರಾಜರ ಕೃಪಾಶೀರ್ವಾದದಿಂದ ಸನಾತನ ಸಂಸ್ಥೆಯನ್ನು ಸ್ಥಾಪಿಸಿದರು. ಜಿಜ್ಞಾಸುಗಳಿಗೆ ಅಧ್ಯಾತ್ಮವನ್ನು ಶಾಸ್ತ್ರೀಯ ಪರಿಭಾಷೆಯಲ್ಲಿ ಪರಿಚಯಿಸುವುದು, ಸಾಧಕರಿಗೆ ವೈಯಕ್ತಿಕ ಸಾಧನೆಯ ವಿಷಯದಲ್ಲಿ ಮಾರ್ಗದರ್ಶನ ಮಾಡುವುದು ಮತ್ತು ಸಮಾಜ ಸಹಾಯ, ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಯ ಮೂಲಕ ಧರ್ಮಾಧಾರಿತ ಸುರಾಜ್ಯವನ್ನು (ಪ್ರತಿಯೊಂದು ಜೀವಿಯ ಆಧ್ಯಾತ್ಮಿಕ ಉನ್ನತಿಗೆ ಸಹಾಯಕವಾಗಿರುವ ರಾಜ್ಯ) ಸ್ಥಾಪಿಸುವುದು, ಇದೇ ಸಂಸ್ಥೆಯ ಕಾರ್ಯದ ಮುಖ್ಯ ಉದ್ದೇಶವಾಗಿದೆ.

ಎಲ್ಲರಿಗೂ ಕೃತಜ್ಞತೆಗಳು !

ಈಶ್ವರನು ಸನಾತನಕ್ಕೆ ಅಪಾರವಾಗಿ ಕೊಡುತ್ತಿದ್ದಾನೆ. .ಪೂ. ಭಕ್ತರಾಜ ಮಹಾರಾಜರ ಕೃಪಾಶೀರ್ವಾದದಿಂದ ಪ್ರಾರಂಭವಾಗಿರುವ ಸನಾತನದ ಕಾರ್ಯವು ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿದೆ. ಈ ೨೫ ವರ್ಷಗಳಲ್ಲಿ ಅನೇಕ ಸಂತರು ಸನಾತನದ ಮೇಲೆ ತಮ್ಮ ಕೃಪಾಛತ್ರವನ್ನು ಹಿಡಿದರು.

ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !

ಫಲಕ ಪ್ರಸಿದ್ಧಿಗಾಗಿ
. ಹಿಂದೂಗಳು ಬಹುಸಂಖ್ಯೆಯಲ್ಲಿರುವ ಭಾರತದಲ್ಲಿ ಹಿಂದೂಗಳೇ ಅಸುರಕ್ಷಿತರು !
ಕಾಶ್ಮೀರದ ಪೂಂಛನ್ ಬೂಢಾ ಅಮರನಾಥ ಯಾತ್ರೆಯ ಮೇಲೆ ಆಗಸ್ಟ್ ೧೩ ರಂದು ಜಿಹಾದಿ ಉಗ್ರರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ೧೪ ಕ್ಕಿಂತ ಅಧಿಕ ಶಿವಭಕ್ತರು ಗಾಯಗೊಂಡರು. ಇಲ್ಲಿಯ ದಶನಾಮಿ ಆಖಾಡಾದ ಪ್ರವೇಶದ್ವಾರದ ಸಮೀಪ ಈ ಗ್ರೆನೇಡ್ ಎಸೆಯಲಾಯಿತು. ಗಾಯಗೊಂಡವರ ಸ್ಥಿತಿ ಚಿಂತಾಜನಕವಾಗಿದೆ.
. ಕಾಶ್ಮೀರದಲ್ಲಿ ಹಿಂದೂಗಳ ಸಂಭಾವ್ಯ ವಂಶವಿಚ್ಛೇದನೆಯನ್ನು ಯಾರು ತಡೆಯುವರು ?
ಕಾಶ್ಮೀರ ಕಣಿವೆಯಲ್ಲಿ ಕಲ್ಲು ಎಸೆಯುವವರ ಕುರಿತು ಮಾತನಾಡಿದ ಪ್ರಧಾನಿ ಮೋದಿಯವರು ನಮ್ಮ ಬಗ್ಗೆ ಒಂದು ಮಾತೂ ಆಡದ ಕಾರಣ ನಮಗೆ ನಿರಾಶೆಯಾಯಿತು’, ಎಂದು ಕಾಶ್ಮೀರದಲ್ಲಿ ನೆಲೆಸಿದ ೭೦೦ ಹಿಂದೂ ಕಾರ್ಮಿಕರು ಹೇಳಿದರು. ಕೊಲೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದರಿಂದ ಅವರು ಕಾಶ್ಮೀರದಿಂದ ಜಮ್ಮುವಿಗೆ ಪಲಾಯನಗೊಂಡಿದ್ದಾರೆ.

ಸಂಸ್ಕೃತ ದಿನ

ಶ್ರಾವಣ ಹುಣ್ಣಿಮೆ (೧೮.೮.೨೦೧೬)


ಸಂತ ಜ್ಞಾನೇಶ್ವರ ಜಯಂತಿ

ಶ್ರಾವಣ ಕೃಷ್ಣ ಪಕ್ಷ ಸಪ್ತಮಿ (೨೪.೮.೨೦೧೬)

ಈ ನಿಮಿತ್ತ ಇವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು

ಸಿದ್ಧಾರೂಢ ಸ್ವಾಮಿಗಳ ಪುಣ್ಯತಿಥಿ

ಶ್ರಾವಣ ಕೃಷ್ಣ ಪಕ್ಷ ಪ್ರತಿಪದೆ (೧೯..೨೦೧೬)

ಈ ನಿಮಿತ್ತ ಇವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು

ಶ್ರೀಕೃಷ್ಣಜನ್ಮಾಷ್ಟಮಿ (೨೪.೮.೨೦೧೬)

 ಮೊಸರು ಕುಡಿಕೆ (ಆಗಸ್ಟ್ ೨೫)
..................................................

ಶ್ರೀಕೃಷ್ಣಜನ್ಮಾಷ್ಟಮಿ ವ್ರತ
ಈ ವ್ರತವನ್ನು ಅಷ್ಟಮಿಯಂದು ಮಾಡಲಾಗುತ್ತದೆ ಮತ್ತು ಎರಡನೆಯ ದಿನ ಅರ್ಥಾತ್ ಶ್ರಾವಣ ಕೃಷ್ಣ ನವಮಿಯಂದು ಪಾರಾಯಣ ಮಾಡಿ ವ್ರತವನ್ನು ಸಂಪನ್ನ ಗೊಳಿಸುತ್ತಾರೆ. ಈ ವ್ರತವನ್ನು ಮಕ್ಕಳು, ಯುವಕರು, ವೃದ್ಧರು, ಸ್ತ್ರೀ-ಪುರುಷರು ಎಲ್ಲರೂ ಮಾಡಬಹುದು. ಪಾಪನಾಶ, ಸೌಖ್ಯ ವೃದ್ಧಿ, ಸಂತತಿ-ಸಂಪತ್ತಿ ಮತ್ತು ವೈಕುಂಠ ಪ್ರಾಪ್ತಿಯು ಈ ವ್ರತದ ಫಲವಾಗಿದೆ.
ಶ್ರೀಕೃಷ್ಣಜನ್ಮಾಷ್ಟಮಿಯ ವ್ರತಕ್ಕೆ ಸಂಬಂಧಿಸಿದ ಉಪವಾಸ
ಈ ದಿನ ದಿನವಿಡೀ ಉಪವಾಸವನ್ನು ಮಾಡ ಲಾಗುತ್ತದೆ. ನಿರಾಹಾರ ಉಪವಾಸವು ಸಾಧ್ಯವಿಲ್ಲದಿದ್ದರೆ ಫಲಾಹಾರ ಮಾಡಬಹುದು. ಇದಕ್ಕೆ ಒಂದು ದಿನ ಮುಂಚೆ ಅರ್ಥಾತ್ ಶ್ರಾವಣ ಕೃಷ್ಣ ಸಪ್ತಮಿಯಂದು ಅಂಶಾತ್ಮಕ ಭೋಜನವನ್ನು ಮಾಡುತ್ತಾರೆ.

ಪರಾತ್ಪರ ಗುರು ಡಾ. ಆಠವಲೆಯವರ ತೇಜಸ್ವಿ ವಿಚಾರಗಳು

ಹಿಂದೂ ಧರ್ಮದ ಮಹತ್ವ ತಿಳಿಯದಿರುವ ಸರ್ವಧರ್ಮ ಸಮಭಾವಿ ಹಿಂದೂ ಸಂತರು !
‘ಕೇವಲ ಹಿಂದೂ ಸಂತರೇ ‘ಸರ್ವಧರ್ಮಸಮಭಾವ’ ಈ ಪದ ವನ್ನು ಬಳಸುತ್ತಾರೆ. ಇತರ ಯಾವುದೇ ಧರ್ಮದಲ್ಲಿ ಅಥವಾ ಪಂಥದಲ್ಲಿ ಈ ಪದವನ್ನು ಬಳಸುವುದಿಲ್ಲ. ಪ್ರತಿಯೊಬ್ಬರು ‘ನಮ್ಮದೇ ಧರ್ಮ ಅಥವಾ ಪಂಥ ಸರ್ವಶ್ರೇಷ್ಠವಾಗಿದೆ’ ಎಂದು ಹೇಳುತ್ತಾರೆ.’ - (ಪರಾತ್ಪರ ಗುರು) ಡಾ. ಆಠವಲೆ

ಪ್ರಧಾನಮಂತ್ರಿ ಮೋದಿಯವರು ಗೋರಕ್ಷಕರ ವಿಷಯದಲ್ಲಿ ನೀಡಿದ ಹೇಳಿಕೆ ಪ್ರಕರಣ

ಭಾಜಪ ೨೦೧೯ ರ ಚುನಾವಣೆಯ ಸಮಯದಲ್ಲಿ ಇದರ ಬೆಲೆ ತೆರಬೇಕಾಗುತ್ತದೆ !
- ವಿ.ಹಿಂ.ಪ.ನ ಎಚ್ಚರಿಕೆ
ನವ ದೆಹಲಿ : ಪ್ರಧಾನಿಯವರು ಗೋರಕ್ಷಕರ ಬಗ್ಗೆ ನೀಡಿದ ಹೇಳಿಕೆಯು ಗೋರಕ್ಷಕರಿಗೆ ಅವಮಾನ ಕಾರಿಯಾಗಿದೆ, ಇದರಿಂದ ಅವರ ಭಾವನೆಗೆ ಧಕ್ಕೆ ಯಾಗಿದೆ. ಭಾಜಪವು ೨೦೧೯ ರ ಚುನಾವಣೆಯಲ್ಲಿ ಈ ಹೇಳಿಕೆಗಾಗಿ ಬೆಲೆ ತೆರಬೇಕಾಗುತ್ತದೆ, ಎಂದು ವಿಶ್ವ ಹಿಂದೂ ಪರಿಷತ್ ಎಚ್ಚರಿಸಿದೆ. ಇದೇ ವೇಳೆ ಭಾರತಾದ್ಯಂತ ಗೋ ಹತ್ಯೆಯನ್ನು ನಿಷೇಧಿಸಬೇಕು ಎಂಬ ಬೇಡಿಕೆಯು ವಿ.ಹಿಂ.ಪ.ನ ಗುಜರಾತ್ ಬ್ರಜ ಭಾಗದಲ್ಲಿನ ಉಪಾಧ್ಯಕ್ಷರಾದ ಸುನೀಲ ಪರಾಶರರವರು ಒಂದು ಪತ್ರಿಕಾಪ್ರಕಟಣೆ ಮೂಲಕ ತಿಳಿಸುವ ಜೊತೆಗೆ ದೇಶದಲ್ಲಿ ಪ್ರತಿವರ್ಷ ೧ ಲಕ್ಷ ಗೋವುಗಳನ್ನು ಕೊಲ್ಲುವ ಕಸಾಯಿಗಳಿಗೆ ಗೂಂಡಾ ಎಂದು ಹೇಳುವುದಿಲ್ಲ. ಅದರೆ ಗೀತಾ ರಾಮಭೈಯ್ಯಾರಂತಹ ಗೋರಕ್ಷಕರಿಗೆ ಗೂಂಡಾ ಎಂದು ಹೇಳಲಾಗುತ್ತದೆ. (ಕೆಲವು ವರ್ಷಗಳ ಹಿಂದೆ ರಾಮಭೈಯ್ಯಾ ಇವರನ್ನು ಕರ್ಣಾವತಿಯಲ್ಲಿ ಹತ್ಯೆ ಮಾಡಲಾಗಿದೆ) ಇದರಿಂದಲೇ ನಿಮ್ಮ(ಭಾಜಪ) ಭೂಮಿಕೆಯಲ್ಲಾದ ಬದಲಾವಣೆ ಕಾಣುತ್ತಿದೆ. ಆದರೆ ಹಿಂದೂಗಳಿಗೆ ಇದು ಅರ್ಥ ಆಗಲಿಲ್ಲ. ಗೋವು ಪ್ಲಾಸ್ಟಿಕ್ ತಿನ್ನುತ್ತದೆ, ಇದರ ಬಗ್ಗೆ ಭಾಜಪ ಸರಕಾರದ ಮುಖ್ಯಮಂತ್ರಿಗಳು ಏನು ಮಾಡಿದ್ದಾರೆ ? ಶೇ. ೮೦ ರಷ್ಟು ಗೋರಕ್ಷಕರು ನಕಲಿಯಾಗಿದ್ದರೆ, ನಿಮ್ಮ ಗುಜರಾತಿನಲ್ಲಿ ೧೦ ವರ್ಷದ ಮುಖ್ಯಮಂತ್ರಿಯ ಕಾಲಾವಧಿಯಲ್ಲಿ ಕಾನೂನಿನ ಅಡಿಯಲ್ಲಿ ಎಷ್ಟು ಜನರಿಗೆ ಶಿಕ್ಷೆಯನ್ನು ಕೊಟ್ಟಿದ್ದೀರಿ ? ಗೋರಕ್ಷಣೆಗಾಗಿ ಕಾನೂನು ಏಕೆ ತರುತ್ತಿಲ್ಲ ?

ಕೇವಲ ಡಾ. ಝಾಕೀರ್ ನಾಯಿಕ್‌ರಷ್ಟೇ ಅಲ್ಲ, ಇತರ ೧೪ ಇಸ್ಲಾಮೀ ವಿಚಾರವಂತರೂ ಐಸಿಸ್ ಭಯೋತ್ಪಾದನೆಯ ಪ್ರೇರಣಾಸ್ಥಾನ !

ಸರಕಾರವು ಇಸ್ಲಾಮೀ ವಿಚಾರವಂತರು ಉಗ್ರರ ಪ್ರೇರಣಾಸ್ಥಾನವಾಗುವಂತೆ ಅದೇನು
ಪ್ರಬೋಧನೆ ನೀಡುತ್ತಾರೆ ಎನ್ನುವುದನ್ನು ವಿಚಾರಣೆ ಮಾಡಿ ಅದನ್ನು ಜನರೆದುರು ಮಂಡಿಸುವುದೇ ?
ನವ ದೆಹಲಿ : ಐಸಿಸ್ ಉಗ್ರರು ಡಾ. ಝಾಕೀರ್ ನಾಯಿಕ್‌ರನ್ನು ಹೊರತುಪಡಿಸಿ ಇತರ ೧೪ ಮುಸ್ಲಿಂ ವಿಚಾರವಂತರಿಂದಲೂ ಪ್ರೇರೇಪಿಸ ಲ್ಪಟ್ಟಿದ್ದಾರೆನ್ನುವ ವಿಷಯವನ್ನು ರಾಷ್ಟ್ರೀಯ ತನಿಖಾ ದಳವು ನ್ಯಾಯಾಲಯಕ್ಕೆ ಸಲ್ಲಿಸಿದ ತನ್ನ ಆರೋಪಪತ್ರದಲ್ಲಿ ವಿವರಿಸಿದೆ. ಈ ೧೪ ಜನರ ಪಟ್ಟಿಯನ್ನು ಇದರಲ್ಲಿ ನೀಡಲಾಗಿದೆ. ಐಸಿಸ್‌ನ ಉಗ್ರರು ಈ ವಿಚಾರ ವಂತರ ಪ್ರಚೋದನಾಕಾರಿ ಹಾಗೂ ಆಕ್ಷೇಪಾರ್ಹ ವಿಡಿಯೋಗಳನ್ನು ನೋಡುತ್ತಿರುತ್ತಾರೆ. ಈ ವಿಚಾರವಂತರು ಕೆನಡಾ, ಅಮೇರಿಕಾ, ಬ್ರಿಟನ್, ಝಿಂಬಾಬ್ವೆ ಹಾಗೂ ಆಸ್ಟ್ರೇಲಿಯಾಗಳಲ್ಲಿ ವಾಸಿಸುವವರಾಗಿದ್ದಾರೆ. ಕೆನಡಾದಲ್ಲಿರುವ ಮಾಜಿದ ಮಹಮೂದ, ಅಮೇರಿಕಾದ ಯಾಸಿರ ಕಾದಿ, ಯುಸೂಫ ಎಸ್ತೇಸ, ಹಮಜಾ ಯುಸೂಫ ಹಾಗೂ ಅಹಮದ ಮೂಸಾ; ಬ್ರಿಟನ್ನಿನ ಅಂಜಿಮ ಚೌಧರಿ, ಹಮಜಾ ಆಂದ್ರಿಯಾಸ, ಇಮರಾನ ಮನಸೂರ, ಮಿಜಾನೂರ ರಹಮಾನ ಹಾಗೂ ಅಬೂ ವಾಲಿದ; ಝಿಂಬಾಬ್ವೆಯ ಮುಫ್ತಿ ಮೆಂಕ ಮತ್ತು ಆಸ್ಟ್ರೇಲಿಯಾದ ಮೂಸಾ ಸೆರಂಟೋನಿಯೋ, ಶೇಖ ಫೈಜ ಮಹಮ್ಮದ ಹಾಗೂ ಉಮರ ಅಲ್ ಬನ್ನಾ ಇವರೆಲ್ಲ ಅದರಲ್ಲಿ ಸೇರ್ಪಡೆಯಾಗಿದ್ದಾರೆ.

ಪ್ರಗತಿಪರರೇ, ಹಿಂದೂಗಳ ಧ್ವನಿ ಅಡಗಿಸಲು ಪ್ರಯತ್ನಿಸಿದರೆ ತೀವ್ರ ಪ್ರತಿಕ್ರಿಯೆ ಏಳುವುದು ! - ನ್ಯಾಯವಾದಿ ಸಂಜೀವ ಪುನಾಳೆಕರ, ಹಿಂದೂ ವಿಧಿಜ್ಞ ಪರಿಷತ್ತು

ನ್ಯಾಯವಾದಿ ಪುನಾಳೆಕರರ ಸನ್ಮಾನ ನಡೆಯುತ್ತಿರುವಾಗ ಹಿಂದುತ್ವನಿಷ್ಠರು ಸ್ವಯಂಸ್ಫೂರ್ತಿಯಿಂದ ಎದ್ದು ನಿಂತ ಕ್ಷಣ !
ಸನಾತನ ಸಂಸ್ಥೆಯನ್ನು ಬೆಂಬಲಿಸಿ ಆಯೋಜಿಸಿದ್ದ ಹಿಂದೂಐಕ್ಯತಾ ಸಮಾವೇಶದ 
ಮಾಧ್ಯಮದಿಂದ ೧೫೦ ಹಿಂದುತ್ವನಿಷ್ಠ ಸಂಘಟನೆಗಳ ಘಂಟಾಘೋಷ!
ಕೊಲ್ಹಾಪೂರ : ಇಂದಿನ ಸಭೆಯು ಕೌರವ-ಪಾಂಡವರ ಕಾಲದ ಯುದ್ಧ ಪ್ರಾರಂಭವಾಗುವ ಮೊದಲು ದ್ರುಪದ ರಾಜನು ಕರೆದಿದ್ದ ಸಭೆಯಂತಿದೆ. ಇದು ಕುರುಕ್ಷೇತ್ರವಾಗಿದೆ. ಡಾ. ಧಾಬೋಳಕರ, ಕಾ. ಪಾನ್ಸರೆ ಹಾಗೂ ಕಲ್ಬುರ್ಗಿ ಇವರು ಧರ್ಮದ ವಿರುದ್ಧ ಸಾಕಷ್ಟು ಕೆಂಡ ಕಾರಿದ್ದಾರೆ. ಸಮಾಜ ಸೇವೆ ಮಾಡುತ್ತಿದ್ದ ಡಾ. ವೀರೇಂದ್ರ ಸಿಂಹ ತಾವಡೆಯಂತಹ ಸನಾತನದ ಅಮಾಯಕ ಸಾಧಕನನ್ನು ಬಂಧಿಸಲಾಗಿದೆ. ಇವರು ಪ್ರಗತಿಪರರಲ್ಲ, ಭೋಗವಾದಿಗಳಾಗಿದ್ದಾರೆ. ಇದು ಸಾಮಾಜಿಕ ಯುದ್ಧವೇ ಆಗಿದೆ. ಡಾ. ಧಾಬೋಳಕರರ ಸಂಘಟನೆಯ ಅನೇಕ ಭ್ರಷ್ಟಾಚಾರಗಳನ್ನು ನಾವು ಬಯಲಿಗೆಳದಿದ್ದೇವೆ. ಈ ಕಾರಣದಿಂದಲೇ ಸನಾತನ ಸಂಸ್ಥೆಯ ಮೇಲೆ ಪ್ರಗತಿಪರ ಸಂಘಟನೆಗಳು ಆರೋಪ ವನ್ನು ಹೊರಿಸಿ, ಸಂಸ್ಥೆಯನ್ನು ನಿಷೇಧಿಸುವಂತೆ ಮನವಿ ಸಲ್ಲಿಸುತ್ತಿವೆ.

ಮರುಳಾಗಿಸುವ ಸಮಾಜಘಾತಕ ಜಾಹೀರಾತುಗಳು !

ವಿಪ್ಲವ ಠಾಕೂರ್ ಮತ್ತು ರೇಣುಕಾ ಚೌಧರಿ ಈ ಇಬ್ಬರು ಕಾಂಗ್ರೆಸ್ಸಿನ ಮಹಿಳಾ ಸಂಸದರು ಇತ್ತೀಚೆಗಷ್ಟೇ ರಾಜ್ಯ ಸಭೆಯಲ್ಲಿ ಚರ್ಮವನ್ನು ಬೆಳ್ಳಗೆ ಮಾಡಲು ಉಪಯೋಗಿಸುವ ಕ್ರೀಮ್‌ನ ಜಾಹೀರಾತುಗಳ ವಿಷಯವನ್ನೆತ್ತಿದರು. ಇಂತಹ ಜಾಹೀರಾತುಗಳು ಮಹಿಳೆಯರಲ್ಲಿ ಕೀಳರಿಮೆಯನ್ನುಂಟು ಮಾಡುತ್ತದೆ, ಆದ್ದರಿಂದ ಇಂತಹ ಜಾಹೀರಾತುಗಳು ಮತ್ತು ಉತ್ಪಾದನೆಗಳ ಮೇಲೆ ನಿರ್ಬಂಧ ಹೇರಬೇಕೆಂದು ಅವರು ಹೇಳಿದರು. ಜೀವನದಲ್ಲಿ ಯಶಸ್ವಿಯಾಗಲು ಬಣ್ಣ ಅಲ್ಲ, ಬುದ್ಧಿಯ ಅವಶ್ಯಕತೆಯಿದೆ ಎಂದು ಸಂಸದೆ ರೇಣುಕಾ ಚೌಧರಿ ಹೇಳಿದರು, ಓಬಾಮಾ ಮತ್ತು ಅವರ ಪತ್ನಿ ಅದಕ್ಕೆ ಉತ್ತಮವಾದ ಉದಾಹರಣೆಯಾಗಿದ್ದಾರೆ. ಇಂತಹ ಜಾಹೀರಾತುಗಳಿಂದ ಮಹಿಳೆಯರ ಗೌರವದ ಬಗ್ಗೆ ವಿಚಾರವಾಗುವುದಿಲ್ಲ ಎಂದು ಅತ್ಯಂತ ಯೋಗ್ಯವಾದ ವಿಷಯವನ್ನು ಅವರು ಎತ್ತಿ ಹಿಡಿದರು.

ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !

ಸೂಚನೆ : ಈ ಮಾಹಿತಿಯನ್ನು ತಮ್ಮ ಸ್ಥಳೀಯ ಪರಿಸ್ಥಿತಿಗನುಸಾರ ತಾರತಮ್ಯದಿಂದ ಬರೆಯಬೇಕು.
ಫಲಕ ಪ್ರಸಿದ್ಧಿಗಾಗಿ
೧. ಜಗತ್ತಿನಾದ್ಯಂತ ಅಸುರಕ್ಷಿತ ಹಿಂದೂಗಳ ದೇವಸ್ಥಾನಗಳು !
ಮಲೇಷ್ಯಾದಲ್ಲಿ ದೇವಸ್ಥಾನಗಳ ಮೇಲೆ ಹೆಚ್ಚುತ್ತಿರುವ ದಾಳಿಯ ಘಟನೆಗಳ ನಂತರ ಈಗ ಮೆಕ್ಸಿಕೊ ದೇಶದ ಹಿದಾಲ್ಗೊ ರಾಜ್ಯದ ಒಂದು ದೇವಸ್ಥಾನದ ಮೇಲೆ ಕೆಲವು ಮತಾಂಧರು ಇತ್ತೀಚೆಗೆ ದಾಳಿ ನಡೆಸಿದರು. ಈ ದಾಳಿಯಲ್ಲಿ ದೇವಸ್ಥಾನದಲ್ಲಿದ್ದ ವಿಗ್ರಹಗಳನ್ನು ಕಿತ್ತೊಗೆಯಲಾಯಿತು.
೨. ಡಾ. ಝಾಕೀರ್ ನಾಯಿಕರ ಮೇಲೆ ಈಗಲಾದರೂ ಕ್ರಮ ಕೈಗೊಳ್ಳಲಾಗುವುದೋ ?
ವಿವಿಧ ಆರೋಪಗಳಿಂದ ಬಂಧನದಲ್ಲಿರುವ ೫೫ ಜಿಹಾದಿ ಉಗ್ರರು ಡಾ. ಝಾಕೀರ್ ನಾಯಿಕ್ ಇವರಿಂದ ಪ್ರೇರಿತರಾಗಿದ್ದಾರೆಂದು ಹೇಳಿದ್ದಾರೆ. ಈ ಉಗ್ರರು ಸಿಮಿ, ಲಷ್ಕರ್- ಎ-ತೊಯಬಾ, ಇಂಡಿಯನ್ ಮುಜಾಹಿದ್ದೀನ್, ಇಸ್ಲಾಮಿಕ್ ಸ್ಟೇಟ್‌ಗಳಂತಹ ಸಂಘಟನೆಗಳಿಗಾಗಿ ಕೆಲಸ ಮಾಡುವಾಗ ಬಂಧಿಸಲ್ಪಟ್ಟಿದ್ದರು.